ETV Bharat / state

ಕೇರಳಿಗರಿಗೆ ಮಂಗಳೂರು ಪ್ರವೇಶ ನಿರ್ಬಂಧ... ಗಡಿಭಾಗ ತಲಪಾಡಿಯಲ್ಲಿ ಬಿಗುವಿನ ವಾತಾವರಣ - Mangalore Access Restriction to Kerala

ಜು.11ರ ಅವಧಿವರೆಗೆ ದ.ಕ ಜಿಲ್ಲಾಡಳಿತ ನೀಡಿರುವ ಪಾಸ್ ಇದೆ. ಅಲ್ಲಿಯವರೆಗೂ ಬಿಡಬೇಕೆಂದು ಮಂಗಳೂರಿಗೆ ಬರುವ ಮಂದಿ ಕೇರಳ ಪೊಲೀಸರನ್ನು ಒತ್ತಾಯಿಸಿದ್ದಾರೆ. ಆದರೆ, ಮಂಗಳೂರಿಗೆ ಬಂದ ಐದು ಮಂದಿಯಲ್ಲಿ ಕೊರೊನಾ ಪತ್ತೆಯಾದ ಹಿನ್ನೆಲೆ, ಕೇರಳ ಸರ್ಕಾರದ ಕಠಿಣ ಆದೇಶ ಇರುವುದರಿಂದ ಮಂಗಳೂರಿಗೆ ಹೋದಲ್ಲಿ ಅಲ್ಲಿಯೇ ಉಳಿದುಕೊಳ್ಳಿ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.

kerala
ಬಿಗುವಿನ ವಾತಾವರಣ
author img

By

Published : Jul 7, 2020, 5:15 PM IST

Updated : Jul 7, 2020, 5:35 PM IST

ಉಳ್ಳಾಲ(ಮಂಗಳೂರು): ಕೇರಳ ಸರ್ಕಾರ ಕೇರಳಿಗರಿಗೆ ಮಂಗಳೂರು ಪ್ರವೇಶ ನಿರ್ಬಂಧಿಸಿದ ಕಾರಣ ಪಾಸ್ ಹಿಡಿದು ದಿನನಿತ್ಯ ಕೆಲಸಕ್ಕೆ ಬರುತ್ತಿದ್ದವರನ್ನು ಕೇರಳ ಪೊಲೀಸರು ತಲಪಾಡಿಯಲ್ಲಿ ತಡೆಹಿಡಿದಿರುವುದು ಗೊಂದಲಕ್ಕೆ ಕಾರಣವಾಗಿದೆ.

100ಕ್ಕೂ ಅಧಿಕ ಮಂದಿ ಸ್ಥಳದಲ್ಲಿ ಜಮಾಯಿಸಿ ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಜು.11ರ ಅವಧಿವರೆಗೆ ದ.ಕ ಜಿಲ್ಲಾಡಳಿತ ಇಲ್ಲಿ ಕೆಲಸ ಮಾಡುವವರಿಗೆ ಪಾಸ್ ನೀಡಿದ್ದು, ಅಲ್ಲಿಯವರೆಗೂ ನಮ್ಮನ್ನು ಸಂಚಾರ ಮಾಡಲು ಬಿಡಬೇಕು ಎಂದು ಮಂಗಳೂರಿಗೆ ಬರುವ ಕೇರಳಿಗರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಆದರೆ, ಮಂಗಳೂರಿನಲ್ಲಿ ಕೊರೊನಾ ಹೆಚ್ಚಾಗುತ್ತಿರುವುದರಿಂದ ಈ ಹಿಂದೆ ಕೇರಳದಿಂದ ಮಂಗಳೂರಿಗೆ ಬಂದಂತಹ 5 ಮಂದಿಯಲ್ಲಿ ಕೋವಿಡ್​​ ಪತ್ತೆಯಾಗಿತ್ತು. ಹೀಗಾಗಿ ಸೋಂಕು ಹರಡುವ ಭೀತಿಯಿಂದ ಮಂಗಳೂರಿಗೆ ಹೋದಲ್ಲಿ ಅಲ್ಲಿಯೇ ಉಳಿದುಕೊಳ್ಳುವಂತೆ ಕೇರಳ ಸರ್ಕಾರ ಕಠಿಣ ಆದೇಶ ಜಾರಿ ಮಾಡಿದೆ.

Mangalore Access Restriction to Kerala
ಗಡಿಭಾಗ ತಲಪಾಡಿಯಲ್ಲಿ ಬಿಗುವಿನ ವಾತಾವರಣ

ಇದರಿಂದ ಪೊಲೀಸರ ಹಾಗೂ ಜನರ ನಡುವೆ ವಾಗ್ವಾದ ನಡೆದಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗೃತಾ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

Last Updated : Jul 7, 2020, 5:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.