ETV Bharat / state

ಕಾರಿನಲ್ಲೇ ಮಗು ಮರೆತ ಹೋದ ಪೋಷಕರು... ಕಾರ್​ ಗ್ಲಾಸ್​ ಒಡೆದು ಮಗುವಿನ ರಕ್ಷಣೆ! - Kannada news

ಕಾರಿನಲ್ಲೇ ಮಗುವನ್ನ ಬಿಟ್ಟು ಕೀ ಮರೆತು ಹೋದ ಪೋಷಕರು, ಕೀ ಕಾರಿನೊಳಗೆ ಉಳಿದಿದೆ ಎಂದು ತಿಳಿಯುವ ವೇಳೆಗೆ ಕಾರು ಅಟೋ ಲಾಕ್ ಆಗಿ ಮಗು ಕಾರಿನಲ್ಲಿ ಬಂಧಿಯಾಗಿದ್ದ ಘಟನೆ ನಗರದಲ್ಲಿ ನಡೆದಿದೆ.

ಕೂರ್ನಡ್ಕ ಯೆಂಗ್ ಮೆನ್ಸ್ ಅಧ್ಯಕ್ಷ ಸಿರಾಜ್ ಎ.ಕೆ
author img

By

Published : May 10, 2019, 2:25 AM IST

ಮಂಗಳೂರು : ಕಾರು ಅಟೋ ಲಾಕ್ ಆದ ಪರಿಣಾಮ ಮಗುವೊಂದು ಸುಮಾರು 20 ನಿಮಿಷಗಳ ಕಾಲ ಕಾರಿನಲ್ಲಿ ಬಂಧಿಯಾಗಿದ್ದ ಘಟನೆ ನಗರದಲ್ಲಿ ನಡೆದಿದ್ದು, ಕಾರಿನ ಗ್ಲಾಸ್ ಒಡೆದು ಮಗುವನ್ನ ರಕ್ಷಿಸಲಾಗಿದೆ.

ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನ ಬಳಿಯ ಸಂಜೀವ ಶೆಟ್ಟಿ ಜವಳಿ ಅಂಗಡಿಗೆ ಬಟ್ಟೆ ಖರೀದಿಗೆ ಮಾರುತಿ ಸ್ವಿಪ್ಟ್ ಡಿಸೈರ್ ಕಾರಿನಲ್ಲಿ ಬಂದಿದ್ದ ಪೋಷಕರು ಮಗುವನ್ನು ಕಾರಿನಲ್ಲೇ ಬಿಟ್ಟು, ಕೀ ಕೂಡ ಅದರಲ್ಲೆ ಬಿಟ್ಟು ಜವುಳಿ ಅಂಗಡಿಗೆ ಹೋಗಿದ್ದರು. ಕಾರು ಆಟೋ ಲಾಕ್ ಆಗಿತ್ತು. ಇದೇ ಸಂದರ್ಭದಲ್ಲಿ ಮಗು ಕೂಡಾ ಕಾರಿನ ಕೀಯನ್ನು ಹಿಡಿದುಕೊಂಡು ಆಟ ಆಡುತ್ತಿತ್ತು. ವಿಷಯ ತಿಳಿದು ಜನರ ಗುಂಪು ಕಾರಿನ ಸುತ್ತು ಆವರಿಸಿದಾಗ ಮಗು ಅಳತೊಡಗಿತ್ತು. ಗಾಬರಿಗೊಂಡ ಪೋಷಕರು ಕಾರಿನ ಲಾಕ್ ತೆಗೆಯಲು ಪೇಚಾಡುತ್ತಿದ್ದರು. ಇದನ್ನು ಗಮನಿಸಿದ ಕೂರ್ನಡ್ಕ ಯೆಂಗ್ ಮೆನ್ಸ್ ನ ಅಧ್ಯಕ್ಷ ಸಿರಾಜ್ ಎ ಕೆ ಮತ್ತು ಜಾಸ್ಲಿ ಡಿಸೋಜ ಎಂಬವರು ಕಾರಿನ ಹಿಂಬದಿ ಎಡ ಬದಿಯಲ್ಲಿರುವ ಕನ್ನಡಿ ಒಡೆದು ಮಗುವನ್ನು ರಕ್ಷಿಸಿದ್ದಾರೆ.

Intro:ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಗುವೊಂದು ಸುಮಾರು 20 ನಿಮಿಷಗಳ ಕಾಲ ಕಾರು ಲಾಕ್ ಆಗಿ ಬಂಧಿಯಾಗಿದ್ದ ಘಟನೆ ನಡೆದಿದ್ದು ಕಾರಿನ ಗ್ಲಾಸ್ ಒಡೆದು ಮಗುವನ್ನು ರಕ್ಷಿಸಲಾಗಿದೆ.Body:ಪುತ್ತೂರಿನ ಸಂಜೀವ ಶೆಟ್ಟಿ ಅಂಗಡಿ ಎದುರು ‌ಈ‌ಘಟನೆ ನಡೆದಿದೆ. ಮಾರುತಿ ಸ್ವಿಪ್ಟ್ ಡಿಸೈರ್ ಕಾರಿನಲ್ಲಿ ಬಂದಿದ್ದ ಪೋಷಕರು ಮಗುವನ್ನು ಕಾರಿನಲ್ಲೇ ಬಿಟ್ಟು, ಕೀ ಕೂಡ ಅದರಲ್ಲೆ ಬಿಟ್ಟು ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಬಳಿಯ ಸಂಜೀವ ಶೆಟ್ಟಿ ಜವುಳಿ ಅಂಗಡಿಗೆ ಹೋಗಿದ್ದರು. ಕಾರಿನ ಕೀ ಒಳಗೆ ಬಾಕಿ ಆಗಿದೆ ಎಂದು ತಿಳಿಯುವ ವೇಳೆಗೆ ಕಾರ್ ಆಟೋ ಲಾಕ್ ಆಗಿತ್ತು. ವಿಷಯ ತಿಳಿದು ಜನರ ಗುಂಪು ಕಾರಿನ ಸುತ್ತು ಆವರಿಸಿದಾಗ ಮಗು ಅಳತೊಡಗಿತ್ತು. ಕಾರಿನ ಲಾಕ್ ತೆಗೆಯಲು ಪೇಚಾಡುತ್ತಿದ್ದ ಪೋಷಕರನ್ನು ಕಂಡ ಕೂರ್ನಡ್ಕ ಯೆಂಗ್ ಮೆನ್ಸ್ ನ. ಅಧ್ಯಕ್ಷ ಸಿರಾಜ್ ಎ ಕೆ ಅವರು ಬಂದು ಕಾರಿನ ಹಿಂಬದಿ ಎಡ ಬದಿಯಲ್ಲಿರುವ ಗ್ಲಾಸ್‌ನ್ನು ಬ್ರೇಕ್ ಮಾಡಿ ಮಗುವನ್ನು ರಕ್ಷಿಸಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.