ಮಂಗಳೂರು: ಕೊರೊನಾ ಲಾಕ್ಡೌನ್ ಬಳಿಕ ಸ್ಥಗಿತಗೊಂಡ ಮಂಗಳೂರು ಮತ್ತು ನವದೆಹಲಿ ನಡುವಿನ ವಿಮಾನ ಸಂಚಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಮತ್ತೆ ಆರಂಭಗೊಂಡಿದೆ.
ಮಂಗಳೂರು ಮತ್ತು ನವದೆಹಲಿಯ ನಡುವೆ ಸ್ಪೈಸ್ ಜೆಟ್ ವಿಮಾನ ಸಂಚಾರ ನಡೆಯುತ್ತಿತ್ತು. ಆದರೆ ಕೊರೊನಾ ಲಾಕ್ಡೌನ್ ಬಳಿಕ ಸಂಚಾರ ಸ್ಥಗಿತವಾಗಿತ್ತು. ಅನ್ಲಾಕ್ ಬಳಿಕ ದೇಶಿಯ ವಿಮಾನ ಆರಂಭವಾದರೂ ಮಂಗಳೂರು ಮತ್ತು ನವದೆಹಲಿ ನಡುವೆ ವಿಮಾನ ಹಾರಾಟ ಆರಂಭವಾಗಿರಲಿಲ್ಲ. ಇಂದಿನಿಂದ ನವದೆಹಲಿ ಮತ್ತು ಮಂಗಳೂರು ನಡುವೆ ನೇರ ವಿಮಾನಯಾನವನ್ನು ಸ್ಪೈಸ್ ಜೆಟ್ ಮರು ಆರಂಭಿಸಿದೆ.
ಈ ವಿಮಾನ ಹೊಸದಿಲ್ಲಿಯಿಂದ ಬೆಳಗ್ಗೆ 10.10ಕ್ಕೆ ಹೊರಟು ಮಧ್ಯಾಹ್ನ 12.35ಕ್ಕೆ ಮಂಗಳೂರು ತಲುಪಲಿದೆ. ಮಧ್ಯಾಹ್ನ 1.10ಕ್ಕೆ ಮಂಗಳೂರಿನಿಂದ ಹೊರಟು 3.55ಕ್ಕೆ ನವದೆಹಲಿ ತಲುಪಲಿದೆ. ಈ ವಿಮಾನ ಮಂಗಳವಾರ ಮತ್ತು ಭಾನುವಾರ ಮಾತ್ರ ಕಾರ್ಯ ನಿರ್ವಹಿಸಲಿದೆ.