ETV Bharat / state

ವದಂತಿ ನಂಬಿ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಧಾವಿಸಿದ ಉತ್ತರದ ವಲಸೆ ಕಾರ್ಮಿಕರು - migrant labours from jharkhand

ಊರಿಗೆ ತೆರಳಲು ರೈಲು ಕಲ್ಪಿಸಲಾಗಿದೆ ಎಂಬ ಸುಳ್ಳು ವದಂತಿ ನಂಬಿ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಬಂದ ವಲಸೆ ಕಾರ್ಮಿಕರು ಸತ್ಯ ತಿಳಿದು ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದಾರೆ.

migrant-labours-strike-in-manglore-raliway-station
ವಲಸೆ ಕಾರ್ಮಿಕರ ಪ್ರತಿಭಟನೆ
author img

By

Published : May 8, 2020, 10:54 AM IST

ಮಂಗಳೂರು: ಜಾರ್ಖಂಡ್ ಸೇರಿದಂತೆ ಉತ್ತರ ಭಾರತದ ವಲಸೆ ಕಾರ್ಮಿಕರಿಗೆ ರೈಲು ವ್ಯವಸ್ಥೆ ಮಾಡಲಾಗಿದೆ ಎಂಬ ವದಂತಿ ನಂಬಿ ಸಾವಿರಾರು ಸಂಖ್ಯೆಯಲ್ಲಿ ಹೊರರಾಜ್ಯದ ವಲಸೆ ಕಾರ್ಮಿಕರು ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ ಘಟನೆ ನಡೆದಿದೆ.

ವಲಸೆ ಕಾರ್ಮಿಕರ ಪ್ರತಿಭಟನೆ
ಮುಂಜಾನೆಯಿಂದ ಸಾವಿರಾರು ಕಾರ್ಮಿಕರು ನಗರದ ವಿವಿಧ ಕಡೆಯಿಂದ ಗುಂಪು ಗುಂಪಾಗಿ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ವಲಸೆ ಕಾರ್ಮಿಕರಿಗೆ ರೈಲಿನ ವ್ಯವಸ್ಥೆ ಇಲ್ಲ ಎಂಬ ಮಾಹಿತಿ ಪಡೆದ ಬಳಿಕ ಸಾವಿರಾರು ಕಾರ್ಮಿಕರು ರೈಲ್ವೆ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ಧರಣಿ ಕೂತು ತಮಗೆ ಶೀಘ್ರ ರೈಲ್ವೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಆಹಾರವಿಲ್ಲದೆ ಸಂಕಷ್ಟದಲ್ಲಿದ್ದು ಕೈಯಲ್ಲಿ ಹಣವೂ ಇಲ್ಲ. ನಾವು ನಮ್ಮ ಊರಿಗೆ ಹೋಗಬೇಕು. ಅದಕ್ಕಾಗಿ ರೈಲು ವ್ಯವಸ್ಥೆ ಮಾಡಿ, ಇಲ್ಲವಾದರೆ ರೈಲು ವ್ಯವಸ್ಥೆ ಮಾಡುವ ತನಕ ಇಲ್ಲಿಯೆ ಉಳಿಯುವುದಾಗಿ ಎಚ್ಚರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.