ETV Bharat / state

ಕೋರ್ಟ್‌ಗೆ ಹಾಜರಾಗದೆ 10 ವರ್ಷ ತಲೆಮರೆಸಿಕೊಂಡ ಕೇರಳದ ಆರೋಪಿ ಬಂಧನ - ತಲೆಮರೆಸಿಕೊಂಡಿದ್ದ ಆರೋಪಿ

ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

Absconding accused arrested
ಆರೋಪಿ ಮಹಮ್ಮದ್ ಕುಂಞಿ
author img

By

Published : Sep 9, 2022, 10:07 AM IST

Updated : Sep 9, 2022, 3:46 PM IST

ಮಂಗಳೂರು: ಕಳೆದ 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕೇರಳ ಮೂಲದ ಆರೋಪಿಯನ್ನು ಬಜ್ಪೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಾಸರಗೂಡು ಜಿಲ್ಲೆಯ ಹರಿಪುರಂನ ಮಹಮ್ಮದ್ ಕುಂಞಿ(53) ಬಂಧಿತ ಆರೋಪಿ.

ಈತ 2008ರ ಅ.5ರಂದು ನಕಲಿ‌ ಪಾಸ್‌ಪೋರ್ಟ್ ಬಳಸಿ ದುಬೈಗೆ ಹಾರಲು ಯತ್ನಿಸಿದ್ದ‌. ಈ ವೇಳೆ ಇಮಿಗ್ರೆಷನ್ ಅಧಿಕಾರಿಗಳು ಈತನನ್ನು ವಶಕ್ಕೆ ಪಡೆದುಕೊಂಡು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ‌ ಮಹಮ್ಮದ್ ಕುಂಞಿ ಜಾಮೀನು ಪಡೆದು ಹೊರಬಂದಿದ್ದಾನೆ.

ಈತ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ 10 ವರ್ಷಗಳ ಕಾಲ ಕೇರಳದಲ್ಲಿ ವಿಳಾಸ ಬದಲಿಸುತ್ತಾ ತಲೆಮರೆಸಿಕೊಂಡಿದ್ದ. ಸದ್ಯ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ: 6 ತಿಂಗಳು ನಾಪತ್ತೆ ಬಳಿಕ ಮಹಿಳೆ ದಿಢೀರ್​ ಪ್ರತ್ಯಕ್ಷ.. ಕೊಲೆ ಕೇಸಲ್ಲಿ ಜೈಲು ಪಾಲಾಗಿದ್ದ ಗಂಡ!

Last Updated : Sep 9, 2022, 3:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.