ETV Bharat / state

ಮಗಳ ಮೇಲೆ ಅತ್ಯಾಚಾರ!: ಅಪರಾಧಿ ತಂದೆಗೆ 15 ವರ್ಷಗಳ ಕಠಿಣ ಜೈಲು ಸಜೆ - ಕಠಿಣ ಜೈಲು ಶಿಕ್ಷೆ

ಮಗಳ ಮೇಲೆ ಅತ್ಯಾಚಾರ ಪ್ರಕರಣ ಸಂಬಂಧ ಅಪರಾಧಿ ತಂದೆಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಠಿಣ ಕಾರವಾಸ ಶಿಕ್ಷೆ ವಿಧಿಸಿದೆ.

Mangalore
ಮಂಗಳೂರು
author img

By

Published : Sep 9, 2022, 12:56 PM IST

Updated : Sep 9, 2022, 1:05 PM IST

ಬಂಟ್ವಾಳ: ಮಗಳ ಮೇಲೆಯೇ ಅತ್ಯಾಚಾರ ಮಾಡಿದ ದುಷ್ಟ ತಂದೆಗೆ 15 ವರ್ಷಗಳ ಕಠಿಣ ಕಾರವಾಸ ಮತ್ತು 25 ಸಾವಿರ ರೂ. ಜುಲ್ಮಾನೆ ವಿಧಿಸಿ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ಶೀಘ್ರಪಥ-2) ನ್ಯಾಯಾಲಯ ತೀರ್ಪು ನೀಡಿದೆ. ಬಂಟ್ವಾಳ ತಾಲೂಕಿನ ಕುಕ್ಕಾಜೆ ನಿವಾಸಿ ದಾವೂದ್ (55) ಶಿಕ್ಷೆಗೆೊಳಗಾದ ಅಪರಾಧಿ.

ನ್ಯಾಯಾಧೀಶರಾದ ಕೆ.ಎಂ.ರಾಧಾಕೃಷ್ಣ ಅವರು ಗುರುವಾರ ಶಿಕ್ಷೆಯ ತೀರ್ಪು ಪ್ರಕಟಿಸಿದ್ದಾರೆ. 2018ರ ಜನವರಿ ತಿಂಗಳಿನಲ್ಲಿ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ವೃತ್ತ ನಿರೀಕ್ಷಕರಾದ ಶರಣಗೌಡ ಹಾಗೂ ಟಿ.ಡಿ.ನಾಗರಾಜ್ ತನಿಖೆ ನಡೆಸಿ ಆರೋಪಿ ದಾವೂದ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಪ್ರಕರಣದ ಕೂಲಂಕಷ ತನಿಖೆಯನ್ನು ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಅಧೀಕ್ಷಕರ ಮಾರ್ಗದರ್ಶನದಂತೆ ಪೊಲೀಸ್ ವೃತ್ತ ನಿರೀಕ್ಷಕರಾದ ಶರಣಗೌಡ ಮತ್ತು ಟಿ. ಡಿ.ನಾಗರಾಜ್ ನಡೆಸಿದ್ದರು. ನ್ಯಾಯಾಲಯದ ವಿಚಾರಣೆಯಲ್ಲಿ ಸರ್ಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ವಾದ ಮಂಡಿಸಿದ್ದರು. ಬಂಟ್ವಾಳ ಗ್ರಾಮಾಂತರ ಠಾಣಾ ಕೋರ್ಟ್ ಮಾನಿಟರಿಂಗ್ ಸೆಲ್​ನ ಪಿಎಸ್​​ಐ ಹರೀಶ್ ಮತ್ತು ಸಿಬ್ಬಂದಿ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಇದನ್ನೂ ಓದಿ: ಕೋರ್ಟ್‌ಗೆ ಹಾಜರಾಗದೆ 10 ವರ್ಷ ತಲೆಮರೆಸಿಕೊಂಡ ಕೇರಳದ ಆರೋಪಿ ಬಂಧನ

Last Updated : Sep 9, 2022, 1:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.