ETV Bharat / state

ಇನ್ಸ್​​ಪೆಕ್ಟರ್ ಪುತ್ರನ ಸೈಕಲ್ ಕಳ್ಳತನ​ : ಕೇಸ್​ ಬೆನ್ನತ್ತಿ ಹೋದ ಪೊಲೀಸರು ಭೇದಿಸಿದ್ದು 9 ಪ್ರಕರಣ - bicycle theft case in manglore

ಮಂಗಳೂರಿನ ಇನ್ಸ್​​ಪೆಕ್ಟರ್ ಪುತ್ರನ ಸೈಕಲ್​ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ಈವರೆಗೆ ಒಟ್ಟು 9 ಸೈಕಲ್​ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂಬುದು ಇದೇ ವೇಳೆ ಬೆಳಕಿಗೆ ಬಂದಿದೆ.

mangalore inspector son's bicycle thieves arrested news
ಪ್ರಕರಣ ಕುರಿತು ಮಂಗಳೂರು ಕಮಿಷನರ್​ ಮಾಹಿತಿ
author img

By

Published : Aug 30, 2021, 3:30 PM IST

ಮಂಗಳೂರು: ಮಂಗಳೂರಿನ ಇನ್ಸ್​​ಪೆಕ್ಟರ್ ಪುತ್ರನ ಸೈಕಲ್​ ಕಳವು ಪ್ರಕರಣ ಬೆನ್ನತ್ತಿ ಹೋದ ಇಲ್ಲಿನ ಬರ್ಕೆ ಪೊಲೀಸರು 9 ಸೈಕಲ್ ಕಳವು ಪ್ರಕರಣಗಳನ್ನು ಭೇದಿಸಿದ್ದಾರೆ.

ಮಂಗಳೂರಿನ ಇನ್ಸ್​​ಪೆಕ್ಟರ್ ಶರೀಫ್ ಅವರ ಪುತ್ರನ ಸೈಕಲನ್ನು ಅಪಾರ್ಟ್ಮೆಂಟ್​ನ ಪಾರ್ಕಿಂಗ್ ಏರಿಯಾದಿಂದ ಇತ್ತೀಚೆಗೆ ಕಳವು ಮಾಡಲಾಗಿತ್ತು. ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಕಳವು ಪ್ರಕರಣ ಬೆನ್ನತ್ತಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕರಣ ಕುರಿತು ಮಂಗಳೂರು ಕಮಿಷನರ್​ ಮಾಹಿತಿ

‘ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹನುಮಂತ (35), ಶಿವಮೊಗ್ಗ ಜಿಲ್ಲೆಯ ಮಂಜುರಾಜ್ (29), ಮಂಗಳೂರು ತಾಲೂಕಿನ ‌ಕುತ್ತಾರಿನ ಶಂಕರ ಶೆಟ್ಟಿ(66) ಬಂಧಿತರು. ಇವರು ಮಂಗಳೂರಿನಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಹಣವಿಲ್ಲದ ವೇಳೆ ಸೈಕಲ್​ಗಳನ್ನು ಕದ್ದು ಕಡಿಮೆ ಬೆಲೆಗೆ ಮಾರುತ್ತಿದ್ದರು.

ಸುಮಾರು 20 ಸಾವಿರ ‌ಮೌಲ್ಯದ ಸೈಕಲನ್ನು ಕದ್ದು 500- 1000 ರೂ.ಗಳಿಗೆ ಮಾರುತ್ತಿದ್ದರು. ಪೊಲೀಸರು ಇವರ ಬಳಿಯಿಂದ ರೂ 1.5 ಲಕ್ಷ ರೂ. ಮೌಲ್ಯದ 9 ಸೈಕಲ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:ಸ್ಪೀಡ್​ ಬ್ರೇಕರ್ ಬಳಿ ಎಗರಿದ ಬೈಕ್​: ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಲಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.