ETV Bharat / state

ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು-ಬದಲು ಪ್ರಕರಣ : ಡಿಎನ್‌ಎ ಪರೀಕ್ಷೆಗೆ ನ್ಯಾಯಾಲಯ ಅನುಮತಿ - ಲೇಡಿಗೋಷನ್ ಆಸ್ಪತ್ರೆಯ ಮಗು ಅದಲು-ಬದಲಾದ ವಿಚಾರ

ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆರಿಗೆಯ ವೇಳೆ ತಮಗೆ ಹುಟ್ಟಿರುವುದು ಹೆಣ್ಣು ಮಗು ಎಂದಿದ್ದರು. ಅಲ್ಲದೆ ದಾಖಲೆಯಲ್ಲಿ ಹೆಣ್ಣು ಮಗುವೆಂದೇ ನಮೂದಿಸಿ ಬಳಿಕ ಗಂಡು ಮಗುವನ್ನು ನೀಡಲಾಗಿದೆ ಎಂದು ಪೋಷಕರು ದೂರಿದ್ದಾರೆ‌.‌.

Lady Gotion hospital baby exchange case
ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು-ಬದಲು ಪ್ರಕರಣ
author img

By

Published : Oct 18, 2021, 10:05 PM IST

ಮಂಗಳೂರು : ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹುಟ್ಟಿದ ಹಸುಗೂಸು ಅದಲು ಬದಲು ಆಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗು ಹಾಗೂ ತಂದೆ-ತಾಯಿಯ ಡಿಎನ್‌ಎ ಪರೀಕ್ಷೆಗೆ ನ್ಯಾಯಾಲಯ ಅನುಮತಿ ನೀಡಿದೆ.

ತಮ್ಮ ಮಗು ಲೇಡಿಗೋಷನ್ ಆಸ್ಪತ್ರೆಯಲ್ಲಿ ಅದಲು ಬದಲಾಗಿದೆ ಎಂದು ಆರೋಪಿಸಿ ಕುಂದಾಪುರ ನಿವಾಸಿ ಮುಸ್ತಫಾ ಎಂಬುವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ನ್ಯಾಯಾಲಯ ನೀಡಿರುವ ಆದೇಶದನ್ವಯ ಅ.19ರಂದು ಮಗು ಹಾಗೂ ಪೋಷಕರ ಡಿಎಎನ್ ಪರೀಕ್ಷೆ ನಡೆಯಲಿದೆ.

ಬಳಿಕ ಇದರ ಸ್ಯಾಂಪಲ್‌ ಅನ್ನು ಹೈದರಾಬಾದ್ ಅಥವಾ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗುವುದು. ಮೂರು ತಿಂಗಳ ಒಳಗೆ ಇದರ ವರದಿ ಬರಲಿದೆ. ಈ ವರದಿಯ ಆಧಾರದಲ್ಲಿ ಮುಂದಿನ ತನಿಖೆ ನಡೆಯಲಿದೆ ಎಂದು ಬಂದರು ಪೊಲೀಸರು ತಿಳಿಸಿದ್ದಾರೆ.

ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆರಿಗೆಯ ವೇಳೆ ತಮಗೆ ಹುಟ್ಟಿರುವುದು ಹೆಣ್ಣು ಮಗು ಎಂದಿದ್ದರು. ಅಲ್ಲದೆ ದಾಖಲೆಯಲ್ಲಿ ಹೆಣ್ಣು ಮಗುವೆಂದೇ ನಮೂದಿಸಿ ಬಳಿಕ ಗಂಡು ಮಗುವನ್ನು ನೀಡಲಾಗಿದೆ ಎಂದು ಪೋಷಕರು ದೂರಿದ್ದಾರೆ‌.‌

ಮಗು ಅದಲು ಬದಲಾಗಿರುವ ಬಗ್ಗೆ ಅನುಮಾನಗೊಂಡ ಪೋಷಕರು, ನಗರದ ಬಂದರು ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಹೆರಿಗೆಯಾದಾಗ ಹೆಣ್ಣು ಮಗು.. ಪೋಷಕರ ಕೈಗೆ ಕೊಟ್ಟದ್ದು ಗಂಡು ಮಗು.. ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಎಡವಟ್ಟು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.