ETV Bharat / state

ಉಕ್ರೇನ್​​ನಲ್ಲಿ ಸಿಲುಕಿದ ಮಂಗಳೂರು ಮೂಲದ ವಿದ್ಯಾರ್ಥಿ: ಪೋಷಕರ ಜೊತೆ ವಿಡಿಯೋ ಕಾಲ್ ಮೂಲಕ ನಿರಂತರ ಸಂಪರ್ಕ - ಉಕ್ರೇನ್​​ನಲ್ಲಿ ಸಿಲುಕಿದ ಮಂಗಳೂರು ಮೂಲದ ವಿದ್ಯಾರ್ಥಿ ಕ್ಲಾಟನ್

ಮಂಗಳೂರಿನ ವೈದ್ಯಕೀಯ ವಿದ್ಯಾರ್ಥಿ ಕ್ಲಾಟನ್ ಅವರು ಉಕ್ರೇನ್​​ನಲ್ಲಿ ಸಿಲುಕಿಕೊಂಡಿದ್ದು, ಮನೆಯವರೊಂದಿಗೆ ವಿಡಿಯೋ ಕಾಲ್ ಮೂಲಕ ನಿರಂತರ ಸಂಪರ್ಕದಲ್ಲಿದ್ದಾರೆ.

ಉಕ್ರೇನ್​​ನಲ್ಲಿ ಸಿಲುಕಿದ ಮಂಗಳೂರು ಮೂಲದ ವಿದ್ಯಾರ್ಥಿ

author img

By

Published : Feb 24, 2022, 5:44 PM IST

Updated : Feb 24, 2022, 9:15 PM IST

ಮಂಗಳೂರು: ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ,‌ ಉಕ್ರೇನ್​​ನಲ್ಲಿ ಸಿಲುಕಿಕೊಂಡಿರುವ ಮಂಗಳೂರಿನ ವೈದ್ಯಕೀಯ ವಿದ್ಯಾರ್ಥಿ ಕ್ಲಾಟನ್ ಅವರು ಮನೆಯವರೊಂದಿಗೆ ವಿಡಿಯೋ ಕಾಲ್ ಮೂಲಕ ನಿರಂತರ ಸಂಪರ್ಕದಲ್ಲಿದ್ದಾರೆ. ಕ್ಲಾಟನ್ ಉಕ್ರೇನ್​ನಲ್ಲಿ ಸಿಲುಕಿಕೊಂಡಿದ್ದು, ಆತನ ಪೋಷಕರು ಆತಂಕದಲ್ಲಿದ್ದಾರೆ. ವಿಡಿಯೋ ಕಾಲ್​​ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕ್ಲಾಟನ್ ಸದ್ಯ ಯಾವುದೇ ಆತಂಕವಿಲ್ಲ. ಇಲ್ಲಿ 500 ಮಂದಿ ಭಾರತೀಯ ವಿದ್ಯಾರ್ಥಿಗಳಿದ್ದಾರೆ ಎಂದು ಮಾಹಿತಿ ನೀಡಿದರು.

ಉಕ್ರೇನ್​​ನಲ್ಲಿ ಸಿಲುಕಿದ ಮಗನ ಕುರಿತು ಪೋಷಕರ ಮಾಹಿತಿ ಹಂಚಿಕೊಂಡಿದ್ಧಾರೆ....

ಕ್ಲಾಟನ್ ತಂದೆ ಮರ್ವಿನ್ ಡಿಸೋಜಾ ಮಾತನಾಡಿ, ಬೆಳಗ್ಗಿನಿಂದ ನಾವು ಮಗನೊಂದಿಗೆ ಸಂಪರ್ಕದಲ್ಲಿದ್ದೇವೆ. ಅವನು ಇರುವ ಉಕ್ರೇನ್ ರಾಜಧಾನಿ ಕೀವ್​​ನ ಪ್ರದೇಶದಲ್ಲಿ ಯಾವುದೇ ಆತಂಕದ ಸ್ಥಿತಿ ನಿರ್ಮಾಣವಾಗಿಲ್ಲ. ಮಧ್ಯಾಹ್ನದ ಬಳಿಕ ಏರ್ಪೋಟ್ ಒಂದರಲ್ಲಿ ಮಿಸೈಲ್​ ಅಟ್ಯಾಕ್ ಆಗಿದೆ. ಆ ಬಳಿಕ ವಿದ್ಯಾರ್ಥಿಗಳಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಎಲ್ಲಾ ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ನಮಗೂ ನಮ್ಮ ಮಗ ಆದಷ್ಟು ಶೀಘ್ರ ನಮ್ಮ ಮನೆ ತಲುಪಬೇಕೆಂಬ ಆಸೆಯಿದೆ. ಭಾರತ ಸರ್ಕಾರ ಎಲ್ಲ ವಿದ್ಯಾರ್ಥಿಗಳನ್ನು ಶೀಘ್ರ ತಾಯ್ನಾಡಿಗೆ ಕರೆತರಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ದ.ಕ. ಜಿಲ್ಲಾಡಳಿತವು‌ ಆದಷ್ಟು ಶೀಘ್ರ ಕರೆತರುವ ಆಶ್ವಾಸನೆ ನೀಡಿದೆ ಎಂದು ಹೇಳಿದರು.

ಇದನ್ನೂ ಓದಿ : ಯುದ್ಧಪೀಡಿತ ಉಕ್ರೇನ್​ನಲ್ಲಿ ಸಿಲುಕಿದ ವಿಜಯಪುರದ MBBS ವಿದ್ಯಾರ್ಥಿನಿ

ಕ್ಲಾಟನ್ ತಾಯಿ‌ ಒಲಿನ್ ಮಾತನಾಡಿ, ಪ್ರತಿ 10 ನಿಮಿಷಕ್ಕೊಂದು ಸಲ ಕ್ಲಾಟನ್ ವಿಡಿಯೋ ಕಾಲ್ ಮಾಡುತ್ತಿದ್ದಾನೆ. ಅವನಿರುವ ಸ್ಥಳದಲ್ಲಿ ಯಾವುದೇ ಆತಂಕವಿಲ್ಲ. ಪರಿಸ್ಥಿತಿ ಎಲ್ಲವೂ ಸರಿಯಾಗಿದೆ, ರೈಲು ಯಾವುದೂ ಸ್ಥಗಿತಗೊಂಡಿಲ್ಲ. ಆದರೆ, ಈಗ ಮಧ್ಯಾಹ್ನದ ಬಳಿಕ ಮಿಸೈಲ್​ ಅಟ್ಯಾಕ್ ಆದ ಬಳಿಕ ಸ್ವಲ್ಪ ಆತಂಕದ ಸ್ಥಿತಿ ಉಂಟಾಗಿದೆ. ಭಾರತದ ಎಂಬೆಸಿ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡುತ್ತೇವೆ ಎಂದು ಧೈರ್ಯ ತುಂಬಿದೆಯಂತೆ.

ನಾವು ಹೇಳುವವರೆಗೆ ಹಾಸ್ಟೆಲ್​​ನಲ್ಲಿ ಉಳಿದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದಾರೆ. ಈಗ ಫ್ಲೈಟ್ ಸ್ಥಗಿತಗೊಂಡಿದೆ. ಭಾರತ ಸರಕಾರ ಮಾಡಿರುವ ಇವಾಕ್ವೇಷನ್ ಪ್ರೊಸಿಜರ್ ಸ್ಥಗಿತಗೊಂಡಿದೆ. ಎಂಬಿಬಿಎಸ್ ಮಾಡಲೆಂದು 90 ದಿನಗಳ ಮೊದಲು ಉಕ್ರೇನ್​ಗೆ ಆತ ಹೋಗಿದ್ದಾನೆ. ಈ ಬಗ್ಗೆ ಮೊದಲೇ ಸೂಚನೆಯಿದ್ದರೆ ಆತನನ್ನು ಉಕ್ರೇನ್​​ಗೆ ಕಳುಹಿಸುತ್ತಿರಲಿಲ್ಲ ಎಂದು ತಮ್ಮ ಆತಂಕ ವ್ಯಕ್ತಪಡಿಸಿದರು.

Last Updated : Feb 24, 2022, 9:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.