ETV Bharat / state

ಕಾಮಗಾರಿ ಹಿನ್ನೆಲೆ: ಮಂಗಳೂರು-ಪುತ್ತೂರು-ಸುಬ್ರಮಣ್ಯ ಎಕ್ಸ್‌ಪ್ರೆಸ್‌ ರೈಲು ಸಂಚಾರದಲ್ಲಿ ವ್ಯತ್ಯಯ - ಸೆಂಟ್ರಲ್ ಡೈಲಿ ಎಕ್ಸ್‌ಪ್ರೆಸ್ ರದ್ದು

ರೈಲ್ವೆ ಕಾಮಗಾರಿ - ಮಂಗಳೂರು-ಪುತ್ತೂರು-ಸುಬ್ರಮಣ್ಯ ಎಕ್ಸ್‌ಪ್ರೆಸ್‌ ರೈಲು ಸಂಚಾರದಲ್ಲಿ ವ್ಯತ್ಯಯ - ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಮಾಹಿತಿ

Representative image
ಪ್ರಾತಿನಿಧಿಕ ಚಿತ್ರ
author img

By

Published : Feb 6, 2023, 2:30 PM IST

ಸುಬ್ರಮಣ್ಯ(ದಕ್ಷಿಣ ಕನ್ನಡ): ದಕ್ಷಿಣ ರೈಲ್ವೆ ಇಲಾಖೆ ಸೂಚನೆಯಂತೆ ಮಂಗಳೂರಿನ ಜೋಕಟ್ಟೆ ಮತ್ತು ಪಡೀಲ್ ನಿಲ್ದಾಣಗಳ ನಡುವಿನ ಹಳೆಯ ಸುರಂಗದ ಸಂಪೂರ್ಣ ಟ್ರ್ಯಾಕ್ ನವೀಕರಣ (CTR) ಕಾರ್ಯಗಳಿಗಾಗಿ ಲೈನ್ ಬ್ಲಾಕ್/ಪವರ್ ಬ್ಲಾಕ್‌ನಿಂದ ಕೆಲವು ರೈಲುಗಳನ್ನು ರದ್ದುಗೊಳಿಸಿ, ಕೆಲವು ರೈಲುಗಳನ್ನು ಭಾಗಶಃ ರದ್ದು ಹಾಗೂ ನಿಯಂತ್ರಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದೆ. ಕಾಮಗಾರಿ ಹಿನ್ನೆಲೆ ಫೆ.5ರಿಂದ ರೈಲು ಸಂಚಾರದಲ್ಲಿ ವ್ಯತ್ಯಾಸವಾಗಲಿದೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದರು.

ಸೆಂಟ್ರಲ್ ಡೈಲಿ ಎಕ್ಸ್‌ಪ್ರೆಸ್ ರದ್ದು: ಫೆ.7 ಮತ್ತು 8ರಂದು, ರೈಲು ಸಂಖ್ಯೆ 06485/06484 ಮಂಗಳೂರು ಸೆಂಟ್ರಲ್- ಕಬಕ ಪುತ್ತೂರು ಮಂಗಳೂರು ಸೆಂಟ್ರಲ್ ಡೈಲಿ ಎಕ್ಸ್‌ಪ್ರೆಸ್ ವಿಶೇಷ ಮತ್ತು ರೈಲು ಸಂಖ್ಯೆ 06489/06488 ಮಂಗಳೂರು ಸೆಂಟ್ರಲ್ -ಸುಬ್ರಹ್ಮಣ್ಯ ರಸ್ತೆ- ಮಂಗಳೂರು ಸೆಂಟ್ರಲ್ ಡೈಲಿ ಎಕ್ಸ್‌ಪ್ರೆಸ್ ರದ್ದಾಗಲಿದೆ.

ಪ್ರಕಟಣೆ ಪ್ರತಿ
ಪ್ರಕಟಣೆ ಪ್ರತಿ

ಭಾಗಶಃ ರದ್ದತಿ ರೈಲುಗಳು: ಫೆ. 7 ರಂದು ವಿಜಯಪುರದಿಂದ ಹೊರಡುವ ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಜಂಕ್ಷನ್ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಹಾಸನ ಮತ್ತು ಮಂಗಳೂರು ಜಂಕ್ಷನ್ ನಡುವೆ ಭಾಗಶಃ ರದ್ದುಗೊಳ್ಳುತ್ತದೆ ಮತ್ತು ಈ ರೈಲು ಮಂಗಳೂರಿನ ಬದಲು ಹಾಸನದಲ್ಲಿ ಕೊನೆಗೊಳ್ಳುತ್ತದೆ ಎಂದು ಆದೇಶವಿದ್ದರೂ ಸದ್ಯ ಮಂಗಳೂರಿಗೆ ಪ್ರಯಾಣ ಮುಂದುವರೆಸಿದೆ.

ಪ್ರಕಟಣೆ ಪ್ರತಿ
ಪ್ರಕಟಣೆ

2023 ಫೆಬ್ರವರಿ 7 ಮತ್ತು 8 ರಂದು ಮಂಗಳೂರು ಜಂಕ್ಷನ್‌ನಿಂದ ಹೊರಡುವ ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್-ವಿಜಯಪುರ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಮಂಗಳೂರು ಜಂಕ್ಷನ್ ಮತ್ತು ಹಾಸನದ ನಡುವೆ ಭಾಗಶಃ ರದ್ದುಗೊಳ್ಳುತ್ತದೆ ಮತ್ತು ಮಂಗಳೂರು ಜಂಕ್ಷನ್ ಬದಲಿಗೆ ಹಾಸನದಿಂದ ಹೊರಡುತ್ತದೆ ಎಂದು ಆದೇಶವಿದ್ದರೂ ಅದು ಬದಲಾವಣೆ ಆಗಿದೆ ಎಂದು ತಿಳಿದು ಬಂದಿದೆ.

ಪ್ರಕಟಣೆ ಪ್ರತಿ
ಪ್ರಕಟಣೆ ಪ್ರತಿ

ಫೆಬ್ರವರಿ 7, 2023 ರಂದು ಕೆಎಸ್​ಆರ್​​ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 16595 ಕೆಎಸ್​ಆರ್​ ಬೆಂಗಳೂರು- ಕಾರವಾರ ಪಂಚಗಂಗಾ ಡೈಲಿ ಎಕ್ಸ್‌ಪ್ರೆಸ್ ಪಡೀಲ್ ಮತ್ತು ಜೋಕಟ್ಟೆ ನಿಲ್ದಾಣಗಳ ನಡುವೆ 30 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ. ಫೆ.7 ರಂದು ಕೆಎಸ್​ಆರ್​ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 16511 ಕೆಎಸ್​ಆರ್​ ಬೆಂಗಳೂರು- ಕಣ್ಣೂರು ಡೈಲಿ ಎಕ್ಸ್‌ಪ್ರೆಸ್ ಅನ್ನು ಪಡೀಲ್ ನಿಲ್ದಾಣದಲ್ಲಿ 25 ನಿಮಿಷಗಳವರೆಗೆ ಮತ್ತು ಕಣ್ಣೂರು ನಿಲ್ದಾಣಕ್ಕೆ 30 ನಿಮಿಷಗಳ ತಡವಾಗಿ ತಲುಪಲು ನಿಯಂತ್ರಿಸಲಾಗುತ್ತದೆ.

ರೈಲು ಸಂಖ್ಯೆ 16585 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಫೆ.7 ರಂದು ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಡುವುದು ಪಡೀಲ್ ನಿಲ್ದಾಣಕ್ಕೆ 25 ನಿಮಿಷ ಮತ್ತು ಮಂಗಳೂರು ಸೆಂಟ್ರಲ್‌ಗೆ 30 ನಿಮಿಷ ತಡವಾಗಿ ತಲುಪುವುದು. ರೈಲು ಸಂಖ್ಯೆ 16516 ಕಾರವಾರ-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ ಕಾರವಾರದಿಂದ ಫೆಬ್ರವರಿ 7, 2023 ರಂದು ಹೊರಡುವುದು ಜೋಕಟ್ಟೆ ಮತ್ತು ಮಂಗಳೂರು ಜಂಕ್ಷನ್ ನಡುವೆ 45 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ. ರೈಲು ಸಂಖ್ಯೆ 16575 ಯಶವಂತಪುರ-ಮಂಗಳೂರು ಜಂಕ್ಷನ್ ಟ್ರೈ-ಸಾಪ್ತಾಹಿಕ ಎಕ್ಸ್‌ಪ್ರೆಸ್ ಹೊರಡುತ್ತದೆ

ಫೆಬ್ರವರಿ 7, 2023 ರಂದು ಯಶವಂತಪುರ ಟ್ರೈನ್ ಪಡೀಲ್ ನಿಲ್ದಾಣದಲ್ಲಿ 25 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ ಮತ್ತು ಮಂಗಳೂರು ಜಂಕ್ಷನ್‌ಗೆ ಬರುವುದು 30 ನಿಮಿಷ ತಡವಾಗಿ ತಲುಪಲಿದೆ. ರೈಲು ಸಂಖ್ಯೆ 06487 ಮಂಗಳೂರು ಸೆಂಟ್ರಲ್ - ಕಬಕ ಪುತ್ತೂರು ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು 2023 ಫೆಬ್ರವರಿ 7 ರಂದು ಮಂಗಳೂರು ಸೆಂಟ್ರಲ್‌ನಿಂದ ಹೊರಡುವುದು ಮಂಗಳೂರು ಜಂಕ್ಷನ್ ಮತ್ತು ಪಡೀಲ್ ನಿಲ್ದಾಣಗಳ ನಡುವೆ 25 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ. ರೈಲು ಸಂಖ್ಯೆ 16586 ಮಂಗಳೂರು ಸೆಂಟ್ರಲ್- ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ಅನ್ನು ಫೆಬ್ರವರಿ 7ರಂದು ಮಂಗಳೂರು ಸೆಂಟ್ರಲ್‌ನಿಂದ ಹೊರಡುವುದು ಮಂಗಳೂರು ಮತ್ತು ಪಡೀಲ್ ನಿಲ್ದಾಣದ ನಡುವೆ 25 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.

ಫೆಬ್ರವರಿ 7, 2023 ರಂದು ಕಣ್ಣೂರಿನಿಂದ ಹೊರಡುವ ರೈಲು ಸಂಖ್ಯೆ 16512 ಕಣ್ಣೂರು ಕೆಎಸ್​ಆರ್​ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ಅನ್ನು ಪಡೀಲ್ ನಿಲ್ದಾಣದಲ್ಲಿ 25 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ. ಫೆ.7ರಂದು ಕಬಕ ಪುತ್ತೂರಿನಿಂದ ಹೊರಡುವ ರೈಲು ಸಂಖ್ಯೆ 06486 ಕಬಕ ಪುತ್ತೂರು- ಮಂಗಳೂರು ಸೆಂಟ್ರಲ್ ಡೈಲಿ ಎಕ್ಸ್‌ಪ್ರೆಸ್ ವಿಶೇಷ ಪಡೀಲ್ ನಿಲ್ದಾಣದಲ್ಲಿ 25 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.

ರೈಲು ಸಂಖ್ಯೆ 16596 ಕಾರವಾರ- ಕೆಎಸ್‌ಆರ್ ಬೆಂಗಳೂರು ಪಂಚಗಂಗಾ ಡೈಲಿ ಎಕ್ಸ್‌ಪ್ರೆಸ್ ಕಾರವಾರದಿಂದ ಫೆ.7ರಂದು ಹೊರಡುವುದು. ಜೋಕಟ್ಟೆ ಮತ್ತು ಮಂಗಳೂರು ಜಂಕ್ಷನ್ ನಡುವೆ 45 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ. ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್ ಯಶವಂತಪುರ ಗೋಮಟೇಶ್ವರ ಟ್ರೈ- ವೀಕ್ಲಿ ಎಕ್ಸ್‌ಪ್ರೆಸ್ ಫೆ.8ರಂದು ಮಂಗಳೂರು ಜಂಕ್ಷನ್‌ನಿಂದ ಒಂದು ಗಂಟೆ ತಡವಾಗಿ ಹೊರಡಲಿದೆ.

ರೈಲು ಸಂಖ್ಯೆ. 16596 ಕಾರವಾರ- ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ಕಾರವಾರದಿಂದ ಫೆ.8 ರಿಂದ ಮಾ. 3, 2023 ರವರೆಗೆ ದಕ್ಷಿಣ ರೈಲ್ವೆ ವ್ಯಾಪ್ತಿಯ ಮೇಲೆ 20 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ. ಮತ್ತು ಮತ್ತು ಪ್ರಯಾಣಿಕರಿಗೆ ತೊಂದರೆಯಾಗದಂತೆ ಕೆಲವು ನಿಲ್ದಾಣಗಳಲ್ಲಿ ರೈಲ್ವೆ ಇಲಾಖೆ ಬಸ್ ವ್ಯವಸ್ಥೆ ಕಲ್ಪಿಸಿದೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ನೇರಳೆ ಮಾರ್ಗದ ತಾಂತ್ರಿಕ ದೋಷ ನಿವಾರಣೆ, ಸಂಚಾರ ಪುನಾರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.