ETV Bharat / state

Instagramನಲ್ಲಿ ಪರಿಚಯವಾಗಿದ್ದ ಮಹಿಳೆ ಮೇಲೆ ಅತ್ಯಾಚಾರ; ಬಂಟ್ವಾಳದಲ್ಲಿ ಓರ್ವನ ಬಂಧನ - Dakahina kananda news

ಇನ್ಸ್​​ಸ್ಟಾಗ್ರಾಮ್​​​ನಲ್ಲಿ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ವಿವಾಹಿತ ಮಹಿಳೆಯೊಬ್ಬರನ್ನು ಆರೋಪಿ ಪರಿಚಯ ಮಾಡಿಕೊಂಡಿದ್ದಾನೆ. ಆ ಬಳಿಕ ಮಹಿಳೆಯ ಭೇಟಿಗೆಂದು ಆಗಮಿಸಿ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆ ದೂರು ನೀಡಿದ್ದಾರೆ.

man-arrested-for-woman-who-accused-of-raping-in-bantwal
ದ.ಕ: ಇನ್ಸ್​ಸ್ಟಾಗ್ರಾಮ್​ನಲ್ಲಿ ಪರಿಚಯವಾಗಿದ್ದ ಮಹಿಳೆ ಮೇಲೆ ಅತ್ಯಾಚಾರ ಆರೋಪ
author img

By

Published : Jul 13, 2021, 4:09 PM IST

ಬಂಟ್ವಾಳ (ದ.ಕ): ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರನ್ನು ಪರಿಚಯ ಮಾಡಿಕೊಂಡು, ಸಲಿಗೆ ಬೆಳೆಸಿ, ಬಳಿಕ ಆಕೆಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪದಡಿಯಲ್ಲಿ ಮೊಹಮದ್ ಅಯೂಬ್ ಎಂಬಾತನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.

ಈತ ಇನ್ಸ್​​ಸ್ಟಾಗ್ರಾಮ್​​​ನಲ್ಲಿ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ವಿವಾಹಿತ ಮಹಿಳೆಯೊಬ್ಬರ ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಮಹಿಳೆಯೊಂದಿಗೆ ಸಲುಗೆಯಿಂದಿದ್ದು, ಆಕೆಯನ್ನು ಭೇಟಿಯಾಗಲು ಮಹಿಳೆಯ ಮನೆಗೇ ಬಂದಿದ್ದಾನೆ. ಈ ವೇಳೆ ಅತ್ಯಾಚಾರ ಮಾಡಿದ್ದಾಗಿ ಮಹಿಳೆ ದೂರಿದ್ದು, ಯಾರಲ್ಲಾದರೂ ತಿಳಿಸಿದರೆ ಮೊಬೈಲ್​​ನಲ್ಲಿರುವ ಫೊಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದಾಗಿ ಸಂತ್ರಸ್ತೆ ದೂರು ಕೊಟ್ಟಿದ್ದಾರೆ.

ಮಹಿಳೆ ನೀಡಿದ ದೂರಿನಂತೆ ಆರೋಪಿಯನ್ನು ಬಂಧಿಸಲಾಗಿದೆ. ಬಂಟ್ವಾಳ ನಗರ ಠಾಣೆಯಲ್ಲಿ ಈ ಕುರಿತು ಕಲಂ 376, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹೈವೇ ದರೋಡೆಕೋರರ ಹಾವಳಿ : ಕೇರಳ ವ್ಯಾಪಾರಿಯನ್ನು ಅಪಹರಿಸಿ ಹಣ ಕಸಿದ ಖದೀಮರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.