ETV Bharat / state

ಕೋಟಾದಲ್ಲಿ ಸ್ಕೂಟಿ ಕದ್ದು ಸುಳ್ಯದ ಬಾತ್‌ರೂಮ್‌ನಲ್ಲಿ ನಿದ್ರಿಸುತ್ತಿದ್ದಾಗ ಸಿಕ್ಕಿಬಿದ್ದ! - ಸುಳ್ಯ ಪೊಲೀಸ್ ಠಾಣೆ

ಮಂಡ್ಯದ ವ್ಯಕ್ತಿಯೊಬ್ಬ ಸ್ಕೂಟಿ ಕದ್ದು ಹೋಟೆಲ್​ನ ಬಾತ್​ರೂಮ್​ನಲ್ಲಿ ನಿದ್ರಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

A stolen scooty
ಕದ್ದ ಸ್ಕೂಟಿ
author img

By

Published : Apr 13, 2023, 5:35 PM IST

ಸುಳ್ಯ: ಕಳ್ಳನೊಬ್ಬ ಸ್ಕೂಟಿ ಬೈಕ್‌ವೊಂದನ್ನು ಕದ್ದು ತಂದು, ಹೋಟೆಲೊಂದರ ಶೌಚಾಲಯದಲ್ಲಿ ನಿದ್ದೆ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ ಘಟನೆ ಸುಳ್ಯದಲ್ಲಿ ಬೆಳಕಿಗೆ ಬಂದಿದೆ. ಮಂಡ್ಯದ ನಿವಾಸಿ ಸುಲ್ತಾನ್ ಎಂಬಾತ ಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಸ್ಕೂಟಿ ಕದ್ದು ಬಂದು ಮಂಡ್ಯದತ್ತ ಹೋಗುತ್ತಿದ್ದ. ಈ ಸಂದರ್ಭದಲ್ಲಿ ಸುಳ್ಯ ಸಮೀಪದ ಗೂನಡ್ಕದ ದೊಡ್ಡಡ್ಕದಲ್ಲಿರುವ ತಾಜುದ್ದೀನ್ ಟರ್ಲಿ ಎಂಬವರ ಇಂಡಿಯನ್ ಗೇಟ್ ಹೋಟೆಲ್​ನಲ್ಲಿ ಟೀ ಕುಡಿಯಲೆಂದು ವಾಹನ ನಿಲ್ಲಿಸಿದ್ದಾನೆ. ಟೀ ಕುಡಿದ ಬಳಿಕ ಈತ ಶೌಚಾಲಯಕ್ಕೆಂದು ಹೋದವನು ಸುಮಾರು ಅರ್ಧ ಗಂಟೆ ಕಳೆದರೂ ಹೊರಬಾರದಿದ್ದಾಗ ಹೋಟೆಲ್‌ನಲ್ಲಿ ಇದ್ದವರು ಶೌಚಾಲಯದ ಬಾಗಿಲು ಬಡಿದಿದ್ದಾರೆ.

ಇದನ್ನೂ ಓದಿ: ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರ ಕಾರಿನ‌ ಮೇಲೆ ಗುಂಡಿನ ದಾಳಿ!

ಆದರೆ ಒಳಗಿನಿಂದ ಯಾವುದೇ ಶಬ್ದ ಬಾರದಿದ್ದಾಗ ಶೌಚಾಲಯದ ಬಾಗಿಲಿನ ಮೇಲ್ಭಾಗದ ರಂಧ್ರದಿಂದ ಇಣುಕಿ ನೋಡಿದ್ದು ಆತ ಕೆಳಗೆ ಬಿದ್ದ ರೀತಿ ಪತ್ತೆಯಾಗಿದ್ದಾನೆ. ಗಾಬರಿಗೊಂಡ ಹೋಟೆಲ್‌ನವರು ಆತನ ಮೇಲೆ ನೀರು ಹಾಕಿದ್ದಾರೆ. ತಕ್ಷಣ ನಿದ್ದೆಯಿಂದೆದ್ದ ಆತ ಶೌಚಾಲಯದ ಬಾಗಿಲು ತೆಗೆದು ಹೊರಬಂದಿದ್ದಾನೆ.

ಹೋಟೆಲ್‌ನವರು ಆತನನ್ನು ವಿಚಾರಿಸಿದಾಗ ಸಂಶಯಾಸ್ಪದವಾಗಿ ಮಾತನಾಡಿದ್ದು, ಅಲ್ಲಿಂದ ಸ್ಕೂಟಿಯಲ್ಲಿ ಮಡಿಕೇರಿ ಕಡೆ ತೆರಳಲು ಪ್ರಯತ್ನಿಸಿದ್ದಾನೆ. ಸಂಶಯಗೊಂಡ ಹೋಟೆಲ್‌ನವರು ಕಲ್ಲುಗುಂಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಆತನನ್ನು ತಡೆದು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಯನ್ನು ಸುಳ್ಯ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಕೋಟಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಅಲ್ಲಿನ ಪೋಲಿಸರು ಸ್ಕೂಟಿ ವಾಹನವೊಂದು ಕಳ್ಳತನವಾಗಿರುವ ದೂರು ದಾಖಲಾಗಿರುವ ಮಾಹಿತಿ ನೀಡಿದ್ದಾರೆ. ಕೋಟಾ ಪೊಲೀಸರು ಸುಳ್ಯಕ್ಕೆ ಆಗಮಿಸಿ ಆತನನ್ನು ವಶಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಪಾಕ್​ನಿಂದ ಬಂದ ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆ: 500 ಮುಖ ಬೆಲೆಯ ನೋಟುಗಳು, ಶಸ್ತ್ರಾಸ್ತ್ರ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.