ಮಂಗಳೂರು: ಇಲ್ಲಿನ ಸುರತ್ಕಲ್‌ನ ಕೆನರಾ ಬ್ಯಾಂಕ್ನಲ್ಲಿ ಹಣ ಕಳುಹಿಸುವ ಯಂತ್ರದಿಂದ ಹಾಕಲಾದ ದುಡ್ಡು ಖಾತೆಗೆ ಬರುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಮಹಿಳೆಯೊಬ್ಬರು ಹಣ ಡೆಪಾಸಿಟ್ ಮಾಡುವ ಯಂತ್ರದ ಮೂಲಕ 24 ಸಾವಿರ ರೂ. ಹಣ ಹಾಕಿದ್ದರು. ಮಧ್ಯಾಹ್ನ ಡೆಪಾಸಿಟ್ ಮಾಡಿದ್ದ ಹಣ ಸಂಜೆಯವರೆಗೂ ಬಂದಿರಲಿಲ್ಲ. ಈ ಬಗ್ಗೆ ಬ್ಯಾಂಕ್ನಲ್ಲಿ ವಿಚಾರಿಸಿದಾಗ ನಾಲ್ಕು ದಿನದ ಬಳಿಕ ಖಾತೆಗೆ ಬರಬಹುದು ಎಂದು ಹೇಳಿದ್ದರು.
ಇದು ಮಹಿಳೆಯ ಸಿಟ್ಟಿಗೆ ಕಾರಣವಾಗಿತ್ತು. ಹೀಗಾಗಿ ಆಕೆ ಬ್ಯಾಂಕ್ ಮುಂದೆಯೇ ರಂಪಾಟ ಮಾಡಲು ಶುರು ಮಾಡಿದಳು. ಇದನ್ನು ಕಂಡು ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಹೀಗಾಗಿ ಎಚ್ಚೆತ್ತ ಬ್ಯಾಂಕ್ನವರು ಡೆಪಾಸಿಟ್ ಮಾಡಿದ್ದ ಹಣ ತಲುಪುವವರೆಗೆ ಬದಲಿ ಹಣ ನೀಡುವುದಾಗಿ ಹೇಳಿದರು. ಇದರಿಂದ ಈ ಪ್ರಕರಣ ಅಲ್ಲಿಗೆ ಸುಖಾಂತ್ಯ ಕಂಡಿದೆ.
ಇದನ್ನೂ ಓದಿ: ಮತ್ತೆ ರೆಪೋ ದರ ಏರಿಸಿದ RBI.. ಇಎಂಐ, ಸಾಲದ ಮೇಲಿನ ಬಡ್ಡಿ ದರ ಮತ್ತಷ್ಟು ದುಬಾರಿ