ETV Bharat / state

ಮಹಜರಿಗೆ ಹೋದ ಲೇಡಿ ಇನ್ಸ್ ಪೆಕ್ಟರ್​ಗೆ ವಕೀಲನಿಂದ ಆವಾಜ್​​​!... ವಿಡಿಯೋ ವೈರಲ್

ಸ್ಥಳ ಮಹಜರಿಗೆ ಬಂದ ಪೊಲೀಸ್ ಇನ್ಸ್​ಪೆಕ್ಟರ್ ಮತ್ತು ಸಿಬ್ಬಂದಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

author img

By

Published : Mar 16, 2021, 4:35 AM IST

Updated : Mar 16, 2021, 9:15 AM IST

ಪೊಲೀಸ್​ಗೆ ವಕೀಲನಿಂದ ಬೆದರಿಕೆ
ಪೊಲೀಸ್​ಗೆ ವಕೀಲನಿಂದ ಬೆದರಿಕೆ

ಮಂಗಳೂರು: ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರಿಗೆ ಹೋದ ಹಾಸನ ಜಿಲ್ಲೆಯ ಮಹಿಳಾ ಇನ್ಸ್ ಪೆಕ್ಟರ್​ಗೆ ಆರೋಪಿ ಪರ ವಕೀಲರು ಕಮೀಷನರ್​ಗೆ ಹೇಳಿ ಸಸ್ಪೆಂಡ್ ಮಾಡಿಸುವೆ ಎಂದು ಬೆದರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಅಪರಾಧ ಪ್ರಕರಣವೊಂದರಲ್ಲಿ ಸ್ಥಳ ಮಹಜರು ನಡೆಸಲು ಹಾಸನ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್, ಮಂಗಳೂರಿನ ಕದ್ರಿ ಪೊಲೀಸರ ಸಹಕಾರದೊಂದಿಗೆ ಮಂಗಳೂರಿನ ಅಪಾರ್ಟ್‌ಮೆಂಟ್​ನ 404ನೇ ನಂಬರಿನ ಫ್ಲಾಟ್​​ಗೆ ಹೋಗಿದ್ದರು. ಇದು ಆರೋಪಿ ಮರ್ವಿನ್ ಜರಾರ್ಡ್ ಸಾವಿಯೋ ಸೀಕ್ವೆರಾ ವಾಸವಾಗಿದ್ದ ನಿವಾಸವಾಗಿತ್ತು.

ವಕೀಲನಿಂದ ಪೊಲೀಸ್ ಇನ್ಸ್​ಪೆಕ್ಟರ್​ಗೆ ಬೆದರಿಕೆ

ಪೊಲೀಸ್ ಇನ್ಸ್​ಪೆಕ್ಟರ್ ಸ್ಥಳಕ್ಕೆ ತೆರಳಿದ ಸಂದರ್ಭದಲ್ಲಿ ಆರೋಪಿ ಮರ್ವಿನ್ ಜೆರಾರ್ಡ್ ಅವರ ತಾಯಿ ಐರಿನ್ ಸೀಕ್ವೆರಾ ಮತ್ತು ಆರೋಪಿ ಪರ ವಕೀಲ ಪ್ರವೀಣ್ ಪಿಂಟೋ ಅವರು ಬಾಯಿಗೆ ಬಂದಂತೆ ಏರುಧ್ವನಿಯಲ್ಲಿ, ಏಕವಚನದಲ್ಲಿ ಬೈದು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೆ ಪೊಲೀಸ್ ಕಮೀಷನರ್​ಗೆ ಹೇಳಿ ಸಸ್ಪೆಂಡ್ ಮಾಡಿಸುವೆ ಎಂದು ಹೇಳಿ ಯಾರಿಗೋ ಫೋನ್ ಮಾಡಿ ಮಾತಾಡಿದ್ದಾರೆ. ಈ ವಿಡಿಡೋ ವೈರಲ್ ಆಗಿದೆ.

ಸ್ಥಳ ಮಹಜರಿಗೆ ಬಂದ ಪೊಲೀಸ್ ಇನ್ಸ್​ಪೆಕ್ಟರ್ ಮತ್ತು ಸಿಬ್ಬಂದಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರಿಗೆ ಹೋದ ಹಾಸನ ಜಿಲ್ಲೆಯ ಮಹಿಳಾ ಇನ್ಸ್ ಪೆಕ್ಟರ್​ಗೆ ಆರೋಪಿ ಪರ ವಕೀಲರು ಕಮೀಷನರ್​ಗೆ ಹೇಳಿ ಸಸ್ಪೆಂಡ್ ಮಾಡಿಸುವೆ ಎಂದು ಬೆದರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಅಪರಾಧ ಪ್ರಕರಣವೊಂದರಲ್ಲಿ ಸ್ಥಳ ಮಹಜರು ನಡೆಸಲು ಹಾಸನ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್, ಮಂಗಳೂರಿನ ಕದ್ರಿ ಪೊಲೀಸರ ಸಹಕಾರದೊಂದಿಗೆ ಮಂಗಳೂರಿನ ಅಪಾರ್ಟ್‌ಮೆಂಟ್​ನ 404ನೇ ನಂಬರಿನ ಫ್ಲಾಟ್​​ಗೆ ಹೋಗಿದ್ದರು. ಇದು ಆರೋಪಿ ಮರ್ವಿನ್ ಜರಾರ್ಡ್ ಸಾವಿಯೋ ಸೀಕ್ವೆರಾ ವಾಸವಾಗಿದ್ದ ನಿವಾಸವಾಗಿತ್ತು.

ವಕೀಲನಿಂದ ಪೊಲೀಸ್ ಇನ್ಸ್​ಪೆಕ್ಟರ್​ಗೆ ಬೆದರಿಕೆ

ಪೊಲೀಸ್ ಇನ್ಸ್​ಪೆಕ್ಟರ್ ಸ್ಥಳಕ್ಕೆ ತೆರಳಿದ ಸಂದರ್ಭದಲ್ಲಿ ಆರೋಪಿ ಮರ್ವಿನ್ ಜೆರಾರ್ಡ್ ಅವರ ತಾಯಿ ಐರಿನ್ ಸೀಕ್ವೆರಾ ಮತ್ತು ಆರೋಪಿ ಪರ ವಕೀಲ ಪ್ರವೀಣ್ ಪಿಂಟೋ ಅವರು ಬಾಯಿಗೆ ಬಂದಂತೆ ಏರುಧ್ವನಿಯಲ್ಲಿ, ಏಕವಚನದಲ್ಲಿ ಬೈದು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೆ ಪೊಲೀಸ್ ಕಮೀಷನರ್​ಗೆ ಹೇಳಿ ಸಸ್ಪೆಂಡ್ ಮಾಡಿಸುವೆ ಎಂದು ಹೇಳಿ ಯಾರಿಗೋ ಫೋನ್ ಮಾಡಿ ಮಾತಾಡಿದ್ದಾರೆ. ಈ ವಿಡಿಡೋ ವೈರಲ್ ಆಗಿದೆ.

ಸ್ಥಳ ಮಹಜರಿಗೆ ಬಂದ ಪೊಲೀಸ್ ಇನ್ಸ್​ಪೆಕ್ಟರ್ ಮತ್ತು ಸಿಬ್ಬಂದಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Mar 16, 2021, 9:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.