ETV Bharat / state

ಕುಲಶೇಖರದಲ್ಲಿ ಗುಡ್ಡ ಕುಸಿತ: ನಾಳೆಯೂ ಮಂಗಳೂರು-ಮುಂಬೈ ಮಾರ್ಗದ ರೈಲು ಸಂಚಾರ ರದ್ದು - kannadanews

ಗುಡ್ಡ ಕುಸಿತದಿಂದ ಸ್ಥಗಿತಗೊಂಡ ಕೇರಳ-ಮಂಗಳೂರು-ಮುಂಬೈ ರೈಲು ಮಾರ್ಗ ದುರಸ್ತಿ ಕಾರ್ಯ ಪೂರ್ಣವಾಗದ ಹಿನ್ನೆಲೆ ನಾಳೆ ಕೂಡ ರೈಲು ಸಂಚಾರ ರದ್ದುಗೊಳಿಸಲಾಗಿದೆ.

ಮಂಗಳೂರು- ಮುಂಬೈ ಮಾರ್ಗದ ರೈಲು ಸಂಚಾರ ರದ್ದು
author img

By

Published : Aug 25, 2019, 10:55 PM IST

ಮಂಗಳೂರು: ಕುಲಶೇಖರ-ಪಡೀಲ್ ನಡುವೆ ಗುಡ್ಡ ಕುಸಿತದಿಂದ ಸ್ಥಗಿತಗೊಂಡ ಕೇರಳ-ಮಂಗಳೂರು-ಮುಂಬೈ ರೈಲು ಮಾರ್ಗ ದುರಸ್ತಿ ಕಾರ್ಯ ಪೂರ್ಣವಾಗದ ಕಾರಣ ನಾಳೆ ಕೂಡ ರೈಲು ಸಂಚಾರ ರದ್ದುಗೊಳಿಸಲಾಗಿದೆ.

ಗುಡ್ಡ ಕುಸಿತದಿಂದ ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡಿದ್ದ ಕೇರಳ-ಮಂಗಳೂರು-ಮುಂಬೈ ನೇರ ರೈಲು ಸಂಚಾರ ಮೂರನೇ ದಿನ ಇಂದು ಕೂಡ ಸ್ಥಗಿತಗೊಂಡಿತ್ತು. ಫಾಲ್​ಘಾಟ್​​​ ವಿಭಾಗಕ್ಕೆ ಸೇರಿದ ಈ ಪ್ರದೇಶದಲ್ಲಿ ಗುರುವಾರ ಸುರಿದ ಮಳೆಗೆ ಗುಡ್ಡ ಕುಸಿದು ಮಣ್ಣು ಹಳಿಗೆ ಬಿದ್ದಿತ್ತು. ಅವಘಡದಿಂದ ಮಂಗಳೂರು ಮೂಲಕ ಕೇರಳ ಹಾಗೂ ಮುಂಬೈಗೆ ತೆರಳಬೇಕಾದ ನೇರ ರೈಲು ಸಂಚಾರವನ್ನು ರದ್ದುಪಡಿಸಲಾಯಿತು. ಆದರೆ ಸುರತ್ಕಲ್‌ನಿಂದ ಕೊಂಕಣ ಮಾರ್ಗದಲ್ಲಿ ರೈಲು ಸಂಚಾರವನ್ನು ಸೀಮಿತಗೊಳಿಸಲಾಗಿದೆ. ಪಡೀಲಿನಲ್ಲಿ ಭರದಿಂದ ಮಣ್ಣು ತೆರವು ಕಾರ್ಯ ನಡೆಯುತ್ತಿದ್ದು, ಸೋಮವಾರ ಮಧ್ಯಾಹ್ನ ವೇಳೆಗೆ ಮಣ್ಣು ತೆರವು ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ ರೈಲು ಸೋಮವಾರ ಯಶವಂತಪುರದಿಂದ ಹೊರಡಲಿದೆ. ಆದರೆ ಈ ರೈಲು ಮಂಗಳೂರು ಜಂಕ್ಷನ್​​ವರೆಗೆ ಮಾತ್ರ ಸಂಚರಿಸಲಿದ್ದು, ಕಾರವಾರಕ್ಕೆ ಸಂಚರಿಸುವುದಿಲ್ಲ. ಅದೇ ರೀತಿ ಮಂಗಳವಾರ ಕಾರವಾರ-ಯಶವಂತಪುರ ತ್ರೈವೀಕ್ಲಿ ಎಕ್ಸ್‌ಪ್ರೆಸ್ ರೈಲು ಕೂಡ ಕಾರವಾರದಿಂದ ಮಂಗಳೂರು ಜಂಕ್ಷನ್‌ಗೆ ಇರುವುದಿಲ್ಲ. ಕೊಂಕಣ ರೈಲ್ವೆ ನಿಗಮವು ಮಂಗಳೂರು ಮೂಲಕ ರವಿವಾರ ಸಂಚರಿಸಬೇಕಾದ ಹಲವು ರೈಲುಗಳ ಸಂಚಾರವನ್ನು ರದ್ದುಪಡಿಸಿದೆ.

ಕುಚ್ಚುವೇಲಿ-ಪೋರಬಂದರ್ ಎಕ್ಸ್‌ಪ್ರೆಸ್, ಎರ್ನಾಕುಲಂ-ಅಜ್ಮೀರ್ ಜಂಕ್ಷನ್ ಮರುಸಾಗರ್ ಎಕ್ಸ್‌ಪ್ರೆಸ್, ಮಡ್ಗಾಂವ್-ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದುಗೊಳಿಸಿದೆ. ಆ. 26ರಂದು ಸಂಚರಿಸಬೇಕಾದ ಎರ್ನಾಕುಲಂ ಮಡ್ಗಾಂವ್ ಎಕ್ಸ್‌ಪ್ರೆಸ್, ಮುಂಬೈ ಎಸ್‌ಟಿಟಿ-ತಿರುವನಂತಪುರಂ ನೇತ್ರಾವತಿ ಎಕ್ಸ್‌ಪ್ರೆಸ್, ತಿರುನೇಲ್ವಿ-ಜಾಮ್ ನಗರ್ ಎಕ್ಸ್‌ಪ್ರೆಸ್, ಕುಚ್ಚುವೇಲಿ-ಮುಂಬೈ ಎಲ್‌ಟಿಟಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ಕುಚ್ಚುವೇಲಿ-ಚಂಡೀಘಡ್​​ ಕೇರಳ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲು ಸಂಚಾರ ಇರುವುದಿಲ್ಲ. ಹಜರತ್ ನಿಝಾಮುದ್ದೀನ್-ಎಕ್ನಾಕುಲಂ ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್, ಎರ್ನಾಕುಲಂ-ಹಜರತ್ ನಿಝಾಮುದ್ದೀನ್ ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್, ತಿರುವನಂತಪುರಂ-ಮುಂಬೈ ಎಲ್‌ಟಿಟಿ ನೇತ್ರಾವತಿ ಎಕ್ಸ್‌ಪ್ರೆಸ್ ರೈಲುಗಳು ಜೋಲಾರಪೇಟೆ, ಪಾಲಕ್ಕಾಡ್, ಶೋರ್ನೂರು ಮೂಲಕ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Intro:ಮಂಗಳೂರು: ಮಂಗಳೂರಿನ ಕುಲಶೇಖರ- ಪಡೀಲ್ ನಡುವೆ ಗುಡ್ಡಕುಸಿತದಿಂದ ಸ್ಥಗಿತಗೊಂಡ ಕೇರಳ-ಮಂಗಳೂರು- ಮುಂಬೈ ರೈಲು ಮಾರ್ಗ ದುರಸ್ತಿ ಕಾರ್ಯ ಪೂರ್ಣವಾಗದ ಕಾರಣ ನಾಳೆ (ಆ. 26) ಕೂಡ ರೈಲು ಸಂಚಾರ ರದ್ದುಗೊಳಿಸಲಾಗಿದೆ.Body:

ಈ ರೈಲ್ವೆ ಮಾರ್ಗದ ದುರಸ್ತಿ ಕಾರ್ಯ ಮುಕ್ತಾಯ ಹಂತ ತಲುಪಿದೆ.

ಗುಡ್ಡಕುಸಿತದಿಂದ ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡಿದ್ದ ಕೇರಳ-ಮಂಗಳೂರು-ಮುಂಬೈ ನೇರ ರೈಲು ಸಂಚಾರ ಮೂರನೇ ದಿನ ಇಂದು ಕೂಡ ಸ್ಥಗಿತಗೊಂಡಿತ್ತು. ಫಾಲ್ಘಾಟ್ ವಿಭಾಗಕ್ಕೆ ಸೇರಿದ ಈ ಪ್ರದೇಶದಲ್ಲಿ ಗುರುವಾರ ಸುರಿದ ಮಳೆಗೆ ಗುಡ್ಡಕುಸಿದು ಮಣ್ಣು ಹಳಿಗೆ ಬಿದ್ದಿತ್ತು. ಅವಘಡದಿಂದ ಮಂಗಳೂರು ಮೂಲಕ ಕೇರಳ ಹಾಗೂ ಮುಂಬೈಗೆ ತೆರಳಬೇಕಾದ ನೇರ ರೈಲು ಸಂಚಾರವನ್ನು ರದ್ದುಪಡಿಸಲಾಯಿತು. ಆದರೆ ಸುರತ್ಕಲ್‌ನಿಂದ ಕೊಂಕಣ ಮಾರ್ಗದಲ್ಲಿ ರೈಲು ಸಂಚಾರವನ್ನು ಸೀಮಿತಗೊಳಿಸಲಾಗಿದೆ. ಪಡೀಲಿನಲ್ಲಿ ಭರದಿಂದ ಮಣ್ಣು ತೆರವು ಕಾಮಗಾರಿ ನಡೆಯುತ್ತಿದ್ದು, ಸೋಮವಾರ ಮಧ್ಯಾಹ್ನ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ ರೈಲು ಸೋಮವಾರ ಯಶವಂತಪುರದಿಂದ ಹೊರಡಲಿದೆ. ಆದರೆ ಈ ರೈಲು ಮಂಗಳೂರು ಜಂಕ್ಷನ್ ವರೆಗೆ ಮಾತ್ರ ಸಂಚರಿಸಲಿದ್ದು, ಕಾರವಾರಕ್ಕೆ ಸಂಚರಿಸುವುದಿಲ್ಲ.

ಅದೇ ರೀತಿ ಮಂಗಳವಾರ ಕಾರವಾರ-ಯಶವಂತಪುರ ತ್ರೈವೀಕ್ಲಿ ಎಕ್ಸ್‌ಪ್ರೆಸ್ ರೈಲು ಕೂಡ ಕಾರವಾರದಿಂದ ಮಂಗಳೂರು ಜಂಕ್ಷನ್‌ಗೆ ಇರುವುದಿಲ್ಲ.

ಕೊಂಕಣ ರೈಲ್ವೆ ನಿಗಮವು ಮಂಗಳೂರು ಮೂಲಕ ರವಿವಾರ ಸಂಚರಿಸಬೇಕಾದ ಹಲವು ರೈಲುಗಳ ಸಂಚಾರವನ್ನು ರದ್ದುಪಡಿಸಿದೆ. ಕುಚ್ಚುವೇಲಿ- ಪೋರಬಂದರ್ ಎಕ್ಸ್‌ಪ್ರೆಸ್ ಎರ್ನಾಕುಲಂ-ಅಜ್ಮೀರ್ ಜಂಕ್ಷನ್ ಮರುಸಾಗರ್ ಎಕ್ಸ್‌ಪ್ರೆಸ್, ಮಡ್ಗಾಂವ್- ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದುಗೊಳಿಸಿದೆ.

ಆ.26ರಂದು ಸಂಚರಿಸಬೇಕಾದ ಎರ್ನಾಕುಲಂ ಮಡ್ಗಾಂವ್ ಎಕ್ಸ್‌ಪ್ರೆಸ್, ಮುಂಬೈ ಎಸ್‌ಟಿಟಿ-ತಿರುವನಂತಪುರಂ ನೇತ್ರಾವತಿ ಎಕ್ಸ್‌ಪ್ರೆಸ್, ತಿರುನೇಲ್ವಿ-ಜಾಮ್ ನಗರ್ ಎಕ್ಸ್‌ಪ್ರೆಸ್, ಕುಚ್ಚುವೇಲಿ-ಮುಂಬೈ ಎಲ್‌ಟಿಟಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ಕುಚ್ಚುವೇಲಿ-ಚಂಡೀಘರ್ ಕೇರಳ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲು ಸಂಚಾರ ಇರುವುದಿಲ್ಲ.
ಹಝರತ್ ನಿಝಾಮುದ್ದೀನ್-ಎಕ್ನಾಕುಲಂ ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್, ಎರ್ನಾಕುಲಂ-ಹಝರತ್ ನಿಝಾಮುದ್ದೀನ್ ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್, ತಿರುವನಂತಪುರಂ-ಮುಂಬೈ ಎಲ್‌ಟಿಟಿ ನೇತ್ರಾವತಿ ಎಕ್ಸ್‌ಪ್ರೆಸ್ ರೈಲುಗಳು ಜೋಲಾರಪೇಟೆ, ಪಾಲಕ್ಕಾಡ್, ಶೋರ್ನೂರು ಮೂಲಕ ಮಾರ್ಗದಲ್ಲಿ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ಪ್ರಕಟನೆ ತಿಳಿಸಿದೆ.
Reporter- vinodpuduConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.