ಮಂಗಳೂರು: ಮೊಬೈನ್ ಫೋನ್ಗಳ ಕಳವು ಅಥವಾ ಮಿಸ್ಸಿಂಗ್ ಸಂದರ್ಭದಲ್ಲಿ ಅದನ್ನು ಮತ್ತೆ ಪಡೆಯಲು ಜನರು ಸಾಕಷ್ಟು ಕಷ್ಟ ಪಡುತ್ತಾರೆ. ಇದೀಗ, ಸಿಐಇಆರ್ ಪೋರ್ಟಲ್‌ನಲ್ಲಿ ಕಳೆದುಹೋದ ಫೋನ್ಗಳನ್ನು ಮರಳಿ ಪಡೆಯಲು ಸುಲಭ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರ ಅನುಕೂಲ ಪಡೆದುಕೊಂಡ 30 ಮಂದಿ ಮಂಗಳೂರಿನಲ್ಲಿ ತಮ್ಮ ಮೊಬೈಲ್ ಮರಳಿ ಪಡೆದುಕೊಂಡರು.
ಸಿಐಇಆರ್ ಪೋರ್ಟಲ್‌ನಲ್ಲಿ ಸಂಪೂರ್ಣ ಮಾಹಿತಿ ದಾಖಲಿಸಿದರೆ ಪೊಲೀಸರು ಅದರ ಜಾಡು ಹಿಡಿದು ಮೊಬೈಲ್ ಫೋನ್ಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಈಗಾಗಲೇ 402 ಬ್ಲಾಕ್ ರಿಕ್ವೆಸ್ಟ್ ಬಂದಿದೆ. ಈ ಪೈಕಿ 39 ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಲಾಗಿದೆ. ಅವುಗಳಲ್ಲಿ ಪತ್ತೆಯಾಗಿರುವ 30 ಮೊಬೈಲ್ ಫೋನ್ಗಳನ್ನು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್. ಜೈನ್ ಅವರು ಗುರುವಾರ ವಾರಸುದಾರರಿಗೆ ಹಸ್ತಾಂತರಿಸಿದರು.
ಇದನ್ನೂ ಓದಿ: ಇ - ಪೋರ್ಟಲ್ ನೂತನ ಪ್ರಯೋಗ: 30 ಮೊಬೈಲ್‌ಗಳನ್ನು ಪತ್ತೆ ಹಚ್ಚಿದ ಹು - ಧಾ ಪೊಲೀಸರು
ಕಳೆದುಹೋದ ಫೋನ್ಗಳು ದುರುಪಯೋಗವಾಗದಂತೆ ಅವುಗಳನ್ನು ಅನ್ಬ್ಲಾಕ್ ಮಾಡಲು ಸಿಇಐಆರ್ ಪೋರ್ಟಲ್ ಅನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಮೂಲಕ ಮೊಬೈಲ್ ಕಳೆದುಕೊಂಡವರು ಹತ್ತಿರದ ಪೊಲೀಸ್ ಠಾಣೆಯಲ್ಲಿ ಅಥವಾ ಸ್ವತಃ ತಾವೇ ಕೆಎಸ್ ಆ್ಯಪ್ನಲ್ಲಿ ದೂರು ಸಲ್ಲಿಸಬಹುದು. ಬಳಿಕ (www.celr.gov.in) ಪೋರ್ಟಲ್‌ನಲ್ಲಿ ಕಳೆದು ಹೋಗಿರುವ ಮೊಬೈಲ್ ವಿವರ ಹಾಗೂ ದೂರಿನ ವಿವರಗಳನ್ನು ನಮೂದಿಸಿ ಸ್ವತಃ ಅರ್ಜಿದಾರರೇ ಬ್ಲಾಕ್ ರಿಕ್ವೆಸ್ಟ್ ಅನ್ನು ನೇರವಾಗಿ ಸಲ್ಲಿಸಬಹುದು. ಅಲ್ಲದೇ, ಸ್ಥಳೀಯ ಪೊಲೀಸ್ ಠಾಣೆಗಳಲ್ಲೂ ಬ್ಲಾಕ್ ರಿಕ್ವೆಸ್ಟ್ಗೆ ದೂರು ನೀಡಬಹುದು.
ಇದನ್ನೂ ಓದಿ: 72 ಲಕ್ಷ ವಿಮೆ ಮೊತ್ತ ಆಸೆಗೆ ನಾಪತ್ತೆ: ಕುಟುಂಬ ರಹಸ್ಯ ಭೇದಿಸಿದ ಪೊಲೀಸರು, ಆರೋಪಿ ಬಂಧನ
ನಿನ್ನೆ ಪೊಲೀಸ್ ಕಮಿಷನರ್ ಅವರು ಸುಮಾರು 6 ರಿಂದ 7 ಲಕ್ಷ ರೂ. ಮೌಲ್ಯದ 30 ಫೋನ್ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಅಲ್ಲದೇ, ಇನ್ನೂ ಸುಮಾರು 20 ಲಕ್ಷ ರೂ. ಮೌಲ್ಯದ ಮೊಬೈಲ್ ಫೋನ್ಗಳು ಹಸ್ತಾಂತರಕ್ಕೆ ಬಾಕಿಯಿದೆ ಎಂದು ತಿಳಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿರುವ ಮಹಿಳೆ, ವೈದ್ಯೆ ಸೇರಿದಂತೆ 30 ಮಂದಿ ಕಳೆದು ಹೋದ ತಮ್ಮ ಮೊಬೈಲ್ ಫೋನ್ ಪಡೆದುಕೊಂಡರು.
ಇದನ್ನೂ ಓದಿ: UPI ವಂಚನೆ ಬಗ್ಗೆ ಇರಲಿ ಎಚ್ಚರ! ಪಿನ್ ಸೆಟ್ ಮಾಡುವುದಕ್ಕೆ ಅಸಡ್ಡೆ ಬೇಡ
30 ಮೊಬೈಲ್ ಪತ್ತೆ ಹಚ್ಚಿದ ಹು-ಧಾ ಪೊಲೀಸರು: ಮಾರ್ಚ್ 4 ರಂದು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ಇ-ಪೋರ್ಟಲ್ ಸಹಾಯ ಪಡೆದು ಸುಮಾರು ಮೂರು ಲಕ್ಷ ರೂ. ಮೌಲ್ಯದ 30 ಮೊಬೈಲ್‌ಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು. ಅವುಗಳನ್ನು ಮೊಬೈಲ್ ಮಾಲೀಕರಿಗೆ ಹಿಂದಿರುಗಿಸಿದ್ದರು.
ಇದನ್ನೂ ಓದಿ: ಆನ್‌ಲೈನ್ ಶಾಪಿಂಗ್ ವಂಚನೆ:ಆರ್ಡರ್ ಮಾಡಿದ ಮೊಬೈಲ್ ಫೋನ್ ಬದಲಾಗಿ ಬಂತು ಡಮ್ಮಿ ಫೋನ್, ಲೈಫ್ ಬಾಯ್ ಸೋಪ್!