ಮಂಗಳೂರು: ನಗರದ ಕೊಡಿಯಾಲ್ಬೈಲ್ನಲ್ಲಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಮುಖ್ಯ ಪ್ರವೇಶ ದ್ವಾರದಲ್ಲಿ ವಕೀಲರು ಹಾಗೂ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ವಿಧಿಸಿ ಕೇವಲ ನ್ಯಾಯಧೀಶರಿಗಷ್ಟೇ ಪ್ರವೇಶ ಎಂಬ ಹೊಸ ನಿಯಮ ಜಾರಿ ಮಾಡಿ ಹಾಕಲಾದ ಬೋರ್ಡನ್ನು ತೆರವುಗೊಳಿಸಲಾಗಿದೆ.
ಈ ಮುಂಚೆ ಜಿಲ್ಲಾ ನ್ಯಾಯಾಲಯ ಕಟ್ಟಡದ ಮುಖ್ಯ ದ್ವಾರದಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿತ್ತು. ಆದರೆ ಏಕಾಏಕಿ ನೂತನವಾಗಿ ಜಾರಿಯಾಗಿರುವ ನಿಯಮದಿಂದ ನ್ಯಾಯಾಧೀಶರು ಮಾತ್ರ ಮುಖ್ಯದ್ವಾರದಿಂದ ಪ್ರವೇಶಿಸಬಹುದಾಗಿದೆ. ವಕೀಲರು ಹಾಗೂ ಸಾರ್ವಜನಿಕರಿಗೆ ಈ ದ್ವಾರದ ಮೂಲಕ ಪ್ರವೇಶ ನಿರ್ಬಂಧಿಸಲಾಗಿತ್ತು. ಈ ಬಗ್ಗೆ ಮುಖ್ಯ ದ್ವಾರದಲ್ಲಿ 'ನಿರ್ಬಂಧಿತ ಪ್ರದೇಶ, ನ್ಯಾಯಾಧೀಶರಿಗೆ ಮಾತ್ರ ಪ್ರವೇಶ' ಎಂಬ ನಾಮಫಲಕ ಹಾಕಲಾಗಿತ್ತು.
ಆದರೆ ಇಂದು ಮುಂಜಾನೆ ಈ ಬೋರ್ಡನ್ನು ತೆರವುಗೊಳಿಸಲಾಗಿದೆ. ಇಂದು ಮೊದಲಿನಂತೆಯೇ ಸಾರ್ವಜನಿಕರು ಮತ್ತು ವಕೀಲರು ಮುಖ್ಯ ದ್ವಾರದಿಂದಲೇ ನ್ಯಾಯಾಲಯಕ್ಕೆ ಹೋಗಿದ್ದಾರೆ.
ಇದನ್ನೂ ಓದಿ: ಮಂಗಳೂರು: ಬಾಲಕಿ ಮೇಲೆ ಅತ್ಯಾಚಾರ, ಮಗು ಜನನ ಪ್ರಕರಣ- ಅಪರಾಧಿಗೆ 10 ವರ್ಷ ಜೈಲು