ETV Bharat / state

ಕುಕ್ಕರ್ ಬಾಂಬ್ ಸ್ಫೋಟ ಸ್ಥಳಕ್ಕೆ 6 ದಿನಗಳ ಬಳಿಕ ಸಚಿವ ಸುನಿಲ್​ ಕುಮಾರ್​ ಭೇಟಿ

ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಶಂಕಿತ ಉಗ್ರ ಶಾರೀಕ್ ಕೈಯಲ್ಲಿದ್ದ ಕುಕ್ಕರ್​ನಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಘಟನಾ ಸ್ಥಳಕ್ಕೆ ಇಂದು ಸಚಿವ ಸುನಿಲ್ ಕುಮಾರ್ ಭೇಟಿ ನೀಡಿದ್ದಾರೆ.

minister Sunil Kumar
ಘಟನಾ ಸ್ಥಳಕ್ಕೆ ಸುನಿಲ್​ ಕುಮಾರ್​ ಭೇಟಿ
author img

By

Published : Nov 25, 2022, 12:34 PM IST

ಮಂಗಳೂರು: ಗರೋಡಿಯಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಘಟನಾ ಸ್ಥಳಕ್ಕೆ 6 ದಿನಗಳ ಬಳಿಕ ಇಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಭೇಟಿ ಕೊಟ್ಟರು.

ನವೆಂಬರ್ 19 ರಂದು ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಶಂಕಿತ ಉಗ್ರ ಶಾರೀಕ್ ಕೈಯಲ್ಲಿದ್ದ ಕುಕ್ಕರ್​ನಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಘಟನೆಯ ಮರುದಿನವೇ ಎಡಿಜಿಪಿ ಅಲೋಕ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಆ ಬಳಿಕ ಡಿಜಿಪಿ ಪ್ರವೀಣ್ ಸೂದ್, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ ದ.ಕ ಜಿಲ್ಲೆಯ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಆರು ದಿನಗಳ ಬಳಿಕ ಶುಕ್ರವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕುಕ್ಕರ್ ಬಾಂಬ್ ಸ್ಫೋಟವಾದ ಘಟನಾ ಸ್ಥಳಕ್ಕೆ ಸುನಿಲ್​ ಕುಮಾರ್​ ಭೇಟಿ

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಘಟನೆಯ ತನಿಖೆಯನ್ನು ಎನ್​ಐಎಗೆ ಹಸ್ತಾಂತರ ಮಾಡಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯಲಿದೆ. ಪಿಎಫ್ಐ ನಿಷೇಧದ ಬಳಿಕ ಇಂಥ ಘಟನೆಗೆ ಸರ್ಕಾರ ಕಡಿವಾಣ ಹಾಕಿದ್ದು, ಸಂಚುಗಳನ್ನು ವಿಫಲಗೊಳಿಸುವ ಕೆಲಸ ಮಾಡಲಾಗುತ್ತಿದೆ. ಪಿಎಫ್ಐ ನಿಷೇಧ ಇದರ ಒಂದು ಭಾಗ ಎಂದರು.

ಕದ್ರಿ ದೇವಸ್ಥಾನ, ಕೆಲವು ಕಚೇರಿಗಳು, ಸಾರ್ವಜನಿಕ ಜಾಗ ಅವರ ಗುರಿಯಾಗಿತ್ತು. ಹಿಂದೂ ಸಮಾಜವನ್ನು ಟಾರ್ಗೆಟ್ ಮಾಡುವ ಅವರ ಕೆಲಸ ವಿಫಲವಾಗಿದೆ. ಇದರಲ್ಲಿ ಸ್ಥಳೀಯ ಮತ್ತು ರಾಷ್ಟ್ರೀಯ, ಅಂತಾರಾಷ್ಟ್ರೀಯ ಉಗ್ರರ ಕೈವಾಡ ಇದೆ ಎಂದು ಹೇಳಿದರು.

ಇದನ್ನೂ ಓದಿ: ಮಂಗಳೂರು ಸ್ಫೋಟ: ಹೊಣೆ ಹೊತ್ತ ಸಂಘಟನೆ ಪೋಸ್ಟರ್ ವೈರಲ್, ಸತ್ಯಾಸತ್ಯತೆ ಪರಿಶೀಲನೆ ಎಂದ ಎಡಿಜಿಪಿ

ಗೃಹಸಚಿವರು ಮೊದಲು ಬಂದು ಭೇಟಿ ನೀಡಿದ್ದಾರೆ. ಇಲ್ಲಿ ಎನ್​ಐಎ ಘಟಕ ಶೀಘ್ರದಲ್ಲೇ ಆಗುತ್ತದೆ. ಕೇಂದ್ರ ಸರಕಾರ ಅದನ್ನು ಪಾಸಿಟಿವ್ ಆಗಿ ಪರಿಶೀಲಿಸುತ್ತಾ ಇದೆ. ದೇಶದ ಯಾವುದೇ ಭಾಗದಲ್ಲಿ ಇಂತಹ ವಾತಾವರಣ ಸೃಷ್ಟಿಯಾಗಬಾರದು. ಗಾಯಾಳು ಆಟೋ ಚಾಲಕನ ಚಿಕಿತ್ಸೆಗೆ ಪಕ್ಷದ ವತಿಯಿಂದ ಹಣ ನೀಡಲಾಗುವುದು. ಅವರ ಕುಟುಂಬಕ್ಕೆ ಸರ್ಕಾರದ ಕಡೆಯಿಂದ ಸೂಕ್ತ ಪರಿಹಾರ ನೀಡಲಾಗುವುದು ಎಂದು ಸುನಿಲ್ ಕುಮಾರ್ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.