ಸುಳ್ಯ(ದಕ್ಷಿಣ ಕನ್ನಡ): ಕಸ್ತೂರಿ ರಂಗನ್ ವರದಿಯನ್ನು ಏಕಪಕ್ಷಿಯವಾಗಿ ತಿರಸ್ಕಾರ ಮಾಡಬೇಕು ಎಂದು ಸುಳ್ಯದಲ್ಲಿ ಕುಳಿತು ಫೋನ್ ಮೂಲಕ ಎಲ್ಲಾ ಸಚಿವರನ್ನು ರಿಮೋಟ್ ಕಂಟ್ರೋಲ್ ಮಾಡುವ ತಾಕತ್ತು ಇದ್ದರೆ ಅದು ಸಚಿವ ಅಂಗಾರ ಅವರಿಗೆ ಮಾತ್ರ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು. ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಸಹಕಾರಿ ಸಂಘದ ದೀನ್‌ದಯಾಳ್ ರೈತ ಸಭಾಭವನ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕ್ಯಾಬಿನೆಟ್ನಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆ ಪ್ರಸ್ತಾಪನೆ ಬಂತು. ಸಚಿವರಾದ ಅಂಗಾರ ಅವರು ಸುಳ್ಯದಿಂದಲೇ ಎಲ್ಲಾ ಮಂತ್ರಿಗಳಿಗೂ ಫೋನ್ ಮಾಡಿ ಈ ವರದಿಯನ್ನು ಎಲ್ಲರೂ ತಿರಸ್ಕಾರ ಮಾಡುವಂತೆ ಹೇಳಿದ್ದಾರೆ. ಅಂಗಾರ ಅವರು ಕ್ಯಾಬಿನೆಟ್ನಲ್ಲಿ ಯಾವುದೇ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ಆದರೆ ತಮ್ಮ ಕ್ಷೇತ್ರ ಸುಳ್ಯದ ವಿಚಾರ ಬಂದಾಗ ರುದ್ರಾವತಾರ ತಾಳುತ್ತಾರೆ ಎಂದರು.
ಆರು ಬಾರಿ ಶಾಸಕರಾಗಿ ಅವರನ್ನು ಪಡೆದಿರುವುದು ಇಲ್ಲಿನ ಜನತೆಯ ಭಾಗ್ಯ. ಸಚಿವ ಅಂಗಾರ ಅವರು ಅಪರೂಪದ ಮಂತ್ರಿಗಳಲ್ಲಿ ಅಪರೂಪದವರು. ಅವರು ಉತ್ತಮ ವ್ಯಕ್ತಿತ್ವದ ವ್ಯಕ್ತಿಯೂ ಹೌದು ಎಂದು ಅಂಗಾರರನ್ನು ಸಹಕಾರ ಸಚಿವರು ಹಾಡಿ ಹೊಗಳಿದರು.
ಇದನ್ನೂ ಓದಿ: ಬಿಜೆಪಿಯ ಆ ನಾಲ್ವರು ಪಾಪಿಗಳು ಸೇರಿ ಬಿಎಸ್ವೈ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದರು: ಬೇಳೂರು