ಉಳ್ಳಾಲ/ಮಂಗಳೂರು: ಹರೇಕಳದ ಕೊಲ್ಕೆ ಶಾಲೆ ಬಳಿಯ ಕಿಶೋರ್ ಅಡ್ಯಂತಾಯ (36) ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಒಂದು ವಾರದ ಹಿಂದೆ ನಾಪತ್ತೆಯಾಗಿದ್ದ ಕಿಶೋರ್ ಜೀವನದಲ್ಲಿ ಜಿಗುಪ್ಸೆ ಹೊಂದಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ತಂದೆ ಮತ್ತು ಮಗ ಇಬ್ಬರೇ ಮನೆಯಲ್ಲಿ ವಾಸಿಸುತ್ತಿದ್ದು, ನಾಪತ್ತೆಯಾದ ಎರಡು ದಿನಗಳ ನಂತರ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಹಿಂದೆ ನೇತ್ರಾವತಿ ಸೇತುವೆಯಲ್ಲಿ ಕೊಡೆ ಪತ್ತೆಯಾದ ಸಂದರ್ಭದಲ್ಲಿ ಯಾವುದೇ ಠಾಣೆಯಲ್ಲಿ ದೂರು ದಾಖಲಾಗಿರಲಿಲ್ಲ. ಅತ್ತ ಶಾಸಕ ವೇದವ್ಯಾಸ್ ಕಾಮತ್ ಅವರು, ಸರಣಿ ಆತ್ಮಹತ್ಯೆ ತಡೆಗೆ ಸೇತುವೆಗೆ ಬೇಲಿ ಹಾಕುವ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ ದಿನದಂದೇ ಕೊಡೆ ಪತ್ತೆಯಾಗಿ, ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬ ಸುದ್ದಿ ಹರಡಿತ್ತು. ಆದರೆ ಕಂಕನಾಡಿ ಪೊಲೀಸರಿಗೆ ಈ ಕುರಿತು ಯಾವುದೇ ಮಾಹಿತಿ ಇರಲಿಲ್ಲ.
ಸದ್ಯ ಕಿಶೋರ್ ಅಡ್ಯಂತಾಯ (36) ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.