ಮಂಗಳೂರು: ಕೋವಿಡ್ ಹಿನ್ನೆಲೆ ಮಂಗಳೂರಿನ ಎಂಆರ್ಪಿಎಲ್ ಸಂಸ್ಥೆಗೆ 2021-22ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 86 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.
ಮೊದಲ ತ್ರೈಮಾಸಿಕ ಅವಧಿ ಜೂನ್ 30ಕ್ಕೆ ಕೊನೆಗೊಂಡಿದ್ದು, ಈ ವೇಳೆ ಎಂಆರ್ಪಿಎಲ್ಗೆ 86 ಕೋಟಿ ರೂ. ನಷ್ಟ ಉಂಟಾಗಿದೆ. ಕಳೆದ ಆರ್ಥಿಕ ವರ್ಷದ ಈ ಅವಧಿಗೆ ಸಂಸ್ಥೆಗೆ 524 ಕೋಟಿ ರೂ. ನಷ್ಟ ಸಂಭವಿಸಿತ್ತು. ಈ ತ್ರೈಮಾಸಿಕ ಅವಧಿಯಲ್ಲಿ 15,143 ಕೋಟಿ ರೂ. ವ್ಯವಹಾರ ನಡೆದಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 6,408 ಕೋಟಿ ವ್ಯವಹಾರ ನಡೆದಿತ್ತು.
ಕೊರೊನಾ ಕಾರಣದಿಂದ ಇಂಧನಕ್ಕೆ ಬೇಡಿಕೆ ಕಡಿಮೆಯಾಗಿದ್ದರಿಂದ ಎಂಆರ್ಪಿಎಲ್ ಸಂಸ್ಥೆಯ ವ್ಯವಹಾರಕ್ಕೆ ಹೊಡೆತ ಬಿದ್ದಿದೆ. ಕೊರೊನಾ ಸೋಂಕಿನ ತಡೆಗೆ ಲಾಕ್ಡೌನ್ ವಿಧಿಸಲಾಗಿತ್ತು. ಈ ವೇಳೆ, ಎಂಆರ್ಪಿಎಲ್ನ ಕೆಲ ಘಟಕಗಳು ಬಂದ್ ಆಗಿದ್ದು, ತೈಲ ಸರಬರಾಜಿಗೆ ಹೊಡೆತ ಬಿದ್ದಿದೆ.
ಇನ್ನು ಕಂಪನಿಯ ಷೇರು ಮುಖಬೆಲೆಯನ್ನು 10 ರೂ. ಗಳಿಂದ 10 ಸಾವಿರ ರೂ.ಗಳಿಗೆ ಏರಿಸಲು ಅನುಮತಿ ದೊರಕಿದ್ದು, ಈ ಮೂಲಕ ಸಂಪನ್ಮೂಲ ಕ್ರೋಢೀಕರಣಕ್ಕೆ ಕಂಪನಿ ಮುಂದಾಗಿದೆ.