ಉಳ್ಳಾಲ: ತಲಪಾಡಿ ಆರ್‌ಟಿಒ ಕಚೇರಿಗೆ ಲೋಕಾಯುಕ್ತ ಎಸ್.ಪಿ ಲಕ್ಷ್ಮೀ ಗಣೇಶ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಸತತ ಮೂರು ಗಂಟೆಗಳಿಗೂ ಹೆಚ್ಚು ಕಾಲ ದಾಖಲೆಗಳನ್ನು ಪರಿಶೀಲಿಸಿದೆ. ಕೇರಳ - ಕರ್ನಾಟಕ ಗಡಿಭಾಗದ ಮೇಲಿನ ತಲಪಾಡಿಯಲ್ಲಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ, ತಲಪಾಡಿ ತನಿಖಾ ಠಾಣೆಯಲ್ಲಿ ತನಿಖೆ ನಡೆದಿದೆ. ನಿನ್ನೆ(ಸೋಮವಾರ) ಸಂಜೆ 7 ಗಂಟೆಯ ಸುಮಾರಿಗೆ ತನಿಖಾ ತಂಡ ಆಗಮಿಸಿದ್ದು, ರಾತ್ರಿ 11 ರವರೆಗೂ ಚೆಕ್ ಪೋಸ್ಟ್ ಒಳಗೆ ದಾಖಲೆಗಳನ್ನು ಶೋಧಿಸಿದ್ದಾರೆ. ಲಾರಿ ಚಾಲಕರಿಂದ ಆರ್‌ಟಿಒ ಸಿಬ್ಬಂದಿ ಲಂಚ ಪಡೆಯುವ ಕುರಿತು ಸಾರ್ವಜನಿಕರು ದೂರು ನೀಡಿದ್ದರು.
ಇದನ್ನೂ ಓದಿ: ಆರ್‌ಟಿಒ ಚೆಕ್ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ