ಬಂಟ್ವಾಳ: ಸಿಡಿಲು ಬಡಿದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಸಾರ್ಥಕೋಡಿಯಲ್ಲಿ ನಡೆದಿದೆ.
ಚಂದಪ್ಪ ಮೂಲ್ಯ ಮೃತ ವ್ಯಕ್ತಿ. ಕಳೆದ ರಾತ್ರಿ ಸುಮಾರು 12.30ರ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಚಂದಪ್ಪ ಮೂಲ್ಯ ಅವರು ಸಿಡಿಲಾಘಾತದಿಂದ ತೀವ್ರವಾಗಿ ಗಾಯಗೊಂಡ ಪರಿಣಾಮ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.
ಓದಿ: ಅಧಿಕಾರಿಯಿಂದ ಮಾನಸಿಕ ಕಿರುಕುಳ: ಡೆತ್ನೋಟ್ ಬರೆದಿಟ್ಟು ಪುರಸಭೆ ಆರೋಗ್ಯಾಧಿಕಾರಿ ಆತ್ಮಹತ್ಯೆ ಯತ್ನ
ಸಿಡಿಲಿನಿಂದ ಮನೆಗೂ ಹಾನಿಯಾಗಿದ್ದು, ವಿದ್ಯುತ್ ಉಪಕರಣಗಳು ಸುಟ್ಟುಹೋಗಿವೆ.