ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೆಚ್ಚುವರಿ ವಿಮಾನವು ಸೆಪ್ಟೆಂಬರ್ 7 ರಿಂದ ಆರಂಭವಾಗಲಿದೆ. ಇಂಡಿಗೋ ಸಂಸ್ಥೆಯ ಈ ಹೆಚ್ಚುವರಿ ವಿಮಾನವು ಅಕ್ಟೋಬರ್ 28 ರ ವರೆಗೆ ಕಾರ್ಯನಿರ್ವಹಿಸಲಿದೆ. ಶನಿವಾರ ಹೊರತುಪಡಿಸಿ ಮಂಗಳೂರಿನಿಂದ ಬೆಂಗಳೂರಿಗೆ ಈವರೆಗೆ ನಾಲ್ಕು ವಿಮಾನಗಳಿದ್ದು, ಇನ್ನು ಈ ಸಂಖ್ಯೆ ಐದಕ್ಕೇರಲಿದೆ. ಶನಿವಾರ ಮಾತ್ರ ಈ ಹಿಂದೆ ಹಾರಾಡುತ್ತಿದ್ದ ಐದು ವಿಮಾನಳೀಗ ಆರು ಆಗಲಿವೆ.
ಇಂಡಿಗೋ ಸೆಪ್ಟೆಂಬರ್ 7 ರಿಂದ ವಿಮಾನ 6E 6858 ಅನ್ನು ಮರು-ಪರಿಚಯಿಸುವ ಮೂಲಕ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಐದನೇ ದೈನಂದಿನ ವಿಮಾನವನ್ನು ಸೇರಿಸುತ್ತಿದೆ. ಈ ವಿಮಾನವು ಮಂಗಳೂರಿಗೆ ಬೆಳಗ್ಗೆ 8.35 ಕ್ಕೆ ಆಗಮಿಸುತ್ತದೆ ಮತ್ತು 6E 5347 ವಿಮಾನದಲ್ಲಿ 9.10 ಕ್ಕೆ ಬೆಂಗಳೂರಿಗೆ ಹೊರಡಲಿದೆ.
ಮಂಗಳವಾರ, ಗುರುವಾರ, ಭಾನುವಾರ ಮತ್ತು ಶನಿವಾರದಂದು ಇಂಡಿಗೋ ತನ್ನ ಮಂಗಳೂರು-ಪುಣೆ ವಿಮಾನದ ಕಾರ್ಯಾಚರಣೆಯ ದಿನಗಳು ಮತ್ತು ಸಮಯವನ್ನು ಪುನರ್ ರಚಿಸಿದ ಪರಿಣಾಮವೇ ಶನಿವಾರ ಬೆಂಗಳೂರಿಗೆ ಆರನೇ ವಿಮಾನ ಬಂದಿದೆ. ವಿಮಾನ 6E 294 ಮಂಗಳೂರಿಗೆ ಸಂಜೆ 5.50 ಕ್ಕೆ ಆಗಮಿಸುತ್ತದೆ ಮತ್ತು ಮಂಗಳವಾರ/ಗುರುವಾರ ಮತ್ತು ಭಾನುವಾರದಂದು ಸಂಜೆ 6.35 ಕ್ಕೆ 6E 298 ವಿಮಾನದಲ್ಲಿ ಪುಣೆಗೆ ಹೊರಡಲಿದೆ. ಶನಿವಾರ, 6E359 ವಿಮಾನವು ಬೆಂಗಳೂರಿನಿಂದ ಸಂಜೆ 5.50 ಕ್ಕೆ ಮಂಗಳೂರಿಗೆ ಆಗಮಿಸುತ್ತದೆ ಮತ್ತು ನಂತರ 6E 298 ವಿಮಾನದಲ್ಲಿ 6.35 ಕ್ಕೆ ಪುಣೆಗೆ ಹೊರಡಲಿದೆ.
"ಮಂಗಳೂರು-ಬೆಂಗಳೂರು ಮತ್ತು ಮಂಗಳೂರು-ಪುಣೆ ಸೆಕ್ಟರ್‌ನಲ್ಲಿನ ವಿಮಾನ ವೇಳಾಪಟ್ಟಿಯಲ್ಲಿನ ಬದಲಾವಣೆಗಳಿಂದ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸೋಮವಾರ-ಶುಕ್ರವಾರದವರೆಗೆ ದೈನಂದಿನ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳ ಸಂಚಾರ ಸಂಖ್ಯೆ 38 ರಿಂದ 40 ಕ್ಕೆ ಮತ್ತು ಶನಿವಾರ, ಭಾನುವಾರದಂದು 40 ರಿಂದ 42 ಕ್ಕೆ ಹೆಚ್ಚಲಿದೆ" ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ವಿಮಾನ ನಿಲ್ದಾಣವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನಗಳನ್ನು ಪ್ರಾರಂಭಿಸಲು ಇತರ ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದೆ ಮತ್ತು ಸಕಾರಾತ್ಮಕ ಫಲಿತಾಂಶಗಳನ್ನು ಪಡೆದುಕೊಂಡಿದೆ. ಅಕ್ಟೋಬರ್ 29 ರಿಂದ ಪ್ರಾರಂಭವಾಗುವ ಚಳಿಗಾಲದ ವೇಳಾಪಟ್ಟಿಯಲ್ಲಿ ಈ ಹೊಸ ವಿಮಾನಗಳು ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗಕ್ಕೆ ಬಂದ ಪ್ರಥಮ ನಾಗರಿಕ ವಿಮಾನ: ವಾಟರ್ ಸೆಲ್ಯೂಟ್ ಮೂಲಕ ಸ್ವಾಗತಿಸಿದ ಸಿಬ್ಬಂದಿ
ಶಿವಮೊಗ್ಗ ಏರ್ಪೋರ್ಟ್ಗೆ ಮೊದಲ ನಾಗರಿಕವಿಮಾನ: ಆಗಸ್ಟ್ 31 ರಂದಷ್ಟೇ ಮೊದಲ ಬಾರಿಗೆ ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನ ಬಂದಿತ್ತು. ಇದರಿಂದ ಈ ಭಾಗದ ಜನರು ಸಂತಸಗೊಂಡಿದ್ದರು. ವಾಟರ್ ಸೆಲ್ಯೂಟ್ ಮೂಲಕ ಏರ್ಪೋರ್ಟ್ ಸಿಬ್ಬಂದಿ, ಮೊದಲ ವಿಮಾನಕ್ಕೆ ಸ್ವಾಗತ ನೀಡಿದ್ದರು.