ETV Bharat / state

ಮಂಗಳೂರಿನಲ್ಲಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ: ಕೊಂಕಣ ಮಾರ್ಗ ತಾತ್ಕಾಲಿಕ ಬಂದ್​! - ಕೇರಳದಿಂದ ಮುಂಬಯಿ ಸಂಪರ್ಕಿಸುವ ರೈಲ್ವೆ ಹಳಿಯಲ್ಲಿ ಮಣ್ಣು

ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಿಂದ ತೋಕೂರು ರೈಲ್ವೆ ನಿಲ್ದಾಣದ ನಡುವಣದ ಕುಲಶೇಖರ ಸುರಂಗ ಬಳಿ ಮಳೆಗೆ ಗುಡ್ಡ ಕುಸಿದು ರೈಲ್ವೆ ಹಳಿ ಮೇಲೆ ಬಿದ್ದಿದೆ. ಪರಿಣಾಮ ರೈಲ್ವೆ ಸಂಚಾರ ಅಸ್ತವ್ಯಸ್ತವಾಗಿದೆ.

Landslide on railway track in mangalore
ಮಂಗಳೂರು ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ
author img

By

Published : Jul 16, 2021, 1:47 PM IST

Updated : Jul 16, 2021, 2:05 PM IST

ಮಂಗಳೂರು: ಮಂಗಳೂರಿನ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತವಾಗಿ ರೈಲ್ವೆ ಸಂಚಾರ ಅಸ್ತವ್ಯಸ್ತವಾಗಿದೆ. ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಿಂದ ತೋಕೂರು ರೈಲ್ವೆ ನಿಲ್ದಾಣದ ನಡುವೆ ಈ ಘಟನೆ ಸಂಭವಿಸಿದೆ.

ಮಂಗಳೂರು ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ - ಸಂಚಾರ ಅಸ್ತವ್ಯಸ್ತ!

ಕುಲಶೇಖರ ಸುರಂಗ ಬಳಿ ಮಳೆಯಿಂದಾಗಿ ಗುಡ್ಡ ಕುಸಿದು ರೈಲ್ವೆ ಹಳಿ ಮೇಲೆ ಬಿದ್ದಿದೆ. ಭಾರಿ ಪ್ರಮಾಣದ ಮಣ್ಣು ರೈಲ್ವೆ ಹಳಿ ಮೇಲೆ ಬಿದ್ದಿರುವುದರಿಂದ ಈ ಹಳಿಯಲ್ಲಿ ಸಂಚರಿಸುವ ರೈಲುಗಳ ಸಂಚಾರಕ್ಕೆ ತೊಡಕಾಗಿದೆ. ಕೇರಳದಿಂದ ಮುಂಬೈ ಸಂಪರ್ಕಿಸುವ ರೈಲ್ವೆ ಹಳಿಯಲ್ಲಿ ಮಣ್ಣು ಬಿದ್ದು, ಕೇರಳ ಮುಂಬೈ ನಡುವೆ ಸಂಚರಿಸುವ ರೈಲುಗಳ ಸಂಚಾರಕ್ಕೆ ಸಮಸ್ಯೆಯಾಗಿದೆ.

ರೈಲ್ವೆ ಹಳಿಯಲ್ಲಿ ಬಿದ್ದಿರುವ ಮಣ್ಣು ತೆರವಿನ ಬಳಿಕವಷ್ಟೇ ರೈಲು ಸಂಚಾರ ಪುನರಾರಂಭವಾಗಲಿದೆ.

Last Updated : Jul 16, 2021, 2:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.