ETV Bharat / state

ವರ್ಷದಲ್ಲಿ ಎರಡು ಬಾರಿ ಫಲ ನೀಡುವ "ಮಂಗಳ ಅರ್ಲಿ" ಹಲಸಿನ ತಳಿ ಅಭಿವೃದ್ಧಿ - new breed of jackfruit mangala early delevoped in manglore

ಸಾಮಾನ್ಯವಾಗಿ ಹಲಸಿನ ಮರಗಳು ವರ್ಷಕ್ಕೊಮ್ಮೆ ಹಲಸಿನ ಹಣ್ಣನ್ನು ಬಿಡುತ್ತವೆ. ಆದರೆ ಇಲ್ಲೊಬ್ಬರು ವರ್ಷಕ್ಕೆ ಎರಡು ಬಾರಿ ಫಲ ನೀಡುವ ಮಂಗಳ ಅರ್ಲಿ ಎಂಬ ಹಲಸಿನ ತಳಿಯನ್ನು ಅಭಿವೃದ್ಧಿಪಡಿಸಿದ್ದಾರೆ.

mangala-early-new-breed-of-jackfruit-which-gives-fruits-for-two-times-in-a-year
ವರ್ಷದಲ್ಲಿ ಎರಡು ಬಾರಿ ಫಲ ನೀಡುವ "ಮಂಗಳ ಅರ್ಲಿ" ಹಲಸಿನ ತಳಿ ಅಭಿವೃದ್ಧಿ
author img

By

Published : Jun 11, 2022, 6:22 PM IST

ಮಂಗಳೂರು : ಸಾಮಾನ್ಯವಾಗಿ ಹಲಸಿನ ಮರಗಳು ವರ್ಷಕ್ಕೊಮ್ಮೆ ಹಲಸಿನ ಹಣ್ಣನ್ನು ಬಿಡುತ್ತವೆ. ಆದರೆ ಇಲ್ಲೊಬ್ಬರು ವರ್ಷಕ್ಕೆ ಎರಡು ಬಾರಿ ಫಲ ನೀಡುವ ಮಂಗಳ ಅರ್ಲಿ ಎಂಬ ಹಲಸಿನ ತಳಿಯನ್ನು ಅಭಿವೃದ್ಧಿ ಪಡಿಸಿದ್ದಾರೆ.

ವರ್ಷದಲ್ಲಿ ಎರಡು ಬಾರಿ ಫಲ ನೀಡುವ "ಮಂಗಳ ಅರ್ಲಿ" ಹಲಸಿನ ತಳಿ ಅಭಿವೃದ್ಧಿ

ಇಲ್ಲಿನ ಚಿಗುರು ನರ್ಸರಿಯ ಯು.ಬಿ ಸರ್ವೇಶ್ ರಾವ್ ಎಂಬವರು ವರ್ಷದಲ್ಲಿ ಎರಡು ಬಾರಿ ಫಲ ನೀಡುವ ಹಲಸಿನ ಹಣ್ಣಿನ ತಳಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದರ ಜೊತೆಗೆ ಇವರು ಹಲಸುಗಳ ವಿಭಿನ್ನ ತಳಿಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರು ವರ್ಷಗಳ ಸತತ ಪರಿಶ್ರಮದಿಂದ ಮಂಗಳ ಅರ್ಲಿ ಎಂಬ ಹಲಸಿನ ತಳಿಯನ್ನು ಇವರು ಅಭಿವೃದ್ದಿಪಡಿಸಿದ್ದು, ಈ‌ ತಳಿಯ ಹಲಸಿನ ಗಿಡವು ಡಿಸೆಂಬರ್ ಮತ್ತು ಜೂನ್ ತಿಂಗಳಲ್ಲಿ ಹಣ್ಣು ಬಿಡುತ್ತದೆ. ಈ ತಳಿಯ ಹಲಸಿನ ಮರವು ಮೂರು ವರ್ಷದಲ್ಲಿ ಫಲ ನೀಡುವುದರ ಜೊತೆಗೆ ಈ ಗಿಡದ ಸರಿಯಾದ ಆರೈಕೆಯಿಂದ ವರ್ಷಕ್ಕೆ ಎರಡು ಬಾರಿ ಹಲಸಿನ ಹಣ್ಣನ್ನು ಪಡೆಯಬಹುದಾಗಿದೆ.

mangala-early-new-breed-of-jackfruit-which-gives-fruits-for-two-times-in-a-year
"ಮಂಗಳ ಅರ್ಲಿ" ಹಲಸಿನ ಗಿಡ

ಸಾಧಾರಣವಾಗಿ ಸಿಗುವ ಹಲಸಿನ ಬೀಜದ ಮೂಲಕ ಗಿಡವನ್ನು ಬೆಳೆಸಿ ಬಳಿಕ ಅದರ ಕಾಂಡಕ್ಕೆ ನಿರ್ದಿಷ್ಟ ಜಾತಿಯ ಹಲಸಿನ ಗಿಡವನ್ನು ಕಸಿ ಮಾಡುವ ಮೂಲಕ ಮಂಗಳ ಅರ್ಲಿ ಹಲಸಿನ ತಳಿಯನ್ನು ನೆಡಲಾಗುತ್ತದೆ. ಇದೀಗ ಇದು ಕರಾವಳಿಯ ವಿಶೇಷ ತಳಿಯಾಗಿ ಮಾರ್ಪಾಡಾಗಿದೆ. ಈ‌ ಹಲಸಿನ ಹಣ್ಣು ತುಂಬಾ ಸಿಹಿಯಾಗಿದೆ ಎಂದು ತಳಿ ಅಭಿವೃದ್ಧಿಪಡಿಸಿದ ಸರ್ವೇಶ್ ರಾವ್ ಅವರು ಹೇಳುತ್ತಾರೆ. ಈ ತಳಿಯನ್ನು ಅಭಿವೃದ್ಧಿ ಪಡಿಸಲು ಕಸಿ ತಜ್ಞ ಗುರುರಾಜ ಬಾಳ್ತಿಲ್ಲಾಯ ಮತ್ತು ಗ್ಯಾಬ್ರಿಯಲ್ ವೇಗಸ್ ಅವರು ಸರ್ವೇಶ್ ಅವರಿಗೆ ಸಹಕಾರ ನೀಡಿದ್ದಾರೆ.

ಓದಿ : ಕೊಡಗಿನಲ್ಲಿ ಮುಂದುವರೆದ ಕಾಡಾನೆ ದಾಳಿ : ಓರ್ವ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.