ETV Bharat / state

ಕಳಪೆ ಅಕ್ಕಿ.. ವಾಪಸ್​ ಕಳುಹಿಸಿದ ಶಾಸಕ ಕಾಮತ್​​​​

ಮಂಗಳೂರಿನ ಶಕ್ತಿನಗರದ ಆಹಾರ ಪೂರೈಕೆ ಇಲಾಖೆಯ ಗೋದಾಮಿಗೆ ಇಂದು ಒಂದು ಲೋಡ್ ಅಕ್ಕಿ ಬಂದಿತ್ತು, ಆದ್ರೆ ಅಕ್ಕಿಯ ಗುಣಮಟ್ಟ ಸರಿಯಿಲ್ಲ ಎಂಬ ಮಾಹಿತಿ ಪಡೆದ ಶಾಸಕ ವೇದವ್ಯಾಸ್ ಕಾಮತ್ ಅವರು ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

lower quality rice came to Mangalore
ಮಂಗಳೂರಿಗೆ ಬಂದ ಅಕ್ಕಿಯ ಗುಣಮಟ್ಟದಲ್ಲಿ ವ್ಯತ್ಯಯ
author img

By

Published : Apr 21, 2020, 9:27 PM IST

ಮಂಗಳೂರು: ಪಡಿತರ ವ್ಯವಸ್ಥೆ ಮೂಲಕ ನೀಡಲಾಗುವ ಅಕ್ಕಿಯು ಕಳಪೆ ಗುಣಮಟ್ಟದಿಂದ ಕೂಡಿದ್ದ ಹಿನ್ನೆಲೆ ಶಾಸಕ ವೇದವ್ಯಾಸ ಕಾಮತ್ ಅದನ್ನು ವಾಪಸ್ ಕಳುಹಿಸಿದ್ದಾರೆ.

ಶಕ್ತಿನಗರದ ಆಹಾರ ಪೂರೈಕೆ ಇಲಾಖೆಯ ಗೋದಾಮಿಗೆ ಇಂದು ಒಂದು ಲೋಡ್ ಅಕ್ಕಿ ಬಂದಿತ್ತು, ಆದ್ರೆ ಅಕ್ಕಿಯ ಗುಣಮಟ್ಟ ಸರಿಯಿಲ್ಲ ಎಂಬ ಮಾಹಿತಿ ಪಡೆದ ಶಾಸಕ ವೇದವ್ಯಾಸ್ ಕಾಮತ್ ಅವರು ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಂಗಳೂರಿಗೆ ವಿತರಿಸಲು ಇಂದು ತಂದಿದ್ದ ಅಕ್ಕಿಯ ಗುಣಮಟ್ಟ ಉತ್ತಮವಾಗಿಲ್ಲ. ಈ ಅಕ್ಕಿಯನ್ನು ಮಂಗಳೂರಿನ ಜನತೆಗೆ ವಿತರಿಸಲು ಸಾಧ್ಯವಿಲ್ಲ. ಹಾಗಾಗಿ ಉತ್ತಮ ಗುಣಮಟ್ಟದ ಅಕ್ಕಿಯನ್ನು ತರಿಸಿ ಜನರಿಗೆ ವಿತರಿಸಲು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ತಂದಿದ್ದ ಅಕ್ಕಿಯನ್ನು ಲಾರಿಗಳಿಗೆ ತುಂಬಿಸಿ ವಾಪಸ್ ಕಳಿಸುವ ತನಕ ಶಾಸಕ ವೇದವ್ಯಾಸ ಕಾಮತ್ ಸ್ಥಳದಲ್ಲಿ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.