ETV Bharat / state

ಮಂಗಳೂರಿನಲ್ಲಿ ಅಕ್ರಮವಾಗಿ ವನ್ಯ ಪ್ರಾಣಿಗಳ ಕೊಂಬು ಮಾರಾಟಕ್ಕೆ ಯತ್ನ; ಓರ್ವನ ಬಂಧನ

author img

By

Published : Jan 21, 2020, 1:05 AM IST

ಕೃಷ್ಣ ಮೃಗ ಮತ್ತು ಜಿಂಕೆಯ ಕೊಂಬುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ ಮಾಡುವಲ್ಲಿ ಅರಣ್ಯ ಸಂಚಾರಿ ದಳದ ಪೊಲೀಸರು ಹಾಗೂ ಬಂಟ್ವಾಳ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

illegally selling wild animal horn
ಓರ್ವ ವ್ಯಕ್ತಿ ಬಂಧನ

ಮಂಗಳೂರು: ಕೃಷ್ಣ ಮೃಗ ಮತ್ತು ಜಿಂಕೆಯ ಕೊಂಬುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ಸಿಐಡಿ ಅರಣ್ಯ ಸಂಚಾರಿ ದಳ ಮತ್ತು ಬಂಟ್ವಾಳ ಅರಣ್ಯ ಇಲಾಖಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಗಳೂರು ತಾಲೂಕು ಕಂಕನಾಡಿ ಗ್ರಾಮದ ಉಜ್ಜೋಡಿ ನಿವಾಸಿ ದಿಲೀಪ್ ಕುಮಾರ್ ಜಿ. (30) ಬಂಧಿತ ಆರೋಪಿ. ಈತ ಕೃಷ್ಣ ಮೃಗ ಮತ್ತು ಜಿಂಕೆಯ ಕೊಂಬುಗಳನ್ನು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಮಂಗಳೂರಿನಿಂದ ಬಿ.ಸಿ.ರೋಡ್ ಕಡೆಗೆ ಬರುತ್ತಿದ್ದನು. ಇದರ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಸಂಚಾರಿ ದಳದ ಪೊಲೀಸರು ಹಾಗೂ ಬಂಟ್ವಾಳ ಅರಣ್ಯ ಅಧಿಕಾರಿಗಳು ತುಂಬೆ ಗ್ರಾಮದ ಬಂಟರ ಭವನದ ಬಳಿಯ ವಳವೂರು ಎಂಬಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ.

ಬಂಧಿತನಿಂದ ಲಕ್ಷಾಂತರ ರೂ. ಮೌಲ್ಯದ ಕೃಷ್ಣ ಮೃಗದ ಎರಡು ಕೊಂಬುಗಳು ಹಾಗೂ ಜಿಂಕೆಯ ನಾಲ್ಕು ಕೊಂಬುಗಳು ಹಾಗೂ ಮೂರು ಲಕ್ಷ ರೂ‌. ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಮುಂದಿನ ಕಾನೂನು ಕ್ರಮಕ್ಕಾಗಿ ಬಂಟ್ವಾಳ ವಲಯ ಅರಣ್ಯ ಅಧಿಕಾರಿಗಳಿಗೆ ಕೊಂಬುಗಳನ್ನು ಹಸ್ತಾಂತರ ಮಾಡಲಾಗಿದೆ. ‌

ಸಿಐಡಿ ಅರಣ್ಯ ಘಟಕ ಬೆಂಗಳೂರು ಎ.ಡಿ.ಜಿ.ಪಿ ಡಾ.ರವೀಂದ್ರನಾಥನ್ ಮತ್ತು ಸಿ.ಐ.ಡಿ.ಅರಣ್ಯ ಮಡಿಕೇರಿ ಘಟಕದ ಪೊಲೀಸ್ ಅಧೀಕ್ಷಕ ಸುರೇಶ್ ಬಾಬು ಕಾರ್ಯಾಚರಣೆಯ,ಲ್ಲಿ ಭಾಗಿಯಾಗಿದ್ದರು., ಮಂಗಳೂರು ಸಿ.ಐ.ಡಿ.ಅರಣ್ಯ ಸಂಚಾರಿ ದಳದ ಪಿ.ಎಸ್.ಐ. ಪುರುಷೋತ್ತಮ, ಸಿಬ್ಬಂದಿಗಳಾದ ಜಗನ್ನಾಥ ಶೆಟ್ಟಿ, ಉದಯ ನಾಯ್ಕ, ಮಹೇಶ್, ದೇವರಾಜ್ , ಪ್ರವೀಣ್ ಸುಂದರ್ ಶೆಟ್ಟಿ ಹಾಗೂ ಬಂಟ್ವಾಳ ಅರಣ್ಯ ವಲಯ ಅಧಿಕಾರಿ ಸುರೇಶ್ ಸಿಬ್ಬಂದಿಗಳಾದ ಪ್ರೀತಂ, ವಿನಯ್, ಜಿತೇಶ್ ಪಾಲ್ಗೊಂಡಿದ್ದರು.

Intro:ಮಂಗಳೂರು: ಕೃಷ್ಣ ಮೃಗ ಮತ್ತು ಜಿಂಕೆಯ ಕೊಂಬುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ವಳವೂರು ಎಂಬಲ್ಲಿ ಮಂಗಳೂರು ಸಿ.ಐ.ಡಿ. ಅರಣ್ಯ ಸಂಚಾರಿ ದಳದವರು ಮತ್ತು ಬಂಟ್ವಾಳ ಅರಣ್ಯ ಇಲಾಖಾ ಅಧಿಕಾರಿಗಳು ಬಂಧಿಸಿದ ಪಡೆದುಕೊಂಡ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಮಂಗಳೂರು ತಾಲೂಕಿನ ಕಂಕನಾಡಿ ಗ್ರಾಮದ ಉಜ್ಜೋಡಿ ನಿವಾಸಿ  ದಿಲೀಪ್ ಕುಮಾರ್ ಜಿ. (30) ಬಂಧಿತ ಆರೋಪಿ.

ಈತನಿಂದ ಲಕ್ಷಾಂತರ ರೂ. ಮೌಲ್ಯದ ಕೃಷ್ಣಮೃಗದ ಎರಡು ಕೊಂಬುಗಳು ಹಾಗೂ ಜಿಂಕೆಯ 4 ಕೊಂಬುಗಳು ಹಾಗೂ 3 ಲಕ್ಷ ರೂ‌. ಮೌಲ್ಯದ ಕಾರನ್ನು ವಸಪಡಿಸಿಕೊಳ್ಳಲಾಗಿದೆ. 

ಆರೋಪಿ ದಿಲೀಪ್ ಕೊಂಬುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಮಂಗಳೂರಿನಿಂದ ಬಿ.ಸಿ.ರೋಡ್ ಕಡೆಗೆ ಬರುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಸಂಚಾರಿ ಪೊಲೀಸರು ಹಾಗೂ ಬಂಟ್ವಾಳ ಅರಣ್ಯ ಅಧಿಕಾರಿಗಳು ತುಂಬೆ ಗ್ರಾಮದ ಬಂಟರಭವನದ ಬಳಿಯ ವಳವೂರು ಎಂಬಲ್ಲಿ
ದಾಳಿ ನಡೆಸಿದ ಸೊತ್ತನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ‌. ಮುಂದಿನ ಕಾನೂನು ಕ್ರಮಕ್ಕಾಗಿ ಬಂಟ್ವಾಳ ವಲಯ ಅರಣ್ಯ ಅಧಿಕಾರಿಗಳಿಗೆ ಕೊಂಬುಗಳನ್ನು ಹಸ್ತಾಂತರ ಮಾಡಿದ್ದಾರೆ. ‌

Body:ಈ ಕಾರ್ಯಾಚರಣೆಯಲ್ಲಿ ಸಿ.ಐ.ಡಿ.ಅರಣ್ಯ ಘಟಕ ಬೆಂಗಳೂರು ಎ.ಡಿ.ಜಿ.ಪಿ ಡಾ.ರವೀಂದ್ರನಾಥನ್ ಮತ್ತು ಸಿ.ಐ.ಡಿ.ಅರಣ್ಯ ಮಡಿಕೇರಿ ಘಟಕದ ಪೊಲೀಸ್ ಅಧೀಕ್ಷಕ ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ, ಮಂಗಳೂರು ಸಿ.ಐ.ಡಿ.ಅರಣ್ಯ ಸಂಚಾರದ ಪಿ.ಎಸ್.ಐ. ಪುರುಷೋತ್ತಮ, ಸಿಬ್ಬಂದಿಯಾದ ಜಗನ್ನಾಥ ಶೆಟ್ಟಿ, ಉದಯ ನಾಯ್ಕ, ಮಹೇಶ್, ದೇವರಾಜ್ , ಪ್ರವೀಣ್ ಸುಂದರ್ ಶೆಟ್ಟಿ ಹಾಗೂ ಬಂಟ್ವಾಳ ಅರಣ್ಯ ವಲಯ ಅಧಿಕಾರಿ ಸುರೇಶ್ ಸಿಬ್ಬಂದಿಯಾದ ಪ್ರೀತಂ, ವಿನಯ್, ಜಿತೇಶ್ ಭಾಗವಹಿಸಿದ್ದರು.

Reporter_Vishwanath PanjimogaruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.