ETV Bharat / state

ಮಂಗಳೂರು: ನಕಲಿ ರೈಲ್ವೆ ಫಿಟ್ನೆಸ್‌ ಸರ್ಟಿಫಿಕೆಟ್‌ ನೀಡಿ ವಂಚನೆ, ವೈದ್ಯನ ಬಂಧನ - railway fitness certificate

ಸಿಬಿಐ ಭ್ರಷ್ಟಾಚಾರ ತಡೆ ದಳ ದಾಳಿ ನಡೆಸಿ ಮಂಗಳೂರಿನಲ್ಲಿ ರೈಲ್ವೆ ನೌಕರರ ಆರೋಗ್ಯ ಕ್ಷಮತೆಯ ಕುರಿತು ನಕಲಿ ಮೆಡಿಕಲ್‌ ಸರ್ಟಿಫಿಕೇಟ್‌ ನೀಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದೆ.

ಆರೋಗ್ಯ ಘಟಕ
ಆರೋಗ್ಯ ಘಟಕ
author img

By

Published : Jun 12, 2022, 8:31 AM IST

ಮಂಗಳೂರು: ರೈಲ್ವೆ ನೌಕರರ ಆರೋಗ್ಯ ಕ್ಷಮತೆಯ ಕುರಿತು ಸೆಂಟ್ರಲ್‌ ರೈಲ್ವೆ ನಿಲ್ದಾಣದ ಬಳಿಯ ಆರೋಗ್ಯ ಘಟಕದಲ್ಲಿ ನಿಯಮಬಾಹಿರವಾಗಿ ನಕಲಿ ಮೆಡಿಕಲ್‌ ಸರ್ಟಿಫಿಕೇಟ್‌ ಒದಗಿಸುತ್ತಿದ್ದ ವೈದ್ಯನನ್ನು ಬೆಂಗಳೂರಿನ ಸಿಬಿಐ ಭ್ರಷ್ಟಾಚಾರ ತಡೆ ದಳ ಬಂಧಿಸಿದೆ. ಮಂಗಳೂರಿನ ಇಬ್ರಾಹಿಂ ಬಂಧಿತ ಆರೋಪಿ.

ಈತನನ್ನು ಬಂಧಿಸಿರುವ ಬಗ್ಗೆ ಸಿಬಿಐ ಅಧಿಕಾರಿಗಳು ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ರೈಲ್ವೆಯಲ್ಲಿ ಕೆಲಸ ಮಾಡುವ ನೌಕರರು ಪ್ರತಿ ವರ್ಷಕ್ಕೊಮ್ಮೆ ಫಿಟ್‌ನೆಸ್‌ ಸರ್ಟಿಫಿಕೇಟ್ ನೀಡಬೇಕು. ಹೀಗಿದ್ದರೆ ಮಾತ್ರವೇ ಅವರಿಗೆ ರೈಲ್ವೆ ನಿಲ್ದಾಣ ಮತ್ತು ರೈಲುಗಳಲ್ಲಿ ಕೆಲಸ ಮಾಡಲು ಬಿಡಲಾಗುತ್ತದೆ.

ಆರೋಗ್ಯ ಇಲಾಖೆಗೆ ತೆರಳದೆ ಇಬ್ರಾಹಿಂ ಮೂಲಕ ನಕಲಿ ಸರ್ಟಿಫಿಕೇಟ್ ಪಡೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ತಿಳಿದು ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತನಿಖೆಯ ವೇಳೆ ಆರೋಪಿ ಸಾವಿರಕ್ಕೂ ಅಧಿಕ ಫಿಟ್‌ನೆಸ್‌ ಸರ್ಟಿಫಿಕೇಟ್ ನೀಡಿರುವುದು ಗೊತ್ತಾಗಿದೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರು: ಕಂಠಪೂರ್ತಿ ಮದ್ಯ ಸೇವಿಸಿ ವೈದ್ಯಕೀಯ ವಿದ್ಯಾರ್ಥಿಯ ಪುಂಡಾಟಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.