ಸುಳ್ಯ: ಸರ್ಕಾರದ ಆದೇಶದಂತೆ ತಾ.ಪಂ.ಪಂಚಾಯತ್ ಆಶ್ರಯದಲ್ಲಿ ಸುಳ್ಯ, ಸುಬ್ರಹ್ಮಣ್ಯ, ಕಡಬ, ನೆಲ್ಯಾಡಿಯಲ್ಲಿ ಮಾಸ್ಕ್ ದಿನಾಚರಣೆ ನಡೆಯಿತು.
![mask day](https://etvbharatimages.akamaized.net/etvbharat/prod-images/kn-dk-04-maask-day-av-vis-kac10008_18062020125631_1806f_1592465191_127.jpg)
ಸುಳ್ಯ ಮತ್ತು ಕಡಬದಲ್ಲಿ ಆಯಾ ಪ್ರದೇಶಗಳ ತಹಶೀಲ್ದಾರರ ನೇತೃತ್ವದಲ್ಲಿ ಮಾಸ್ಕ್ ಧರಿಸುವ ಬಗ್ಗೆ ಜಾಗೃತಿ ಜಾಥಾಗಳು ನಡೆಯಿತು. ತಾಲೂಕಿನ ತಹಶೀಲ್ದಾರರಾದ ಅನಂತ್ ಶಂಕರ್ ಸುಳ್ಯದಲ್ಲಿ ಮತ್ತು ತಹಶೀಲ್ದಾರ ಜಾನ್ ಪ್ರಕಾಶ್ ಕಡಬದಲ್ಲಿ ಜಾಥಾಕ್ಕೆ ಚಾಲನೆ ನೀಡಿದರು.
ಈ ವೇಳೆ ಪೊಲೀಸ್ ಅಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆ, ತಾಲೂಕು ಪಂಚಾಯತ್ ಸಿಬ್ಬಂದಿ, ಗ್ರಾಮ ಪಂಚಾಯತ್, ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.