ಕಡಬ: ಸಕಾಲ ಸೇವೆಗಳ ಅಧಿ ನಿಯಮದಡಿ ನಿಗದಿತ ಕಾಲಮಿತಿಯಲ್ಲಿ ನಾಗರಿಕರಿಗೆ ಉತ್ತಮ ಸೇವೆ ಒದಗಿಸಲು ಕರ್ತವ್ಯಪ್ರಜ್ಞೆ ಮೆರೆದ ಕಡಬದ ಉಪ ತಹಶಿಲ್ದಾರ್ ನವ್ಯ ಅವರು ಇಲಾಖೆಯ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸೆಪ್ಟಂಬರ್ ತಿಂಗಳಲ್ಲಿ ನಿಗದಿತ ಸಮಯದೊಳಗೆ ನಾಗರಿಕರಿಗೆ ಸುಮಾರು 383 ಸೇವೆಗಳನ್ನು ಕಾಲಮಿತಿಯಲ್ಲಿ ಸಕಾಲ ಸೇವೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಸಕಾಲ ಮಿಷನ್ನಿಂದ ಪ್ರಶಂಸಾ ಪತ್ರವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನೀಡಿದ್ದಾರೆ. ವಿವಿಧ ಇಲಾಖೆಯಲ್ಲಿ ನಿರಂತರವಾಗಿ ದುಡಿಯುವ ಸರ್ಕಾರಿ ಅಧಿಕಾರಿಗಳ ಸೇವೆಯನ್ನು ಅವಲೋಕಿಸಿ ಪ್ರಶಂಸೆ ವ್ಯಕ್ತಪಡಿಸಿದರೆ ಇನ್ನಷ್ಟು ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.