ETV Bharat / state

ಕಾಮಗಾರಿ ಬಿಲ್ ಮಂಜೂರಾತಿಗಾಗಿ ಲಂಚ: ಪಂಚಾಯತ್ ರಾಜ್ ಅಧಿಕಾರಿ ಲೋಕಾಯುಕ್ತ ಬಲೆಗೆ

author img

By

Published : Feb 21, 2023, 1:57 PM IST

ಕಾಮಗಾರಿ ಬಿಲ್ ಮಂಜೂರಾತಿಗಾಗಿ ಲಂಚ ಸ್ವೀಕಾರ - ಪಂಚಾಯತ್ ರಾಜ್ ಅಧಿಕಾರಿ ಲೋಕಾಯುಕ್ತ ಬಲೆಗೆ - ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ದಾಳಿ

bribe
ಲಂಚ ಸ್ವೀಕಾರ

ದಕ್ಷಿಣ ಕನ್ನಡ: ಕಾಮಗಾರಿ ಬಿಲ್ ಮಂಜೂರಾತಿಗಾಗಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಪಂಚಾಯತ್ ರಾಜ್ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್​ನ ಪಂಚಾಯತ್ ರಾಜ್ ತಾಂತ್ರಿಕ ವಿಭಾಗದ ಸಹಾಯಕ ಇಂಜಿನಿಯರ್​ ಕುಮಾರಿ ರೂಪಾ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಹದ್ದಿನ ಕಣ್ಣಿಗೆ ಬಿದ್ದಿದ್ದಾರೆ.

ಬೆಳ್ತಂಗಡಿ ತಾಲೂಕಿನ ಪರಿಶಿಷ್ಟ ಜಾತಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಡಾರ್ಮಿಟರ್ ಹಾಲ್ ರಚನೆಯ ಟೆಂಡರ್ ಕಾಮಗಾರಿಯ ಬಿಲ್ ಮಂಜೂರಾತಿಗಾಗಿ ಕುಮಾರಿ ರೂಪಾ ಲಂಚ ಸ್ವೀಕರಿಸುತ್ತಿದ್ದರು. 10 ಸಾವಿರ ರೂಪಾಯಿ ಲಂಚಕ್ಕೆ ಕುಮಾರಿ ರೂಪಾ ಬೇಡಿಕೆಯಿಟ್ಟಿದ್ದು, 8 ಸಾವಿರ ರೂಪಾಯಿಯನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಳಿಕ ಹಣವನ್ನು ವಶಕ್ಕೆ ಪಡೆದು ಅಧಿಕಾರಿಯನ್ನು ಬಂಧಿಸಿದ್ದಾರೆ.

ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರುಗಳಾದ ಕಲಾವತಿ, ಚಲುವರಾಜು.ಬಿ, ಹಾಗೂ ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ ಎ ಇವರುಗಳು ಸಿಬ್ಬಂದಿ ಜೊತೆ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಲೋಕಾಯುಕ್ತ ಮಂಗಳೂರು ವಿಭಾಗದ ಎಸ್​ಪಿಸಿಎ ಸೈಮನ್ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರತ್ಯೇಕ ಘಟನೆ: ಗೋದಾಮಿಗೆ ಬೆಂಕಿ‌ ಬಿದ್ದು ಫರ್ನೀಚರ್​​ ಬೆಂಕಿಗಾಹುತಿ.. ವಾಹನಕ್ಕೆ ಬೆಂಕಿ ಹಚ್ಚಿ ಕಿಡಿಗೇಡಿಗಳು ಪರಾರಿ

ಉಳ್ಳಾಲದಲ್ಲಿ ಮಹಿಳೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ: ಒಂಟಿ ಮಹಿಳೆಯ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆಯು ಉಳ್ಳಾಲದ ಹರೇಕಳ ಸಮೀಪದ ದೇರಡ್ಕ ಎಂಬಲ್ಲಿ ನಡೆದಿದ್ದು, ಮಹಿಳೆ ವಾಸವಿದ್ದ ಮನೆಯ ಅಡುಗೆ ಕೋಟೆಯಲ್ಲಿಯೇ ಶವ ದೊರೆತಿದೆ. ಹರೇಕಳ ದೇರಡ್ಕ ನಿವಾಸಿ ಜೀನಿ ಡಿಸೋಜಾ ಎಂಬವರ ಪತ್ನಿ ಮಗ್ಗಿ ಮೊಂತೇರೊ (62) ಮೃತ ಮಹಿಳೆ.

ಏನಿದು ಪ್ರಕರಣ?: ಫೆಬ್ರವರಿ 16 ರಂದು ತವರು ಮನೆಗೆ ಬಂದಿದ್ದ ಪುತ್ರಿಯು ತಾಯಿಯೊಂದಿಗೆ ಮಾತನಾಡಿ ತೆರಳಿದ್ದರು. ಅದಾದ ಮೂರು ದಿನಗಳಿಂದ ತಾಯಿ ಮೊಬೈಲ್ ಕರೆ ಸ್ವೀಕರಿಸದ ಹಿನ್ನೆಲೆ ಭಯಗೊಂಡ ಪುತ್ರಿಯು ಮನೆಗೆ ಬಂದಿದ್ದಾರೆ. ಈ ವೇಳೆ, ತಾಯಿಯ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಡುಗೆ ಕೋಣೆಯ ಒಲೆಯ ಸಮೀಪದಲ್ಲೇ ಕುಸಿದು ಬಿದ್ದ ರೀತಿಯಲ್ಲಿ ಶವ ಸಿಕ್ಕಿದೆ.

ಅಸೌಖ್ಯದಿಂದ ಕೆಳಗೆ ಬಿದ್ದು ತಲೆಗೆ ಗಾಯವಾಗಿ ಸಾವನ್ನಪ್ಪಿರುವ ಶಂಕೆಯನ್ನು ಕೊಣಾಜೆ ಪೊಲೀಸರು ವ್ಯಕ್ತಪಡಿಸಿದ್ದಾರೆ. ಸ್ಥಳೀಯರೊಂದಿಗೆ ಮಾತನಾಡದೇ ಇರುತ್ತಿದ್ದ ಮಗ್ಗಿ ಮೊಂತೇರೊ ಅವರು 3 ಎಕರೆ ಸ್ಥಳದಲ್ಲಿದ್ದ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಓರ್ವ ಪುತ್ರ ಕೂಡ ತಾಯಿಯೊಂದಿಗೆ ಇರುತ್ತಿರಲಿಲ್ಲ. ಅಪರೂಪಕ್ಕೆ ಅಕ್ಕಪಕ್ಕದವರ ಜೊತೆ ಮಾತನಾಡುವಾಗ, ಗುಳಿಗ ದೈವದ ವಿಚಾರವನ್ನೇ ಮಗ್ಗಿ ಮೊಂತೇರೋ ಮಾತನಾಡುತ್ತಿದ್ದರು ಎಂದು ಸ್ಥಳೀಯರು ಪ್ರತಿಕ್ರಿಯಿಸಿದ್ದಾರೆ. ಸ್ಥಳಕ್ಕೆ ಕೊಣಾಜೆ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ವಿಮಾನ ತಪ್ಪುವುದನ್ನು ತಡೆಯಲು ಬಾಂಬ್​ ಕರೆ ಮಾಡಿ ಸಿಕ್ಕಿಬಿದ್ದ ಪ್ರಯಾಣಿಕ: ಹೈದರಾಬಾದ್​ ನಿಲ್ದಾಣದಲ್ಲಿ ಆತಂಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.