ಮಂಗಳೂರು: ಮಂಗಳೂರು ಬೋಟ್ ದುರಂತದಲ್ಲಿ ನಾಪತ್ತೆಯಾದ ಮೀನುಗಾರನ ಶವ, ಗುರುವಾರದಂದು ದಿನವಿಡೀ ಹುಡುಕಿದರು ಪತ್ತೆಯಾಗಲಿಲ್ಲ.
ಸೋಮವಾರ ಮಂಗಳೂರಿನಲ್ಲಿ ಶ್ರೀರಕ್ಷಾ ಎಂಬ ಬೋಟ್ ದುರಂತಕ್ಕೀಡಾಗಿ ಆರು ಮಂದಿ ಸಮುದ್ರಪಾಲಾಗಿದ್ದರು. ಶೋಧ ಕಾರ್ಯ ನಡೆಸಿದ ಬಳಿಕ ಐವರ ಮೃತ ದೇಹಗಳನ್ನು ಪತ್ತೆ ಹಚ್ಚಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಅನ್ಸಾರ್ ಎಂಬವವರು ನಿನ್ನೆ ಪತ್ತೆ ಹಚ್ಚಲಾಗಿತ್ತು. ಸಮುದ್ರದಾಳದಿಂದ ಮೇಲಕ್ಕೆ ತರುವ ವೇಳೆ ಮುಳುಗುತಜ್ಞರ ಕೈಜಾರಿ ಮತ್ತೆ ಸಮುದ್ರ ಸೇರಿತು.
ನಿನ್ನೆ ಮತ್ತೆ ಶೋಧ ನಡೆಸಿದರೂ ಪತ್ತೆಯಾಗಿರಲಿಲ್ಲ. ಇಂದು ಮುಂಜಾನೆಯಿಂದ ಕೋಸ್ಟ್ ಗಾರ್ಡ್, ಜಿಲ್ಲಾಡಳಿತ, ಮುಳುಗುತಜ್ಞರು, ಮೀನುಗಾರರು ಶೋಧ ಕಾರ್ಯ ನಡೆಸಿದರೂ ಕತ್ತಲು ಕವಿಯುವವರೆಗೂ ಮೃತದೇಹ ಪತ್ತೆಯಾಗಿಲ್ಲ. ಮತ್ತೆ ನಾಳೆ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ.
ಇದನ್ನೂ ಓದಿ : ಮೃತ ಮೀನುಗಾರರ ಕುಟುಂಬಕ್ಕೆ ನಾಳೆ ಸಂಜೆಯೊಳಗೆ ಪರಿಹಾರ: ಶ್ರೀನಿವಾಸ ಪೂಜಾರಿ
ಈ ಬಗ್ಗೆ ಈಟಿವಿ ಭಾರತ ಜತೆಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ್, ದುರಂತಕ್ಕೀಡಾಗಿರುವ ಬೋಟ್ನ ಅಡಿಭಾಗದಲ್ಲಿ ಮೃತದೇಹ ಇರುವ ಬಗ್ಗೆ ಸಂಶಯವಿದೆ. ಬೋಟ್ ಮೇಲಕ್ಕೆತ್ತಿ ಮೃತದೇಹ ಹುಡುಕುವ ಬಗ್ಗೆ ಯೋಜನೆಗಳ ಬಗ್ಗೆ ಚಿಂತಿಸಲಾಗುತ್ತಿದೆ. ಒಂದು ವೇಳೆ ಮೃತದೇಹ ಅಡಿಭಾಗದಲ್ಲಿ ಇಲ್ಲದೆ ಇದ್ದರೆ 72 ಗಂಟೆಯಲ್ಲಿ ಸಮುದ್ರ ತೀರಕ್ಕೆ ಬರುತ್ತೆ. ಕೋಸ್ಟಲ್ ಸೆಕ್ಯುರಿಟಿ ತಂಡಕ್ಕೆ ಈ ಬಗ್ಗೆ ಸಮುದ್ರ ತೀರದಲ್ಲಿ ಗಸ್ತು ತಿರುಗಲು ಹೇಳಲಾಗುವುದು ಎಂದರು.