ಬೆಳ್ತಂಗಡಿ: ಕೊರೊನಾ ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟ ಎದುರಾಗಿರುವ ಹಿನ್ನೆಲೆ, ಮಡಂತ್ಯಾರು ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ, ಏಪ್ರಿಲ್ ತಿಂಗಳಲ್ಲಿ ಸಂಘಕ್ಕೆ ಹಾಲು ಪೂರೈಸಿದ ಎಲ್ಲಾ ಸದಸ್ಯರಿಗೆ ಲೀಟರ್‌ಗೆ ಒಂದು ರೂಪಾಯಿಯಂತೆ ಒಟ್ಟು 62,000 ಪ್ರೋತ್ಸಾಹ ಧನ, ಸಿಬ್ಬಂದಿಗೆ ಒಟ್ಟು 5000 ರೂ. ಪ್ರೋತ್ಸಾಹ ಧನವನ್ನು ನೀಡಲು ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಯಿತು.
ಸದಸ್ಯರಿಗೆ, ಸಂಘದ ಸಿಬ್ಬಂದಿಗೆ ಪ್ರೋತ್ಸಾಹಧನ ಹಾಗೂ ಸಂಘದ ಸದಸ್ಯರು ಮಾಡುವ ಒಕ್ಕೂಟದ ಜಾನುವಾರು ವಿಮೆಯಲ್ಲಿ 25% ಮೊತ್ತವನ್ನು ಸಂಘವೇ ಭರಿಸಲಿದೆ. ಒಂದು ವರ್ಷದ ಜಾನುವಾರು ವಿಮೆಯಲ್ಲಿ 75% ರಷ್ಟು ಒಕ್ಕೂಟವೇ ಭರಿಸಲಿದ್ದು, ಉಳಿದ 25 % ಸಂಘ ಭರಿಸುವುದರಿಂದ ಹೈನುಗಾರರಿಗೆ ಆರ್ಥಿಕವಾಗಿ ಸಾಕಷ್ಟು ಸಹಕಾರಿಯಾಗಲಿದೆ.
ಸದಸ್ಯರಿಗೆ ಪ್ರೋತ್ಸಾಹ ಧನವನ್ನು ಈ ವಾರ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಸದಾಶಿವ ಶೆಟ್ಟಿ ಮೊಗೆರೋಡಿ ತಿಳಿಸಿದರು.