ETV Bharat / state

ಉನ್ನತ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆಸಿ ಜನರ ಸಮಸ್ಯೆ ಪರಿಹಾರಕ್ಕೆ ಯೋಜನೆ: ಸಚಿವ ಅಂಗಾರ

ಜಿಲ್ಲಾಧಿಕಾರಿಗಳಂತಹ ಉನ್ನತ ಅಧಿಕಾರಿಗಳನ್ನು ಗ್ರಾಮಕ್ಕೆ ಮಟ್ಟಕ್ಕೆ ಕರೆಯಿಸಿಕೊಂಡು ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಸಚಿವ ಎಸ್​. ಅಂಗಾರ ತಿಳಿಸಿದರು.

minister-angara-in-bjp-program-at-suliya
ಉನ್ನತ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆಸಿ ಜನರ ಸಮಸ್ಯೆ ಪರಿಹಾರಕ್ಕೆ ಯೋಜನೆ: ಸಚಿವ ಅಂಗಾರ
author img

By

Published : Sep 12, 2021, 10:52 AM IST

ಸುಳ್ಯ(ದಕ್ಷಿಣ ಕನ್ನಡ): ಸರ್ಕಾರಿ ಕಚೇರಿಗಳಲ್ಲಿ ಸಣ್ಣಪುಟ್ಟ ಸೇವೆಗೂ ಅಧಿಕಾರಿಗಳು ಜನರನ್ನು ವಿನಾಃ ಕಾರಣ ನೀಡಿ ಅಲೆದಾಡಿಸುವ ಮತ್ತು ಜನ ಸಾಮಾನ್ಯರಿಗೆ ಸೇವೆ ನೀಡುವುದನ್ನು ಮರೆತು ಅಧಿಕಾರಿಗಳು ಲಂಚಕ್ಕೆ ಬೇಡಿಕೆಯಿಡುವ ಬಗ್ಗೆ ಹಲವಾರು ದೂರುಗಳು ವ್ಯಕ್ತವಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳಂತಹ ಉನ್ನತ ಅಧಿಕಾರಿಗಳನ್ನು ಗ್ರಾಮಕ್ಕೆ ಮಟ್ಟಕ್ಕೆ ಕರೆಯಿಸಿಕೊಂಡು ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಮೀನುಗಾರಿಕೆ ಸಚಿವ ಎಸ್. ಅಂಗಾರ ಹೇಳಿದರು.

ಸುಳ್ಯದಲ್ಲಿ ನಡೆದ ಬೂತ್ ಅಧ್ಯಕ್ಷ ನಾಮಫಲಕ ಅಳವಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭಿವೃದ್ದಿಯೇ ಬಿಜೆಪಿಯ ಮೂಲಮಂತ್ರ. ಬಿಜೆಪಿ ಅಧಿಕಾರ ಪಡೆದುಕೊಂಡ ಬಳಿಕ ದೇಶ ಹಾಗೂ ರಾಜ್ಯದಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ. ತಳಮಟ್ಟದ ವ್ಯಕ್ತಿಗೂ ಸೌಲಭ್ಯ ದೊರಕಬೇಕೆಂಬ ಬಿಜೆಪಿಯ ಅಂತ್ಯೋದಯ ಕಲ್ಪನೆ ಸಾಕಾರಗೊಳ್ಳುತ್ತಿದೆ ಎಂದು ಸಚಿವ ಎಸ್ ಅಂಗಾರ ಹೇಳಿದರು.

ಸಾಮೂಹಿಕ ನಿರ್ಧಾರ, ವೈಚಾರಿಕತೆ, ಆರ್ಥಿಕ ಪರಿಶುದ್ಧತೆಗೆ ಬಿಜೆಪಿ ಪಕ್ಷದಲ್ಲಿ ಆಧ್ಯತೆ ನೀಡಲಾಗುತ್ತದೆ. ಸಿದ್ಧಾಂತಗಳನ್ನು ಒಪ್ಪಿಕೊಂಡು ತ್ಯಾಗ ಮನೋಭಾವದಿಂದ ದುಡಿಯುವ ಕಾರ್ಯಕರ್ತನನ್ನು ಪಕ್ಷ ಯಾವತ್ತು ಗುರುತಿಸುತ್ತದೆ. ಹೀಗಾಗಿ ತಳಮಟ್ಟದ ಕಾರ್ಯಕರ್ತನಿಗೂ ಉನ್ನತ ಹುದ್ದೆಯ ಜವಾಬ್ದಾರಿ ನೀಡಲಾಗುತ್ತಿದೆ. ಬಿಜೆಪಿ ಸರ್ಕಾರದ ಸಾಧನೆಯನ್ನು ಪ್ರತಿ ಮನೆಗಳಿಗೆ ತಲುಪಿಸುವ ಕಾರ್ಯವು ಪಕ್ಷದ ಕಾರ್ಯಕರ್ತರಿಂದ ನಡೆಯಬೇಕು. ಆ ಮೂಲಕ ತಳಮಟ್ಟದಿಂದ ಪಕ್ಷ ಸಂಘಟಿಸುವಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: ಆಸ್ತಿ ಮೇಲಿನ ವ್ಯಾಮೋಹ.. ಲವರ್ ಜತೆ​ ಸೇರಿ ಫ್ರೆಂಚ್​ ಪೋಷಕಳನ್ನೇ ಕೊಂದಳು ದತ್ತುಪುತ್ರಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.