ETV Bharat / state

ಸೆಂಥಿಲ್ ತಮ್ಮ ಅಧಿಕಾರಾವಧಿಯಲ್ಲಿ ಭಾರೀ ಅಕ್ರಮ ಎಸಗಿದ್ದಾರೆ: ಜೈರಾಜ್​​ ಶೆಟ್ಟಿ ಆರೋಪ

ಸಸಿಕಾಂತ್​​ ಸೆಂಥಿಲ್ ಅವರ ಅವಧಿಯಲ್ಲಿ ನಡೆದಿರುವ ಅಕ್ರಮ ಮತ್ತು ಭ್ರಷ್ಟಾಚಾರದ ಕುರಿತು ಸೂಕ್ತ ತನಿಖೆ ನಡೆಸುವಂತೆ ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ‌. ಅದರ ಅಂತಿಮ ವರದಿ ಇನ್ನೇನು ಹೊರಬರಲಿದ್ದು, ಅವರ ಹಗರಣಗಳ ಬಗ್ಗೆಯೂ ತಿಳಿದು ಬರಲಿದೆ ಎಂದರು.

ಜೈರಾಜ್ ಶೆಟ್ಟಿ
author img

By

Published : Sep 8, 2019, 9:41 PM IST

ಮಂಗಳೂರು: ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ನೂರಾರು ಕುಟುಂಬಗಳನ್ನು ನಿರ್ಗತಿಕರನ್ನಾಗಿಸಿದ್ದಾರೆ ಎಂದು ದಕ್ಷಿಣ ಕನ್ನಡ ಮರಳು ಸಾಗಾಟ ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಜೈರಾಜ್ ಶೆಟ್ಟಿ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರ ಅವಧಿಯಲ್ಲಿ ನಡೆದಿರುವ ಅಕ್ರಮ ಮತ್ತು ಭ್ರಷ್ಟಾಚಾರದ ಕುರಿತು ಸೂಕ್ತ ತನಿಖೆ ನಡೆಸುವಂತೆ ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ‌. ಅದರ ಅಂತಿಮ ವರದಿ ಇನ್ನೇನು ಹೊರಬರಲಿದ್ದು, ಅವರ ಹಗರಣಗಳ ಬಗ್ಗೆಯೂ ತಿಳಿದು ಬರಲಿದೆ ಎಂದರು.

ಜೈರಾಜ್ ಶೆಟ್ಟಿ

ಸಸಿಹಿತ್ಲು ಮೀನುಗಾರಿಕಾ ಬಂದರ್​ಗಾಗಿ ಹೂಳೆತ್ತಿ ಸಂಗ್ರಹಿಸಿದ್ದ 10 ಸಾವಿರ ಮೆಟ್ರಿಕ್ ಟನ್ ಮರಳನ್ನು ಒಂದೇ ದಿನದಲ್ಲಿ ಪಾರದರ್ಶಕತೆ ಉಲ್ಲಂಘಿಸಿ ಕಡೆಯ ದಿನವೆಂದು ಘೋಷಿಸಿದ್ದಾರೆ‌. ಮರಳು ಸಾಗಾಟದ ಲಾರಿಗಳಿಗೆ ಜಿಪಿಎಸ್ ಅಳವಡಿಕೆಯಲ್ಲಿಯೂ ಭಾರೀ ಅವ್ಯವಹಾರ ಆಗಿದ್ದು, ವಶಕ್ಕೆ ಪಡೆದ ಮರಳನ್ನು ಒಂದೇ ಕಂಪನಿಗೆ ಕೊಟ್ಟು ಅಕ್ರಮವೆಸಗಿದ್ದಾರೆ ಎಂದು ದೂರಿದರು.
'ಸ್ಯಾಂಡ್ ಬಜಾರ್' ಆ್ಯಪ್ ಮೂಲಕ ಸೆಂಥಿಲ್ ಅವ್ಯವಹಾರ ಮಾಡಿದ್ದಾರೆ. ಒಂದೇ ಪರ್ಮಿಟ್‍ಗೆ ಹಲವೆಡೆ ಅಕ್ರಮ ಮರಳು ತೆಗೆಯಲು ಒಪ್ಪಿಗೆ ನೀಡಿದ್ದರು. ತುಂಬೆ ಡ್ಯಾಂ ಡ್ರೆಜ್ಜಿಂಗ್ ನೆಪದಲ್ಲಿ ಅವ್ಯವಹಾರ ಮಾಡಿದ್ದಾರೆ. ದಿಲ್ಲಿ ಕಂಪನಿಗೆ ಕಾನೂನು ಉಲ್ಲಂಘಿಸಿ ಟೆಂಡರ್ ಕೊಟ್ಟಿದ್ದಾರೆ ಎಂದು ಆರೋಪಗಳ ಸುರಿಮಳೆಯನ್ನೇ ಮಾಡಿದರು.

Intro:ಮಂಗಳೂರು: ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಅವಧಿಯಲ್ಲಿ ಮರಳು ದೊರಕದೆ ಬಿಲ್ಡರ್ಸ್, ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ಬೀದಿಗೆ ಬಿದ್ದಿದ್ದರು. ಈ ಸಂದರ್ಭ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿ ನೂರಾರು ಕುಟುಂಬಗಳನ್ನು ನಿರ್ಗತಿಕರನ್ನಾಗಿಸಿ, ತಾನೋರ್ವ ಜಾಗೀದಾರ್ ನಂತೆ ವರ್ತಿಸಿದ್ದರು ಎಂದು ದಕ್ಷಿಣ ಕನ್ನಡ ಮರಳು ಸಾಗಾಟದ ಲಾರಿ ಮಾಲಿಕರ ಸಂಘಗಳ ಒಕ್ಕೂಟ ಅಧ್ಯಕ್ಷ ಜೈರಾಜ್ ಶೆಟ್ಟಿ ಹೇಳಿದರು.

ಈ ಹಿನ್ನೆಲೆಯಲ್ಲಿ ಅವರ ಅವಧಿಯಲ್ಲಿ ನಡೆದಿರುವ ನಡೆದಿರುವ ಅಕ್ರಮ ಮತ್ತು ಭ್ರಷ್ಟಾಚಾರದ ಕುರಿತು ಸೂಕ್ತ ತನಿಖೆ ನಡೆಸುವಂತೆ ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ‌. ಅದರ ಅಂತಿಮ ವರದಿ ಇನ್ನೇನು ಹೊರಬರಲಿದ್ದು, ಅವರ ಹಗರಣಗಳ ಬಗ್ಗೆಯೂ ತಿಳಿದು ಬರಲಿದೆ ಎಂದು ಹೇಳಿದರು.

ಸಸಿಹಿತ್ಲು ಮೀನುಗಾರಿಕಾ ಬಂದರ್ ಗಾಗಿ ಹೂಳೆತ್ತಿ ಸಂಗ್ರಹಿಸಿದ್ದ 10 ಸಾವಿರ ಮೆಟ್ರಿಕ್ ಟನ್ ಮರಳನ್ನು ಒಂದೇ ದಿನದಲ್ಲಿ ಪಾರದರ್ಶಕತೆ ಉಲ್ಲಂಘಿಸಿ ಕಡೆಯ ದಿನವೆಂದು ಘೋಷಿಸಿದ್ದಾರೆ‌. ಮರಳು ಸಾಗಾಟದ ಲಾರಿಗಳಿಗೆ ಜಿಪಿಎಸ್ ಅಳವಡಿಕೆಯಲ್ಲಿಯೂ ಭಾರೀ ಅವ್ಯವಹಾರ ಆಗಿದ್ದು, ವಶಕ್ಕೆ ಪಡೆದ ಮರಳನ್ನು ಒಂದೇ ಕಂಪನಿಗೆ ಕೊಟ್ಟು ಅಕ್ರಮವೆಸಗಿದ್ದಾರೆ.
'ಸ್ಯಾಂಡ್ ಬಝಾರ್' ಆ್ಯಪ್ ಮೂಲಕ ಸೆಂಥಿಲ್ ಅವ್ಯವಹಾರ ಮಾಡಿದ್ದಾರೆ. ಒಂದೇ ಪರ್ಮಿಟ್‍ಗೆ ಹಲವೆಡೆ ಅಕ್ರಮ ಮರಳು ತೆಗೆಯಲು ಒಪ್ಪಿಗೆ ನೀಡಿದ್ದಾರೆ. ತುಂಬೆ ಡ್ಯಾಮ್ ಡ್ರೆಜ್ಜಿಂಗ್ ನೆಪದಲ್ಲಿ ಅವ್ಯವಹಾರ ಮಾಡಿದ್ದಾರೆ. ದಿಲ್ಲಿ ಕಂಪನಿಗೆ ಕಾನೂನು ಉಲ್ಲಂಘಿಸಿ ಟೆಂಡರ್ ಕೊಟ್ಟಿದ್ದಾರೆ ಎಂದು ಆರೋಪಿಸಿ ಜೈರಾಜ್ ದೂರು ನೀಡಿದ್ದಾರೆ.

Body:ಈ ಎಲ್ಲ ವಿಚಾರದ ಬಗ್ಗೆ ಹೈಕೋರ್ಟಿಗೆ ತಪ್ಪು ಮಾಹಿತಿ ನೀಡಿ, ಮರಳು ಮಾರಿದ್ದಾರೆ. ಮೂರು ಸಾವಿರದ ಮರಳನ್ನು 6 ಸಾವಿರಕ್ಕೆ ಮಾರಾಟ ಮಾಡಿದ್ದಾರೆ. ಉಡುಪಿಯಲ್ಲಿ ಬ್ಲಾಕ್ ಲಿಸ್ಟಲ್ಲಿರುವ ಕಂಪನಿಗೆ ಜಿಪಿಎಸ್ ಟೆಂಡರ್ ಆಗಿದೆ. ಟಿ ಫೋರ್ ಯು ಎಂಬ ಕಂಪನಿಗೆ ಟೆಂಡರ್ ಕೊಟ್ಟಿದ್ದರಲ್ಲಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಜೈರಾಜ್ ಆರೋಪಿಸಿದ್ದಾರೆ.

ಮರವೂರು ಡ್ಯಾಮ್ ನಿಂದ ಮಳವೂರಿನವರೆಗೆ ನದುಭಾಗದಲ್ಲಿ ಮರಳುಗಾರಿಕೆ ಸ್ಥಗಿತದಿಂದ ಹಲವಾರು ಕುಟುಂಬ ಬೀದಿಗೆ ಬಿದ್ದಿದೆ. ಇದಕ್ಕೆ ಜಿಲ್ಲಾಧಿಕಾರಿ ಯವರ ದ್ವಂದ್ವ ನೀತಿಯೇ ಕಾರಣ. ಸಿಆರ್ ಜಡ್ ವಲಯದಲ್ಲಿ ತಾತ್ಕಾಲಿಕ ಮರಳು ದಿಬ್ಬ ತೆರವಿಗೆ ಪರವಾನಿಗೆ ನೀಡುವಾಗ ಅರ್ಹತೆಯುಳ್ಳವರನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಮರಳು ಸಮಿತಿ ವಿಫಲವಾಗಿದೆ ಎಂದು ಜೈರಾಜ್ ಆರೋಪಿಸಿದ್ದರು.

Reporter_Vishwanath PanjimogaruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.