ಮಂಗಳೂರು: ಕಲ್ಲಿನ ಕ್ವಾರಿ ಹೊಂಡದಲ್ಲಿ ಈಜಲು ತೆರಳಿದ ಯುವಕ ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ನಗರದ ಹೊರವಲಯದ ಉಳಾಯಿಬೆಟ್ಟುವಿನಲ್ಲಿ ನಡೆದಿದೆ. ಜೋಕಟ್ಟೆ ನಿವಾಸಿ ಶಿಯಾಬ್ (21) ಎಂಬಾತ ಮೃತ ಯುವಕ.

ಶಿಯಾಬ್ ಕಾಯರಪದವು ಎಂಬಲ್ಲಿ ಗೆಳೆಯರ ಜೊತೆ ಕ್ರಿಕೆಟ್ ಆಡಿದ ನಂತರ ಮೈದಾನದ ಪಕ್ಕದಲ್ಲಿದ್ದ ಕೆಂಪು ಕಲ್ಲಿನ ಕ್ವಾರಿಗೆ ಈಜಲು ತೆರಳಿದ್ದ. ಕ್ವಾರಿಯ ನೀರು ತುಂಬಿದ ಹೊಂಡದಲ್ಲಿ ಈಜಲು ಸಾಧ್ಯವಾಗದೆ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮದ್ಯ ಮಾರಾಟ ಮಾಡದಂತೆ ಹೇಳಿದ ವ್ಯಕ್ತಿಗೆ ಥಳಿತ.. ಗುಪ್ತಾಂಗಕ್ಕೆ ಬರೆ ಎಳೆದು ದುಷ್ಕೃತ್ಯ!