ETV Bharat / state

ಮನೆ ಸರಿಯಿಲ್ಲ, ಶೌಚಾಲಯ ಇಲ್ಲ ; 60 ವರ್ಷಗಳಿಂದ ಕತ್ತಲೆಯಲ್ಲೇ ಬದುಕು

ಭಾಗಿ ಎಂಬುವರ ಮೊಮ್ಮಗ ದೀಪದ ಬೆಳಕಿನಲ್ಲಿ ಓದಿ ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿ ಇದೀಗ ಪ್ರಥಮ ಪಿಯುಸಿ ಓದುತ್ತಿದ್ದಾನೆ. ಇವತ್ತಿಗೂ ಮನೆಯಲ್ಲಿ ಎಣ್ಣೆ ದೀಪದ ಬೆಳಕಿನಲ್ಲೇ ಇವರ ಓದು ನಡೆಯುತ್ತಿದೆ. ಪ್ರಸ್ತುತ ಸೀಮೆ ಎಣ್ಣೆ ಸಿಗದ ಹಿನ್ನೆಲೆ ಅವರು ಡೀಸೆಲ್ ತಂದು ದೀಪ ಬೆಳಗಿಸುತ್ತಿದ್ದಾರೆ..

Life with darknewss
ಕತ್ತಲೆಯಲ್ಲೇ ಬದುಕು
author img

By

Published : Aug 3, 2020, 5:35 PM IST

ಪುತ್ತೂರು(ದಕ್ಷಿಣ ಕನ್ನಡ) : ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸಲು ಎಷ್ಟೇ ಪ್ರಯತ್ನಗಳು ನಡೆದರೂ ಎಷ್ಟೋ ಕುಟುಂಬಗಳು ಶೌಚಕ್ಕೆ ಇನ್ನೂ ಬಯಲನ್ನೇ ನೆಚ್ಚಿವೆ. ಇದಕ್ಕೆ ಪುತ್ತೂರು ಹೊರತಾಗಿಲ್ಲ. ನಗರಸಭೆ ವ್ಯಾಪ್ತಿಯಲ್ಲೇ ಜನ ಬೆಳಗ್ಗೆ ಚೊಂಬು ಹಿಡಿದು ಬಯಲು ಬಹಿರ್ದೆಸೆಗೆ ಹೋಗುತ್ತಿದ್ದಾರೆ ಅಂದರೆ ಅಚ್ಚರಿಯಾಗುತ್ತದೆ.

ಇದು ಸತ್ಯ. ಜನರ ಅರಿವಿನ ಕೊರತೆಗಿಂತ ಇಲಾಖಾಧಿಕಾರಿಗಳ ಮುತುವರ್ಜಿ ಅಗತ್ಯ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅರ್ಜಿ ಹಿಡಿದು ಇಲಾಖೆ ಸುತ್ತಿದರೂ ಸರ್ಕಾರದಿಂದ ಯಾವುದೇ ಪ್ರಯೋಜನ ಲಭಿಸಿಲ್ಲ. ಶೌಚಾಲಯ ಸೌಲಭ್ಯ ಈ ಭಾಗದ ಜನರ ಪಾಲಿಗೆ ಲಭಿಸಿಲ್ಲ.

ನಗರಸಭೆ ವ್ಯಾಪ್ತಿಯ ಪಂಜಳದಲ್ಲಿ ಪರಿಶಿಷ್ಟ ಜಾತಿಯವರ ಮೂರು ಮನೆಗಳಿಗೆ, ಇನ್ನೂ ಮನೆಯ ವ್ಯವಸ್ಥೆಯೇ ಆಗಿಲ್ಲ. ಸರ್ಕಾರದ ಹಲವು ಯೋಜನೆಗಳಿದ್ದರೂ ಈ ಭಾಗದ ಭಾಗಿ, ರಜು ಮತ್ತು ಅನಂತ ಎಂಬುವರ ಮೂರು ಮನೆಗಳಿಗೆ ಈ ಯೋಜನೆಗಳು ಮರೀಚಿಕೆಯಾಗಿವೆ.

ಕಳೆದ 60 ವರ್ಷಗಳಿಂದ ಇವರು ವಿದ್ಯುತ್ ದೀಪವನ್ನೇ ನೋಡಿಲ್ಲ. ಇದರ ಜೊತೆ ಸರ್ಕಾರದ ಉಚಿತ ಶೌಚಾಲಯ ಯೋಜನೆಯೂ ಇವರಿಗೆ ಲಭಿಸಿಲ್ಲ. ಹೀಗಾಗಿ ಇಂದಿಗೂ ಕೂಡ ಈ ಮೂರು ಮನೆಯವರು ಬಹಿರ್ದೆಸೆಗೆ ಬಯಲನ್ನೇ ಅವಲಂಬಿಸಿದ್ದಾರೆ.

ಪಂಜಳ ನಿವಾಸಿ ಭಾಗಿ ಎಂಬುವರ ಪತಿ ಮೋನಪ್ಪ ಮುಡೋಡಿ ನಿಧನರಾಗಿದ್ದು, ಅವರ ಇಬ್ಬರು ಪುತ್ರಿಯರು ಮನೆಯಲ್ಲೇ ಇದ್ದಾರೆ. ಇವರಿಗೆ ಸರ್ಕಾರದಿಂದ ಸಿಗುವ ಯಾವುದೇ ಮೂಲಸೌಕರ್ಯಗಳು ಮಂಜೂರಾಗಿಲ್ಲ. ಆರ್ಯಪು ಗ್ರಾಮದ ಸರ್ವೆ ನಂಬರ್​ 525/2ರಲ್ಲಿ ಸ್ಥಳ ಮಂಜೂರಾಗಿದ್ರೂ, ಕಳೆದ 60 ವರ್ಷಗಳಿಂದ ಈ ಕುಟುಂಬಕ್ಕೆ ಸರ್ಕಾರದ ಸೌಲಭ್ಯ ಲಭಿಸಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

Life with darknewss
ಮುರುಕಲು ಮನೆಗಳು

ತಿಂಗಳೊಳಗೆ ಪ್ರತಿಭಟನೆ : ಪರಿಶಿಷ್ಟ ಜಾತಿಯ ಕುಟುಂಬಕ್ಕೆ ಆಗುವ ಅನ್ಯಾಯದ ವಿರುದ್ಧ ಹೋರಾಡುವ ಕುರಿತು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿರುವ ಪರಿಶಿಷ್ಟ ಜಾತಿಯ ಕುಟುಂಬಸ್ಥರ ಮನೆ ಬೀಳುವ ಸ್ಥಿತಿಯಲ್ಲಿದೆ. ಮಳೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ತರ್ಪಾಲು ಹೊದಿಸಿದ್ದಾರೆ. ನಮಗೆ ಮನೆ, ವಿದ್ಯುತ್, ಶೌಚಾಲಯ ಒದಗಿಸಿಕೊಡಿ ಎಂದು ಹಲವು ಬಾರಿ ನಗರಸಭೆಗೆ ಮನವಿ ಮಾಡಿದ್ದಾರೆ. ಇವರ ಅರ್ಜಿಯನ್ನು ನಗರಸಭೆ ತಿರಸ್ಕರಿಸಿದೆ. ನಗರಸಭೆಯಲ್ಲಿ ಅರ್ಜಿ ಸ್ವೀಕರಿಸಿದರೂ ನಾಳೆ ಬನ್ನಿ ಎಂದು ದಿನ ದೂಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಚಿಮಿಣಿ ಬೆಳಕಿನಲ್ಲಿ ಓದು : ಭಾಗಿ ಎಂಬುವರ ಮೊಮ್ಮಗ ದೀಪದ ಬೆಳಕಿನಲ್ಲಿ ಓದಿ ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿ ಇದೀಗ ಪ್ರಥಮ ಪಿಯುಸಿ ಓದುತ್ತಿದ್ದಾನೆ. ಇವತ್ತಿಗೂ ಮನೆಯಲ್ಲಿ ಎಣ್ಣೆ ದೀಪದ ಬೆಳಕಿನಲ್ಲೇ ಇವರ ಓದು ನಡೆಯುತ್ತಿದೆ. ಪ್ರಸ್ತುತ ಸೀಮೆ ಎಣ್ಣೆ ಸಿಗದ ಹಿನ್ನೆಲೆ ಅವರು ಡೀಸೆಲ್ ತಂದು ದೀಪ ಬೆಳಗಿಸುತ್ತಿದ್ದಾರೆ.

ಈ ಕುಟುಂಬಗಳ ಮನವಿಯನ್ನು ಜಿಲ್ಲಾಧಿಕಾರಿ, ಎಸ್​ಪಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಮಂಗಳೂರು, ಸಹಾಯಕ ಕಮಿಷನರ್ ಪುತ್ತೂರು ಹಾಗೂ ಪುತ್ತೂರು ತಹಶೀಲ್ದಾರ್​ಗೆ ಸಲ್ಲಿಸಲಿದ್ದು, ಸೌಲಭ್ಯ ವಂಚಿತರಾದ ಭಾಗಿ, ರಾಜು ಮತ್ತು ಅನಂತ ಕುಟುಂಬಕ್ಕೆ ನೂತನ ಶೌಚಾಲಯ, ಹೊಸ ಮನೆ ಕಟ್ಟಲು ನಗರ ಪಂಚಾಯತ್ ವ್ಯಾಪ್ತಿ ಅನುದಾನ ಒದಗಿಸಿ ಕೊಡಬೇಕು. ಅಲ್ಲದೆ ತಕ್ಷಣ ಮನೆಗೆ ವಿದ್ಯುತ್ ಸಂಪರ್ಕ ಒದಗಿಸಬೇಕು. ನಮ್ಮ ಬೇಡಿಕೆಗಳು ಮುಂದಿನ ಒಂದು ತಿಂಗಳಲ್ಲಿ ಈಡೇರದಿದ್ದರೆ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದು ಆನಂದ ಬೆಳ್ಳಾರೆ ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.