ETV Bharat / state

ಆಯುಷ್ ಸಚಿವಾಲಯದ 26 ಸಾಂಪ್ರದಾಯಿಕ ಪಾಕವಿಧಾನಗಳಲ್ಲಿ ಕರಾವಳಿಯ 'ಪತ್ರೋಡೆ'ಗೆ ಸ್ಥಾನ

ಕೇಂದ್ರದ ಆಯುಷ್ ಸಚಿವಾಲಯವು 26 ಸಾಂಪ್ರದಾಯಿಕ ಪಾಕವಿಧಾನಗಳನ್ನು ಒಳಗೊಂಡ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಪ್ರಸಿದ್ಧವಾದ ಕೆಸುವಿನ ಎಲೆಯಲ್ಲಿ ಮಾಡುವ 'ಪತ್ರೋಡೆ'ಯೂ ಒಳಗೊಂಡಿದೆ.

Malnad Pathrode
ಕೆಸು ಸಸ್ಯ
author img

By

Published : Jul 1, 2021, 10:49 PM IST

ಮಂಗಳೂರು: ಕೇಂದ್ರದ ಆಯುಷ್ ಸಚಿವಾಲಯವು 26 ಸಾಂಪ್ರದಾಯಿಕ ಪಾಕವಿಧಾನಗಳನ್ನು ಒಳಗೊಂಡ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿದ್ದು, ಇದರಲ್ಲಿ‌ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಪ್ರಸಿದ್ಧವಾದ ಕೆಸುವಿನ ಎಲೆಯಲ್ಲಿ ಮಾಡುವ 'ಪತ್ರೋಡೆ'ಯೂ ಒಳಗೊಂಡಿದೆ.

Malnad Pathrode
ಪತ್ರೋಡೆ

ಕೆಸುವಿನಲ್ಲಿದೆ ವಿಟಮಿನ್ ಸಿ, ಬೀಟಾ ಕೆರೋಟಿನ್

ಕೆಸು ಮಳೆಗಾಲದಲ್ಲಿ ಮಾತ್ರ ಕಾಣಸಿಗುವ ಸಣ್ಣ ಸಸ್ಯವಾಗಿದೆ. ಈ ಕೆಸುವಿಗೆ ಮಳೆಗಾಲದಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಇದರಲ್ಲಿ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಇವುಗಳಲ್ಲಿ 'ಪತ್ರೋಡೆ' ಬಹಳ ಪ್ರಖ್ಯಾತಿ ಪಡೆದಿದೆ. ಕೆಸುವಿನಲ್ಲಿ ದೇಹಕ್ಕೆ ಅಗತ್ಯವಿರುವ ಕಬ್ಬಿಣದ ಅಂಶ ಹಾಗೂ ಜೀವಸತ್ವಗಳಿದ್ದು, ಹಿಮೋಗ್ಲೋಬಿನ್ ಪ್ರಮಾಣವೂ ಹೆಚ್ಚಾಗುತ್ತದೆ. ಅಲ್ಲದೆ ಸಂಧಿವಾತ, ಉರಿಯೂತ ತಡೆಗಟ್ಟುವ ಅಂಶಗಳು ಕೆಸುವಿನಲ್ಲಿದ್ದು, ವಿಟಮಿನ್ ಸಿ ಹಾಗೂ ಬೀಟಾ ಕೆರೋಟಿನ್ ಇದರಲ್ಲಿದೆ.

ಕೆಸುವು ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಪ್ರಸಿದ್ಧವಾದರೂ ಭಾರತದ ಕೇರಳ, ಗೋವಾ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಗುಜರಾತ್​​ಗಳಲ್ಲಿಯೂ ಇದರ ಬಳಕೆಯಿದೆ. ಕೇಂದ್ರದ ಆಯುಷ್ ಸಚಿವಾಲಯವು ಬಿಡುಗಡೆ ಮಾಡಿರುವ ಕಿರುಹೊತ್ತಿಗೆಯು ಸಚಿವಾಲಯದ ವೆಬ್​​ಸೈಟ್​​ನಲ್ಲಿ ಇ-ರೂಪದಲ್ಲಿ ದೊರೆಯುತ್ತದೆ. ಇದರಲ್ಲಿ ಪತ್ರೋಡೆ ತಯಾರಿಸುವ ವಿಧಾನ, ಅದರ ಉಪಯೋಗ, ಆರೋಗ್ಯ ಸತ್ವಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ.

ಈ ವೆಬ್​​ಸೈಟ್​​ನಲ್ಲಿ‌ ಆಯುಷ್ ಇಲಾಖೆಯು ಸೂಚಿಸಿರುವ ಉಳಿದ 25 ಆಹಾರ ಪದಾರ್ಥಗಳ ಬಗ್ಗೆಯೂ ವಿವರವಾಗಿ ತಿಳಿಸಲಾಗಿದ್ದು, ಈ 26 ಆಹಾರ ಪದಾರ್ಥಗಳ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವ‌ ಹಿನ್ನೆಲೆಯಲ್ಲಿ ಈ ಕಿರುಹೊತ್ತಿಗೆಯನ್ನು ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಅನುವಾದ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.