ETV Bharat / state

ವಿವಾದಿತ ಗೋಡೆ ಬರಹ ಪ್ರಕರಣ: ಆರೋಪಿಗಳ ಪರ ವಕಾಲತ್ತು ವಹಿಸದಂತೆ ವಕೀಲರ ಸಂಘ ಮನವಿ

author img

By

Published : Dec 7, 2020, 8:59 PM IST

ನಗರದಲ್ಲಿ ವಿವಾದಿತ ಗೋಡೆ ಬರಹ ಕೃತ್ಯದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳಿಗೆ ವಕೀಲರ ಸಂಘದ ಸದಸ್ಯರು ಯಾವುದೇ ರೀತಿಯ ಕಾನೂನು ರಕ್ಷಣೆ ಹಾಗೂ ವಕಾಲತ್ತು ವಹಿಸಬಾರದೆಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಂ.ನರಸಿಂಹ ಹೆಗಡೆ ವಿನಂತಿಸಿದ್ದಾರೆ.

Controversial wall writing case in Mangalore
ಪ್ರಚೋದನಕಾರಿ ಗೋಡೆ ಬರಹ ಪ್ರಕರಣ

ಮಂಗಳೂರು: ಇತ್ತೀಚೆಗೆ ನಗರದ ನ್ಯಾಯಾಲಯದ ಆವರಣದ ಗೋಡೆ ಸೇರಿದಂತೆ ಎರಡು ಕಡೆಗಳಲ್ಲಿ ವಿವಾದಿತ ಬರಹಗಳನ್ನು ಬರೆದಿದ್ದ ಆರೋಪಿಗಳ ಪರ ವಕೀಲರ ಸಂಘದ ಸದಸ್ಯರು ವಕಾಲತ್ತು ವಹಿಸದಂತೆ ಮಂಗಳೂರು ವಕೀಲರ ಸಂಘ ಮನವಿ ಮಾಡಿದೆ.

ಗೋಡೆಗಳಲ್ಲಿ ಜಿಹಾದಿ ಹಾಗೂ ದೇಶದ್ರೋಹಿ ಬರಹಗಳನ್ನು ಬರೆದಿರುವ ಇಬ್ಬರು ಆರೋಪಿಗಳನ್ನು ಈಗಾಗಲೇ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದ್ದರಿಂದ ಈ ಆರೋಪಿಗಳ ಪರವಾಗಿ ವಕಾಲತ್ತು ವಹಿಸದಿರಲು ಹಿಂದೂ ಸಂಘಟನೆಗಳು ಹಾಗೂ ಕೆಲವು ವಕೀಲರು ವಕೀಲರ ಸಂಘಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ವಕೀಲರ ಸಂಘದ ಕಾರ್ಯಕಾರಿಣಿ ಸಭೆ ನಡೆಸಲಾಯಿತು.

ಇಂದು ನಡೆದ ಮಂಗಳೂರು ವಕೀಲರ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಆರೋಪಿಗಳಿಗೆ ಮಂಗಳೂರು ವಕೀಲರ ಸಂಘದ ಸದಸ್ಯರು ಯಾವುದೇ ರೀತಿಯ ಕಾನೂನು ರಕ್ಷಣೆ ಹಾಗೂ ವಕಾಲತ್ತು ವಹಿಸಬಾರದೆಂದು ವಕೀಲರ ಸಂಘದ ಅಧ್ಯಕ್ಷ ಎಂ.ನರಸಿಂಹ ಹೆಗಡೆ ವಿನಂತಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.