ಮಂಗಳೂರು: ವಿದೇಶದಿಂದ ಚಿನ್ನ ಕಳ್ಳಸಾಗಾಟ ಮಾಡಲು ನಾನಾ ತಂತ್ರಗಳನ್ನು ಸ್ಮಗ್ಲರ್ಗಳು ಬಳಸುತ್ತಿರುತ್ತಾರೆ. ಇದೀಗ ಹೇರ್ ಬ್ಯಾಂಡ್ನಲ್ಲಿ ಚಿನ್ನ ಕಳ್ಳ ಸಾಗಾಟ ಮಾಡುತ್ತಿದ್ದವರನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಇಂದು ದುಬೈನಿಂದ ಆಗಮಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಬಂದಿದ್ದ ಮುರುಡೇಶ್ವರದ ಪ್ರಯಾಣಿಕ ಈ ಹೊಸ ವಿಧಾನದಲ್ಲಿ ಚಿನ್ನ ಕಳ್ಳಸಾಗಣೆಗೆ ಯತ್ನಿಸಿ ಮಂಗಳೂರು ಕಸ್ಟಮ್ಸ್ ಅಧಿಕಾರಗಳಿಗೆ ಸಿಕ್ಕಿಬಿದ್ದಿದ್ದಾನೆ.
ಈತನನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ ಮಹಿಳೆಯರ ಹೇರ್ ಬ್ಯಾಂಡ್ ಸಿಕ್ಕಿದೆ. ಹೇರ್ ಬ್ಯಾಂಡ್ನ ಮೇಲ್ಬಾಗದಲ್ಲಿ ತಂತಿ ರೂಪದಲ್ಲಿ ಚಿನ್ನವನ್ನು ಅಡಗಿಸಿ ತಂದಿದ್ದಾನೆ. ಇದನ್ನು ತಪಾಸಣೆ ನಡೆಸಿದಾಗ 115 ಗ್ರಾಂ ಚಿನ್ನ ಪತ್ತೆಯಾಗಿದ್ದು, ಇದನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಚಿನ್ನದ ಮೌಲ್ಯ ರೂ 5,58,900 ಎಂದು ಅಂದಾಜಿಸಲಾಗಿದೆ.
ಮಿಕ್ಸರ್ ಗ್ರೈಂಡರ್ ಒಳಭಾಗದಲ್ಲಿ ಪತ್ತೆಯಾಗಿತ್ತು ಚಿನ್ನ:
ಆಗಸ್ಟ್ 12 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಬಂದ ಪ್ರಯಾಣಿಕನ ಬಳಿ ರೂ 16,85,087 ಮೌಲ್ಯದ 350.330 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿರುವುದಾಗಿ ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ.
ಮಿಕ್ಸರ್ ಗ್ರೈಂಡರ್ ಒಳಭಾಗದಲ್ಲಿ ಚಿನ್ನವನ್ನು ಅಡಗಿಸಿ ಕೇರಳದ ಕಾಸರಗೋಡು ಮೂಲದ ಪ್ರಯಾಣಿಕ ಸಾಗಿಸುತ್ತಿದ್ದ. ಎರಡು ಪ್ರಕರಣಗಳಲ್ಲಿ ಪ್ರಯಾಣಿಕರು ಮತ್ತು ಚಿನ್ನವನ್ನು ವಶಕ್ಕೆ ಪಡೆದುಕೊಂಡ ಕಸ್ಟಮ್ಸ್ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಅಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ:
ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಹೊಸ ವಿಧಾನದಲ್ಲಿ ಆರಂಭವಾದ ಕಳ್ಳಸಾಗಣೆ ಪತ್ತೆ ಹಚ್ಚಿರುವ ವಿಡಿಯೋವನ್ನು ಬೆಂಗಳೂರು ಕಸ್ಟಮ್ಸ್ ಟ್ವೀಟ್ ಮಾಡಿ ಶ್ಲಾಘಿಸಿದೆ.
-
ಚಿನ್ನವನ್ನು ಕಳ್ಳಸಾಗಣೆ ಮಾಡಲು ಬಳಸಿದ ಹೊಸ ವಿಧಾನಗಳನ್ನು ಪತ್ತೆ ಮಾಡಿದಕ್ಕಾಗಿ ಮಂಗಳೂರಿನ ಕಸ್ಟಮ್ಸ್ ಅಧಿಕಾರಿಗಳಿಗೆ ಅಭಿನಂದನೆಗಳು, https://t.co/IvRWUw4CSU
— Bengaluru Customs (@blrcustoms) August 21, 2021 " class="align-text-top noRightClick twitterSection" data="
">ಚಿನ್ನವನ್ನು ಕಳ್ಳಸಾಗಣೆ ಮಾಡಲು ಬಳಸಿದ ಹೊಸ ವಿಧಾನಗಳನ್ನು ಪತ್ತೆ ಮಾಡಿದಕ್ಕಾಗಿ ಮಂಗಳೂರಿನ ಕಸ್ಟಮ್ಸ್ ಅಧಿಕಾರಿಗಳಿಗೆ ಅಭಿನಂದನೆಗಳು, https://t.co/IvRWUw4CSU
— Bengaluru Customs (@blrcustoms) August 21, 2021ಚಿನ್ನವನ್ನು ಕಳ್ಳಸಾಗಣೆ ಮಾಡಲು ಬಳಸಿದ ಹೊಸ ವಿಧಾನಗಳನ್ನು ಪತ್ತೆ ಮಾಡಿದಕ್ಕಾಗಿ ಮಂಗಳೂರಿನ ಕಸ್ಟಮ್ಸ್ ಅಧಿಕಾರಿಗಳಿಗೆ ಅಭಿನಂದನೆಗಳು, https://t.co/IvRWUw4CSU
— Bengaluru Customs (@blrcustoms) August 21, 2021