ETV Bharat / state

ಪರಂಪರೆ ನೆಲೆಗಟ್ಟಿನಲ್ಲಿ ಬದುಕಿದಾಗ ಜೀವನ ಸಾರ್ಥಕ: ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ - ramakunja mangalore latest news

ಹಳೆನೇರೆಂಕಿಗುತ್ತು ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಆವರಣದಲ್ಲಿ ಶ್ರೀ ದೈವಗಳ ನೇಮೋತ್ಸವ ಹಾಗೂ ಬ್ರಹ್ಮಬೈದರ್ಕಳ ಜಾತ್ರೋತ್ಸವದ ಧರ್ಮ ಜಾಗೃತಿ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಮಾತನಾಡಿದ ಸುಬ್ರಹ್ಮಣ್ಯ ಸಂಪುಟನರಸಿಂಹಸ್ವಾಮಿ ಮಠಾಧಿಪತಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ತುಳುನಾಡಿನಲ್ಲಿ ದೈವಾರಾಧನೆ, ನಾಗಾರಾಧನೆ ಪರಂಪರೆಯಿಂದ ನಾಡು ಸಮೃದ್ಧವಾಗಿದ್ದು, ಇಲ್ಲಿನ ಜನರ ಬದುಕು ಸಾರ್ಥಕವನ್ನು ಕಂಡುಕೊಂಡಿದೆ ಎಂದು ಹೇಳಿದರು.

Mangalore Religious Fair Awareness Meeting at Ramakunja
ಪರಂಪರೆ ನೆಲೆಗಟ್ಟಿನಲ್ಲಿ ಬದುಕಿದಾಗ ಜೀವನ ಸಾರ್ಥಕ:  ಸುಬ್ರಹ್ಮಣ್ಯ ಶ್ರೀ
author img

By

Published : Jan 12, 2020, 11:27 AM IST

Updated : Jan 12, 2020, 1:03 PM IST

ರಾಮಕುಂಜ: ಪರಶುರಾಮ ಸೃಷ್ಠಿಯ ತುಳುನಾಡಿನಲ್ಲಿ ದೈವಾರಾಧನೆ, ನಾಗಾರಾಧನೆ ಪರಂಪರೆಯಿಂದ ನಾಡು ಸಮೃದ್ಧವಾಗಿದೆ. ಇಲ್ಲಿನ ಜನರ ಬದುಕು ಸಾರ್ಥಕ ಕಂಡುಕೊಂಡಿದೆ ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹಸ್ವಾಮಿ ಮಠಾಧಿಪತಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.

ಹಳೆನೇರೆಂಕಿಗುತ್ತು ಶ್ರೀಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಆವರಣದಲ್ಲಿ ಶ್ರೀದೈವಗಳ ನೇಮೋತ್ಸವ ಹಾಗೂ ಬ್ರಹ್ಮಬೈದರ್ಕ ಜಾತ್ರೋತ್ಸವದ ಧರ್ಮ ಜಾಗೃತಿ ಸಭೆಯಲ್ಲಿ ಮಾತನಾಡಿದರು.

Mangalore Religious Fair Awareness Meeting at Ramakunja
ದೈವಗಳ ನೇಮೋತ್ಸವ ಹಾಗೂ ಬ್ರಹ್ಮಬೈದರ್ಕ ಜಾತ್ರೋತ್ಸವದ ಧರ್ಮ ಜಾಗೃತಿ ಸಭೆ

40 ವರ್ಷಗಳಿಂದ ಇಲ್ಲಿ ನಿಂತು ಹೋಗಿದ್ದ ಧಾರ್ಮಿಕ ಕಾರ್ಯಗಳನ್ನು ದೈವಸ್ಥಾನಗಳ ಅಭಿವೃದ್ಧಿಯೊಂದಿಗೆ ಕಳೆದ ಹತ್ತು ವರ್ಷಗಳಿಂದ ಅದ್ಧೂರಿಯಾಗಿ ಜಾತ್ರೋತ್ಸವ ನೆರವೇರಿಸುತ್ತಾ ಬಂದಿರುವ ದೈವಸ್ಥಾನದ ಆಡಳಿತ ಮೊಕ್ತೇಸರ ಪುತ್ತೂರು ಎಸ್ ಕೆ ಆನಂದ್ ದಂಪತಿಯನ್ನು ಊರಿನವರ ಪರವಾಗಿ ಸನ್ಮಾನಿಸಿ ಆಶೀರ್ವಚನ ನೀಡಿದರು.

ತುಳುನಾಡು ಜನರ ನಿತ್ಯ ಜೀವನದಲ್ಲಿ ದೈವಗಳ ನಂಬಿಕೆ ಒಡನಾಟ ಅತ್ಯಂತ ನಿಕಟವಾಗಿದೆ. ದೈವೀ ಕಾರ್ಯಗಳು ಜನರನ್ನು ಧಾರ್ಮಿಕವಾಗಿ ಒಗ್ಗೂಡಿಸಿ ಸಾಮಾಜಿಕ ಸಾಮರಸ್ಯಕ್ಕೆ ಪ್ರೇರಣೆ ನೀಡಿ ದೇಶ ಭಕ್ತಿ, ರಾಷ್ಟ್ರ ಭಕ್ತಿಗೆ ಪ್ರೇರಣೆಯಾಗುತ್ತಿದೆ. ನಮ್ಮ ದೈವಗಳಿಗೆ ಅಂತಹ ಮಹಾನ್ ಶಕ್ತಿ ಇದೆ. ಎಸ್ ಕೆ ಆನಂದ ಆವರು ಪಾಳುಬಿದ್ದಿದ್ದ ಹಳೆನೇರೆಂಕಿ ಗುತ್ತಿನ ದೈವಗಸ್ಥಾನಗಳನ್ನ ಜೀರ್ಣೋದ್ಧಾರಗೊಳಿಸಿ ಇಲ್ಲಿ ಗತವೈಭವವನ್ನು ಮೆರೆಸಿದ್ದಾರೆಂದರು.

ಆ ಮೂಲಕ ಇಲ್ಲಿ ದೈವೀ ಶಕ್ತಿ ಹೆಚ್ಚುವುದರೊಂದಿಗೆ ಸಾವಿರಾರು ಜನ ಜಾತಿಮತ ಬೇಧವಿಲ್ಲದೆ ಸಾಮರಸ್ಯದಿಂದ ಬಾಳುವಂತಾಗಿದೆ ಎಂದು ಸ್ವಾಮೀಜಿ ಹೇಳಿದರು. ವೇದಿಕೆಯಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು ಮತ್ತು ಕಾರ್ಯಕ್ರಮದಲ್ಲಿ ಊರಿನ ಜನರು ಉಪಸ್ಥಿತರಿದ್ದರು.

Intro:ರಾಮಕುಂಜ

ಪರಶುರಾಮ ಸೃಷ್ಠಿಯ ತುಳುನಾಡಿನಲ್ಲಿ ದೈವರಾಧೆನೆ,
ನಾಗಾರಧಾನೆ ಪರಂಪರೆಯಿಂದ ನಾಡು ಸಮೃದ್ಧವಾಗಿದೆ.ಇಲ್ಲಿನ ಜನರ ಬದುಕು ಸಾರ್ಥಕ್ಯವನ್ನು ಕಂಡುಕೊಂಡಿದೆ ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.Body:ಅವರು ಹಳೆನೇರೆಂಕಿಗುತ್ತು ಶ್ರೀ
ಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ
ಬ್ರಹ್ಮಬೈದರ್ಕಳ ಗರಡಿಯ ಆವರಣದಲ್ಲಿ ಶ್ರೀ ದೈವಗಳ
ನೇಮೋತ್ಸವ ಹಾಗೂ ಬ್ರಹ್ಮಬೈದರ್ಕ ಜಾತ್ರೋತ್ಸವದ ಧರ್ಮ ಜಾಗೃತಿ ಸಭೆಯಲ್ಲಿ ಮಾತನಾಡಿದರು.

40 ವರ್ಷಗಳಿಂದ ಇಲ್ಲಿ ನಿಂತು
ಹೋಗಿದ್ದ ಧಾರ್ಮಿಕ ಕಾರ್ಯಗಳನ್ನು
ದೈವಸ್ಥಾನಗಳ ಅಭಿವೃದ್ಧಿಯೊಂದಿಗೆ ಕಳೆದ ಹತ್ತು ವರ್ಷಗಳಿಂದ ಅದ್ದೂರಿಯಾಗಿ ಜಾತ್ರೋತ್ಸವ
ನೆರವೇರಿಸುತ್ತಾ ಬಂದಿರುವ ದೈವಸ್ಥಾನದ ಆಡಳಿತ ಮೊಕ್ತೇಸರ ಪುತ್ತೂರು ಮಾಸ್ಟರ್ ಪ್ಲಾನರಿಯ
ಎಸ್.ಕೆ.ಆನಂದ್ ದಂಪತಿಯನ್ನು ಊರವರ ಪರವಾಗಿ ಸನ್ಮಾನಿಸಿ ಆಶೀರ್ವಚನ ನೀಡಿದರು.
ತುಳುನಾಡಿನ ಜನರ ನಿತ್ಯ ಜೀವನದಲ್ಲಿ ದೈವಗಳ ನಂಬಿಕೆ ಒಡನಾಟ ಅತ್ಯಂತ ನಿಕಟವಾಗಿದೆ,ದೈವೀ ಕಾರ್ಯಗಳು ಜನರನ್ನು ಧಾರ್ಮಿಕವಾಗಿ ಒಗ್ಗೂಡಿಸಿ ಸಾಮಾಜಿಕ ಸಾಮಾರಸ್ಯಕ್ಕೆ ಪ್ರೇರಣೆ ನೀಡಿ ದೇಶ ಭಕ್ತಿ, ರಾಷ್ಟ್ರ ಭಕ್ತಿಗೆ ಪ್ರೇರಣೆಯಾಗುತ್ತಿದೆ, ನಮ್ಮ ದೈವಗಳಿಗೆ ಅಂತಹ ಮಹಾನ್ ಶಕ್ತಿ ಇದೆ, ಎಸ್.ಕೆ ಆನಂದ ಆವರು ಪಾಳುಬಿದ್ದಿದ್ದ ಹಳೆನೇರೆಂಕಿ ಗುತ್ತಿನ ದೈವಗಸ್ಥಾನಗಳನ್ನು
ಜೀರ್ಣೋದ್ಧಾರಗೊಳಿಸಿ ಇಲ್ಲಿ ಗತವೈಭವವನು
ಮೆರೆಸಿದ್ದಾರೆ. ಆ ಮೂಲಕ ಇಲ್ಲಿ ದೈವೀ ಶಕ್ತಿ
ಹೆಚ್ಚುವುದರೊಂದಿಗೆ ಸಾವಿರಾರು ಜನ ಜಾತಿಮತ
ಭೇಧವಿಲ್ಲದೆ ಸಾಮರಸ್ಯದಿಂದ ಬಾಳುವಂತಾಗಿದೆ ಎಂದು ಸ್ವಾಮೀಜಿ ಹೇಳಿದರು.
ವೇದಿಕೆಯಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು ಮತ್ತು ಕಾರ್ಯಕ್ರಮಕ್ಕೆ ಊರಿನ ಜನರು ಉಪಸ್ಥಿತರಿದ್ದರು.Conclusion:ಫೋಟೋ ಹಾಕಲಾಗಿದೆ.
Last Updated : Jan 12, 2020, 1:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.