ETV Bharat / state

ಶಿವಮೊಗ್ಗ ಘಟನೆ ಆಧರಿಸಿ ಬಿಜೆಪಿ ಕುರಿತು ಹೇಳಿಕೆ ನೀಡಿಲ್ಲ: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ಹೇಳಿದ್ದ ಹೇಳಿಕೆಗೆ ನಿನ್ನೆ ಮಂಗಳೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಸಚಿವ ರಾಮಲಿಂಗಾರೆಡ್ಡಿ
ಸಚಿವ ರಾಮಲಿಂಗಾರೆಡ್ಡಿ
author img

By ETV Bharat Karnataka Team

Published : Oct 5, 2023, 7:20 AM IST

Updated : Oct 5, 2023, 9:36 AM IST

ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

ಮಂಗಳೂರು: ಬಿಜೆಪಿಯು ವೇಷ ಮರೆಸಿ ಮಾತನಾಡುತ್ತದೆ ಎಂದು ಹಳೆಯ ಘಟನೆಗಳ ವಿಚಾರವನ್ನು ಉದ್ದೇಶಿಸಿ ಹೇಳಿದ್ದೇನೆ‌ ಹೊರತು ಶಿವಮೊಗ್ಗ ಘಟನೆಯನ್ನು ಆಧರಿಸಿ ಈ ರೀತಿ ಹೇಳಿಲ್ಲ. ಶಿವಮೊಗ್ಗದಲ್ಲಿ ಯಾರು ತಪ್ಪು ಮಾಡಿದ್ದರೂ ಅಂತಹ ಎಲ್ಲರ ಮೇಲೂ ಕ್ರಮ ತೆಗೆದುಕೊಳ್ಳಲಿ. ನಾನು ಹೇಳಿದ್ದು ಸಾಮಾನ್ಯವಾಗಿ ಬಿಜೆಪಿ ಅವರು ಯಾವ ರೀತಿ ಮಾಡುತ್ತಾರೆ ಎಂದು ಹೇಳಿದ್ದೇನಷ್ಟೇ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಈ ಹಿಂದಿನ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬುಧವಾರ ಮಾತನಾಡಿದ ಅವರು, ಆ ರೀತಿ ನಾನು ಹೇಳಿಕೆ ನೀಡಿಲ್ಲ, ಶಿವಮೊಗ್ಗದಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮವಾಗಬೇಕು. ಶಿವಮೊಗ್ಗ ಘಟನೆಯಲ್ಲಿ ಯಾರೇ ತಪ್ಪು ಮಾಡಿದರೂ ಕ್ರಮ ತೆಗೆದುಕೊಳ್ಳಬೇಕು. ಶಿವಮೊಗ್ಗ ಮತ್ತು ನನ್ನ ಹೇಳಿಕೆಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದರು.

ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ, ತಪ್ಪು ಮಾಡಿದವರ ಮೇಲೆ ಕ್ರಮವಾಗಬೇಕು. ಈ ಹಿಂದೆ ಪುಲಿಕೇಶಿ ನಗರ ಗಲಾಟೆಯಲ್ಲೂ ನಾನು ಅದನ್ನೇ ಹೇಳಿದ್ದೆ. ನಾನು ಗೃಹಮಂತ್ರಿ ಆಗಿದ್ದವನು, ನನಗೆ ಕಾನೂನು ಗೊತ್ತಿಲ್ವಾ? ಎಂದು ಪ್ರಶ್ನಿಸಿದ ಸಚಿವರು, ಕೆಲವು ಕೇಸ್​ಗಳಲ್ಲಿ ಅವುಗಳನ್ನು ಹಿಂಪಡೆಯುವಿಕೆ ಪ್ರಯತ್ನಗಳು ನಡೆಯುತ್ತವೆ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ಆ ತರಹದ್ದು ನೂರಾರು ಕೇಸ್​ಗಳನ್ನು ಬಿಜೆಪಿ ಸರ್ಕಾರ ಇದ್ದಾಗ ಹಿಂಪಡೆದಿದ್ದಾರೆ.

ಆದರೆ, ನಮ್ಮ ಸರ್ಕಾರ ರೈತರ ಹೋರಾಟ, ಕನ್ನಡ ಪರ ಚಳವಳಿ, ಮೇಕೆದಾಟು ಹೋರಾಟ ಇಂತಹ ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ ಮಾಡದಂತಹ, ಪೊಲೀಸರಿಗೆ ಹಲ್ಲೆ ಮಾಡದೇ ಇರುವ ಘಟನೆಗಳಿಗೆ ಸಂಬಂಧಿಸಿದಂತೆ ಆದ ಕೇಸ್​ಗಳನ್ನು ಹಿಂಪಡೆದಿದ್ದೇವೆ. ಆಸ್ತಿ ಪಾಸ್ತಿ ನಷ್ಟ ಆಗದೆ, ಪೊಲೀಸ್ ಮೇಲೆ ಹಲ್ಲೆಗಳಾಗದ ಕೇಸ್​ಗಳನ್ನು ಮಾತ್ರ ನಾವು ವಾಪಸು ಪಡೆಯಲು ಶಿಫಾರಸ್ಸು ಮಾಡುತ್ತೇವೆ‌. ಅದು ಬಿಟ್ಟರೆ ಕೋಮುಗಲಭೆ ಕೇಸ್​ಗಳಲ್ಲಿ ಶಿಫಾರಸು ಮಾಡಲ್ಲ ಎಂದು ಹೇಳಿದರು.

ಮುಂದುವರೆದು, ಶಾಸಕ ಚನ್ನಬಸಪ್ಪ ಹೇಳಿಕೆಗೆ ತಿರುಗೇಟು ನೀಡಿದ ರಾಮಲಿಂಗಾ ರೆಡ್ಡಿ, ನನಗೆ ತಾಕತ್ತು ಇದೆಯಾ ಇಲ್ಲವಾ ಎಂದು ಅವನಿಗೆ ಏನು ಗೊತ್ತು?. ನನಗೆ ಏಕವಚನದಲ್ಲಿ ಬೈಯ್ಯೋಕೆ ಗೊತ್ತಿಲ್ವಾ? ಆದರೆ ನಾನು ಬೈಯ್ಯೋಕೆ ಹೋಗಲ್ಲ. ಅವರ ಮಟ್ಟಕ್ಕೆ ನಾವು ಇಳಿಯೋಕೆ ಆಗಲ್ಲ ಎಂದು ಟಾಂಗ್​ ನೀಡಿದರು.

ಸಿಪಿ ಯೋಗೇಶ್ವರ್​ ರಾಜಕೀಯ ಪಥ ಬದಲಾವಣೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿ, ರಾಜಕೀಯದಲ್ಲಿ ಪಥ ಬದಲಾವಣೆ ಆಗುತ್ತೆ, ಯೋಗೇಶ್ವರ್​ ಅವರು ಬಹಳ ಪಕ್ಷ ಬದಲಾಯಿಸಿ ಬಿಟ್ಟಿದ್ದಾರೆ. ಅದಕ್ಕೇ ಅವರ ಹೇಳಿಕೆಗೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ. ನಮ್ಮ ಸರ್ಕಾರ ಇನ್ನು 4 ವರ್ಷ 8 ತಿಂಗಳು ಇರುತ್ತೆ. ಅವರು ವಿರೋಧ ಪಕ್ಷದಲ್ಲಿ ಇದ್ದಾರೆ. ಅವರು ವಿರೋಧ ಪಕ್ಷದಲ್ಲಿ ಇದ್ದುಕೊಂಡು ಸಲಹೆ ಸೂಚನೆಗಳನ್ನು ಕೊಟ್ಟು ಕೊಂಡು ಇರಲಿ ಎಂದರು.

ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ ಸಾವಿರಾರು ಕೋಮುಗಲಭೆ ಪ್ರಕರಣ ಕೈಬಿಡಲಾಗಿದೆ: ಡಿ.ಕೆ.ಶಿವಕುಮಾರ್‌

Last Updated : Oct 5, 2023, 9:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.