ಮಂಗಳೂರು: ನಗರದಲ್ಲಿ ಲಾಕ್ಡೌನ್ ಮುಂದುವರೆದಿದ್ದು, ಬೆಳಗಿನ ಜಾವ 7-12ರವರೆಗೆ ಅಗತ್ಯ ವಸ್ತುಗಳ ಖರೀದಿಗಾಗಿ ಜನ, ವಾಹನಗಳ ಸಂಚಾರ ಕಂಡು ಬಂದರೂ ಮಧ್ಯಾಹ್ನದ ಬಳಿಕ ಎಲ್ಲಾ ಕಡೆ ಮಂಗಳೂರು ಸಂಪೂರ್ಣ ಸ್ತಬ್ಧವಾಗಿತ್ತು.
ಅಲ್ಲೊಂದು, ಇಲ್ಲೊಂದು ಸರ್ಕಾರಿ, ವೈದ್ಯಕೀಯ ಹಾಗೂ ದಿನಸಿ ಸಾಮಾಗ್ರಿಗಳ ವಾಹನಗಳ ಸಂಚಾರ ಬಿಟ್ಟರೆ ಖಾಸಗಿ ವಾಹನ, ಜನ ಸಂಚಾರವೂ ಇಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು.
ಪೊಲೀಸ್ ಇಲಾಖೆ ಅಲ್ಲಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿ ಅನಗತ್ಯ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕುತ್ತಿದೆ. ಇಂದು ತುಳುವರ ಹೊಸ ವರ್ಷ ಬಿಸು ಹಬ್ಬವಿದ್ದರೂ ಮಾರುಕಟ್ಟೆಯಲ್ಲಿ ಹೇಳಿಕೊಳ್ಳುವಂತಹ ಜನಸಂದಣಿ ಇರಲಿಲ್ಲ. ಹೆಚ್ಚು ಕಡಿಮೆ ಮಧ್ಯಾಹ್ನದ ಹೊತ್ತಿಗಂತೂ ಪೂರ್ತಿ ಮಂಗಳೂರು ಸ್ತಬ್ಧವಾಗಿತ್ತು.