ETV Bharat / state

ಕಡಲಿಗೆ ಇಳಿಯಲಿವೆ 14 ಸಾವಿರ ನಾಡ ದೋಣಿಗಳು.. ಸಚಿವ ಕೋಟ ಶ್ರೀನಿವಾಸ ಪೂಜಾರಿ

ಲಾಕ್​ಡೌನ್​ ಘೋಷಣೆಯಿಂದಾಗಿ ಯಾವುದೇ ದೋಣಿಗಳು ಕಡಲಿಗೆ ಇಳಿದಿರಲಿಲ್ಲ. ಈಗ ಮೀನುಗಾರಿಕೆಗೆ ಲಾಕ್​ಡೌನ್​ ಸಡಿಲಿಕೆ ಮಾಡಿದ್ದು, 14 ಸಾವಿರ ನಾಡ ದೋಣಿಗಳು ಕಡಲಿಗೆ ಇಳಿಯಲಿವೆ ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

author img

By

Published : Apr 11, 2020, 8:25 PM IST

Updated : Apr 11, 2020, 10:04 PM IST

Lockdown rule relaxation for fishing
ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು : ಕೊರೊನಾ ಸೋಂಕಿನ ಭೀತಿಯಿಂದ ಸಂಪೂರ್ಣ ಸ್ಥಗಿತಗೊಂಡಿದ್ದ ಕಡಲ ಮೀನುಗಾರಿಕೆಯನ್ನು ಮತ್ತೆ ಆರಂಭಿಸಲು ಸೂಚಿಸಲಾಗಿದೆ. ಆದ್ದರಿಂದ ರಾಜ್ಯದ 14 ಸಾವಿರ ನಾಡ ದೋಣಿಗಳನ್ನು ಕಡಲಿಗಿಳಿಸಲಿದ್ದೇವೆ ಎಂದು ಮೀನುಗಾರಿಕೆ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Lockdown rule relaxation for fishing
ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು, ಮೀನುಗಾರರ ಅಭಿಪ್ರಾಯಗಳನ್ನು ಸಂಗ್ರಹಿಸುವ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮೀನುಗಾರಿಕೆ ನಡೆಸಲು ಅವಕಾಶ ನೀಡುವ ಬಗ್ಗೆ ರಾಜ್ಯ ಸರ್ಕಾರ ಯೋಜನೆ ನಡೆಸಿದೆ. ಈ ವಿಚಾರದ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಾಡದೋಣಿಗಳೆಂದರೆ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ದೊಡ್ಡ ಮಟ್ಟದ ಯಾಂತ್ರಿಕ ದೋಣಿಗಳಲ್ಲ. ಇವು ಕೇವಲ 4-5 ಜನರು ಮೀನುಗಾರಿಕೆ ನಡೆಸುವ ದೋಣಿ‌ಗಳಾಗಿವೆ. ಈ ನಾಡದೋಣಿಗಳು ಬೆಳಗ್ಗೆ ಹೋದರೆ ಸಂಜೆ ಮರಳುತ್ತವೆ. ನಮ್ಮ ರಾಜ್ಯದಲ್ಲಿ ಉಳ್ಳಾಲದಿಂದ ಕಾರವಾರದವರೆಗೆ ಸುಮಾರು 14 ಸಾವಿರ ನಾಡದೋಣಿಗಳಿವೆ. ಏಪ್ರಿಲ್ 15ರವರೆಗೆ ಮೀನುಗಾರಿಕೆ ಸ್ಥಗಿತಗೊಂಡಿತ್ತು. ಆದರೆ, ಇಂದು ಅನುಮತಿ ದೊರಕಿರುವ ಹಿನ್ನೆಲೆ ಆದಷ್ಟು ಬೇಗ ಈ ನಾಡದೋಣಿಗಳನ್ನು ಕಡಲಿಗಿಳಿಸುವ ಆಲೋಚನೆ ಇದೆ ಎಂದರು.

ಒಳನಾಡು ಮೀನುಗಾರಿಕೆಗೆ ಯಾವುದೇ ನಿರ್ಬಂಧ ಹೇರಲಾಗಿರಲಿಲ್ಲ. ಆಯಾ ಪ್ರದೇಶದ ಜಲಾಶಯ, ಸರೋವರ, ಕೆರೆಗಳಲ್ಲಿ ಮೀನುಗಾರಿಕೆ ನಡೆಸಲು ಅವಕಾಶ ಇತ್ತು. ಆದರೆ, ಕೊರೊನಾದ ಹಿನ್ನೆಲೆ ಇದೂ ಕೂಡ ಸ್ಥಗಿತಗೊಂಡಿತ್ತು. ಈಗ ನಿರ್ಬಂಧ ಸಡಿಲಿಕೆ ಪರಿಣಾಮ ಒಳನಾಡ ಮೀನುಗಾರಿಕೆ ಕೂಡಾ ವಿನಾಯಿತಿ ದೊರೆಯಲಿದೆ ಎಂದರು. ಕೇರಳದಿಂದ ದೋಣಿಗಳ ಮೂಲಕ ಬರುವವರ ಬಗ್ಗೆ ಕಣ್ಗಾವಲು ಇರಿಸಲಾಗಿದೆ. ಆದರೆ, ಕೊರೊನಾಕ್ಕಿಂತ ಮೊದಲೇ ಕೇರಳಕ್ಕೆ ಹೋದ ರಾಜ್ಯದ ದೋಣಿಗಳು ಹಾಗೂ ಕೇರಳದಿಂದ ಇಲ್ಲಿಗೆ ಬಂದಿರುವ ದೋಣಿಗಳ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳುವುದು ಎಂದು ಯೋಚನೆ ಮಾಡಲಾಗುತ್ತಿದೆ ಎಂದರು.

Last Updated : Apr 11, 2020, 10:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.