ETV Bharat / state

ಸೌಹಾರ್ದತೆಗೆ ಸಾಕ್ಷಿಯಾದ ಮಂಗಳೂರಿನ ಸಂಘನಿಕೇತನದ ಗಣೇಶೋತ್ಸವ: ಕ್ರೈಸ್ತರಿಂದ ವಿಘ್ನ ನಿವಾರಕನ ಪೂಜೆ - ಕ್ರೈಸ್ತರಿಂದ ವಿಘ್ನ ನಿವಾರಕನ ಪೂಜೆ

ಮಂಗಳೂರಿನ ಸಂಘನಿಕೇತನದ ಸಾರ್ವಜನಿಕ ಗಣೇಶೋತ್ಸವ ಸೌಹಾರ್ದತೆಯ ಸಂದೇಶವನ್ನು ಸಾರಿದೆ.

ಮಂಗಳೂರಿನ ಸಂಘ ನಿಕೇತನದ ಗಣೇಶೋತ್ಸವ
ಮಂಗಳೂರಿನ ಸಂಘ ನಿಕೇತನದ ಗಣೇಶೋತ್ಸವ
author img

By ETV Bharat Karnataka Team

Published : Sep 22, 2023, 9:15 PM IST

ಮಂಗಳೂರಿನ ಸಂಘ ನಿಕೇತನದ ಗಣೇಶೋತ್ಸವ

ಮಂಗಳೂರು : ಮಂಗಳೂರಿನ ಸಂಘನಿಕೇತನದಲ್ಲಿ ಈ ಬಾರಿ 76ನೇ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಸೌಹಾರ್ದತೆಯ ಸಂದೇಶವನ್ನು ಸಾರಿದೆ. ಮಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕ ಗಣೇಶೋತ್ಸವವು ಸಂಘನಿಕೇತನದಲ್ಲಿ ಆರಂಭವಾಗಿತ್ತು. ಆರ್​ಎಸ್​ಎಸ್​ನ ಮಂಗಳೂರು ಕಚೇರಿಯಲ್ಲಿ ನಡೆಯುವ ಈ ಗಣೇಶೋತ್ಸವಕ್ಕೆ ಕೆಲವು ವರ್ಷಗಳಿಂದ ಸೌಹಾರ್ದತೆಯ ಸ್ಪರ್ಶ ಸಿಕ್ಕಿವೆ.

2007ರಿಂದ ಸಂಘನಿಕೇತನದಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವ ಸಮಾರಂಭಕ್ಕೆ ಕ್ರಿಶ್ಚಿಯನ್ ಬಂಧುಗಳು ಬಂದು ಪೂಜೆ ಸಲ್ಲಿಸುವುದು ನಡೆಯುತ್ತಿದೆ. ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸದಸ್ಯರು ಸಾಮರಸ್ಯ ಹಾಗೂ ಸೌಹಾರ್ದತೆಯ ಗಣೇಶೋತ್ಸವದ ಭೇಟಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅದರಂತೆ ಈ ಬಾರಿಯೂ ಸಂಘನಿಕೇತನದ ಗಣೇಶೋತ್ಸವಕ್ಕೆ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸದಸ್ಯರು ಬಂದು ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘನಿಕೇತನದಿಂದ ಕ್ರೈಸ್ತ ಬಾಂಧವರಿಗೆ ಪ್ರಸಾದ ವಿತರಣೆಯು ನಡೆಯಿತು. ಆ ಬಳಿಕ ಗಣೇಶೋತ್ಸವದ ಆಯೋಜಕರು ಹಾಗೂ ಕ್ರೈಸ್ತ ಬಾಂಧವರು ಜೊತೆಯಾಗಿ ಕುಳಿತು ಉಪಹಾರ ಸೇವಿಸಿದರು. ಇದೇ ವೇಳೆ ಮಾತನಾಡಿದ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಯ್ ಕ್ಯಾಸ್ಟಲಿನೊ, ಗಣೇಶೋತ್ಸವ ಒಂದು ರಾಷ್ಟ್ರೀಯ ಹಬ್ಬ. ಗಣೇಶೋತ್ಸವವನ್ನು ಬಾಲಗಂಗಾಧರ ತಿಲಕ್ ಆರಂಭಿಸಿದ್ದು ಸ್ವಾತಂತ್ರ್ಯ ಸಂದರ್ಭದಲ್ಲಿ ಜನರನ್ನು ಒಟ್ಟು ಸೇರಿಸಲು. ಈ ಹಬ್ಬ ದೊಡ್ಡ ಚಳವಳಿಯಾಗಿದೆ. ಗಣೇಶ ವಿಘ್ನ ನಿವಾರಕ. ಹಿಂದೂಗಳು ಮಾತ್ರವಲ್ಲದೆ ಎಲ್ಲರೂ ಯಾವುದೆ ಕೆಲಸ ಆರಂಭಿಸಲು ಗಣೇಶನ ಪೂಜೆ ಮಾಡುವುದು ರೂಢಿಯಾಗಿದೆ ಎಂದರು.

ನಾವು ಗಣೇಶೋತ್ಸವದ ಹಬ್ಬದಂದು ನಾವು ಶುಭಾಶಯ ಕೋರುತ್ತೇವೆ. ನಮ್ಮ ಧರ್ಮಪ್ರಾಂತ್ಯದ ಬಿಷಪ್ ಅವರು ಬಂಧುತ್ವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಬಂಧುತ್ವ ಎಂದರೆ ಎಲ್ಲರೂ ಸೌಹಾರ್ದತೆಯಿಂದ ಬಾಳಬೇಕು ಎಂಬ ಉದ್ದೇಶ ಹೊಂದಿದೆ. ನಾವು ಈ ದೇಶದಲ್ಲಿ ಬಹಳಷ್ಟು ವೈವಿಧ್ಯತೆಗಳಿವೆ. ಭಾರತ ಒಂದು ಸುಂದರ ವೈವಿಧ್ಯತೆಗಳ ಹೂದೋಟ. ಭಾರತದಲ್ಲಿ ಎಲ್ಲರೂ ಒಟ್ಟಿಗೆ ಇನ್ನೊಬ್ಬರ ಧರ್ಮ, ಪದ್ದತಿ ಅರ್ಥೈಸುವುದು, ಆಹಾರ ತಿನಿಸುಗಳ ರುಚಿ ಸ್ವಾಧಿಸಬೇಕು. ನಾವು ಬೇರೆ ಬೇರೆ ಧರ್ಮ, ಉಡುಗೆ ತೊಡುಗೆ ಇರಬಹುದು, ಆದರೆ ಭಾರತದ ಏಕತೆಯಿಂದ ವೈವಿಧ್ಯತೆಯನ್ನು ಸಂಭ್ರಮಿಸಬೇಕಾಗಿದೆ ಎಂದು ಹೇಳಿದರು.

ಆರ್​ಎಸ್​ಎಸ್ ದಕ್ಷಿಣ ಪ್ರಾಂತ ಸರಸಂಘಚಾಲಕ ಡಾ ವಾಮನ ಶೆಣೈ ಮಾತನಾಡಿ, ಗಣೇಶೋತ್ಸವ ಸ್ವಾತಂತ್ರ್ಯ ಹೋರಾಟದ ಆಂದೋಲನದ ಚಿಂತನೆಯಿಂದ ಆರಂಭವಾಗಿದೆ. ಜನತೆಯನ್ನು ಒಟ್ಟುಗೂಡಿಸಿ, ದೇಶ ಒಗ್ಗಟ್ಟಾಗಿ ಜನರು ಇರಬೇಕೆಂದು ಅಂದು ಇತ್ತು. ಧಾರ್ಮಿಕ ಚಿಂತನೆಯ ಜೊತೆಗೆ ರಾಷ್ಟ್ರೀಯ ಚಿಂತನೆಗೂ ಒತ್ತು ನೀಡಿ ಗಣೇಶೋತ್ಸವ ಆರಂಭವಾಯಿತು. ದೇಶದ ಜನರು ಒಗ್ಗಟ್ಟಿನಿಂದ ಧಾರ್ಮಿಕ ಚಿಂತನೆಯ ಜೊತೆಗೆ ರಾಷ್ಟ್ರೀಯ ಚಿಂತನೆಗೂ ಒತ್ತು ಕೊಡುವ ಚಿಂತನೆ ಗಣೇಶೋತ್ಸವಕ್ಕೆ ಇದೆ. ಸಂಘನಿಕೇತನದ ಗಣೇಶೋತ್ಸವ 76 ವರ್ಷಗಳಿಂದ ನಡೆಯುತ್ತಿದೆ. ಕ್ರೈಸ್ತ ಸಮುದಾಯದವರು ಈ ಕಾರ್ಯಕ್ರಮಕ್ಕೆ ಆಗಮಿಸಿದರ ಹಿಂದೆ ಇದೇ ಚಿಂತನೆ ಇದೆ. ಅವರ ಈ ಕಾರ್ಯವನ್ನು ಮೆಚ್ಚಬೇಕಾಗಿದೆ ಎಂದು ಹೇಳಿದರು.

ಇದನ್ನೂ ಓದಿ : ಪುತ್ರನೊಂದಿಗೆ ಮುಂಬೈ 'ಲಾಲ್​ಬೌಚ ರಾಜಾ' ಗಣಪತಿ ದರ್ಶನ ಪಡೆದ ಶಾರುಖ್​ ಖಾನ್​- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.