ETV Bharat / state

ಮಹಿಳಾ ಸಬಲೀಕರಣಕ್ಕೆ ಮಂಗಳೂರಿನಿಂದ ಕಚ್​ಗೆ ಹೊರಟಿದ್ದಾರೆ ಲೇಡಿ ಬೈಕ್ ರೈಡರ್ಸ್! - ಮಂಗಳೂರು ಲೇಡಿ ಬೈಕ್ ರೈಡರ್ಸ್

ಮಹಿಳಾ ಸಬಲೀಕರಣಕ್ಕಾಗಿ ಲೇಡಿ ಬೈಕ್ ರೈಡರ್ಸ್ ಮಂಗಳೂರಿನಿಂದ ಕಚ್​ಗೆ ಹೊರಟಿದ್ದಾರೆ.

Lady Bike Riders travelling, Lady Bike Riders travelling from Bangalore to Kutch, Mangalore Lady Bike Riders, Mangalore news, ಲೇಡಿ ಬೈಕ್ ರೈಡರ್ಸ್ ಪ್ರಯಾಣ, ಲೇಡಿ ಬೈಕ್ ರೈಡರ್ಸ್ ಮಂಗಳೂರಿನಿಂದ ಕಚ್​ಗೆ ಪ್ರಯಾಣ, ಮಂಗಳೂರು ಲೇಡಿ ಬೈಕ್ ರೈಡರ್ಸ್, ಮಂಗಳೂರು ಸುದ್ದಿ,
ಮಹಿಳಾ ಸಬಲೀಕರಣಕ್ಕೆ ಮಂಗಳೂರಿನಿಂದ ಕಚ್​ಗೆ ಹೊರಟಿದ್ದಾರೆ ಲೇಡಿ ಬೈಕ್ ರೈಡರ್ಸ್
author img

By

Published : Dec 25, 2021, 2:45 AM IST

Updated : Dec 25, 2021, 6:06 AM IST

ಮಂಗಳೂರು: ದೂರ ದೂರ ಬೈಕ್ ರೈಡ್ ಮಾಡುತ್ತಾ ಹೋಗುವ ನಾವು ಎಲ್ಲಾ ಕಡೆಗಳಲ್ಲಿ ನೋಡುತ್ತಿರುತ್ತೇವೆ. ಆದರೆ ನಾಲ್ವರು ಯುವತಿಯರೇ ಮಂಗಳೂರಿನಿಂದ ಕಚ್​ಗೆ ಸುಮಾರು 3,600 ಕಿ.ಮೀ. ದೂರ ಬೈಕ್ ರೈಡ್ ಮಾಡಲಿದ್ದಾರೆ. ಮಹಿಳಾ ಸಬಲೀಕರಣದ ಉದ್ದೇಶದಿಂದ "Ride To Run of Kutch" ಗೆ ರೈಡ್ ಮಾಡಲಿದ್ದಾರೆ.

ಮಹಿಳಾ ಸಬಲೀಕರಣಕ್ಕೆ ಮಂಗಳೂರಿನಿಂದ ಕಚ್​ಗೆ ಹೊರಟಿದ್ದಾರೆ ಲೇಡಿ ಬೈಕ್ ರೈಡರ್ಸ್

ನಿನ್ನೆ ಸಂಜೆ 4.30 ಹೊತ್ತಿಗೆ ಮಂಗಳೂರಿನ ಸರ್ಕ್ಯೂಟ್ ಹೌಸ್​ನಿಂದ ಪ್ರಯಾಣ ಬೆಳೆಸಿದ ನಾಲ್ವರು ಯುವತಿಯರು 11 ದಿವಸಗಳ ಪ್ರಯಾಣ ಮುಗಿಸಿ ಮಂಗಳೂರಿಗೆ ಮರಳಲಿದ್ದಾರೆ. ಕಚ್​​ನಲ್ಲಿ ನಡೆಯುವ ರನ್ ಉತ್ಸವದ ನಿಮಿತ್ತ ಈ ಪ್ರಯಾಣ ಬೆಳೆಸಿದ್ದಾರಂತೆ.

ಸಾಫ್ಟ್‌ವೇರ್ ಇಂಜಿನಿಯರ್​ಗಳಾದ ಕೃತಿ ಉಚ್ಚಿಲ್, ಅಪೂರ್ವ, ಮಂಗಳೂರಿನ ದೇವಿಕಾ ಸಾರೀಸ್ ಟೆಕ್ಸ್ ಟೈಲ್ ಮಾಲಕಿ ಪೂಜಾ ಜೈನ್, ಮೆಡಿಕಲ್ ರೆಪ್ ದಿವ್ಯಾ ಪೂಜಾರಿ ಕಚ್​ಗೆ ಪ್ರಯಾಣ ಬೆಳೆಸಿದ ನಾಲ್ವರು ಯುವತಿಯರು. ಇವರಲ್ಲಿ ಅಪೂರ್ವ ಹಾಗೂ ಪೂಜಾ ಜೈನ್ ವಿವಾಹಿತರು. ಅಪೂರ್ವರಿಗೆ ಆರು ವರ್ಷದ ಮಗಳಿದ್ದಾರಂತೆ.

ಓದಿ: ರಾಜಸ್ಥಾನದಲ್ಲಿ ವಾಯುಪಡೆ ಫೈಟರ್ ಜೆಟ್ ಮಿಗ್ -21 ಪತನ, ವಿಂಗ್ ಕಮಾಂಡರ್ ಮೃತ

ದಿನಕ್ಕೆ 500-600 ಕಿ.ಮೀ. ರೈಡ್ ಮಾಡುವ ಉದ್ದೇಶವನ್ನು ಹೊಂದಿರುವ ಬೈಕ್ ರೈಡರ್ಸ್ ಯುವತಿಯರು ಡಿ.29ರಂದು ಕಚ್ ಅನ್ನು ತಲುಪಲಿದ್ದಾರೆ. ಅಲ್ಲಿ ಒಂದು ದಿನವಿದ್ದು, ಮರುದಿನ ಮತ್ತೆ ಮಂಗಳೂರು ಕಡೆಗೆ ಪ್ರಯಾಣ ಬೆಳೆಸುತ್ತಾರಂತೆ.

Lady Bike Riders travelling, Lady Bike Riders travelling from Bangalore to Kutch, Mangalore Lady Bike Riders, Mangalore news, ಲೇಡಿ ಬೈಕ್ ರೈಡರ್ಸ್ ಪ್ರಯಾಣ, ಲೇಡಿ ಬೈಕ್ ರೈಡರ್ಸ್ ಮಂಗಳೂರಿನಿಂದ ಕಚ್​ಗೆ ಪ್ರಯಾಣ, ಮಂಗಳೂರು ಲೇಡಿ ಬೈಕ್ ರೈಡರ್ಸ್, ಮಂಗಳೂರು ಸುದ್ದಿ,
ಮಹಿಳಾ ಸಬಲೀಕರಣಕ್ಕೆ ಮಂಗಳೂರಿನಿಂದ ಕಚ್​ಗೆ ಹೊರಟಿದ್ದಾರೆ ಲೇಡಿ ಬೈಕ್ ರೈಡರ್ಸ್

ಮಂಗಳೂರು ಬೈಕರ್ನಿ ತಂಡ ಕಟ್ಟಿಕೊಂಡಿರುವ ಈ ಯುವತಿಯರು ಈಗಾಗಲೇ ರಾಮೇಶ್ವರ, ಕನ್ಯಾಕುಮಾರಿ, ಕೊಡೈಕೆನಾಲ್, ಊಟಿ ಮತ್ತಿತರರ ಕಡೆಗೆ ಬೈಕ್ ರೈಡ್ ಮಾಡಿದ್ದರಂತೆ. ಈ ಎಲ್ಲರೂ ಪರಸ್ಪರ ಬೈಕ್ ರೈಡ್ ಮಾಡಲು ಆರಂಭಿಸಿದ ಬಳಿಕವೇ ಪರಿಚಯವಾದವರಂತೆ. ಅದರಲ್ಲೂ ಅಪೂರ್ವ ಬೈಕ್ ರೈಡ್ ಮಾಡುತ್ತಿದ್ದರೂ ಇಷ್ಟೊಂದು ದೂರ ಮೊದಲ ಬಾರಿ ಬೈಕ್ ರೈಡ್ ಮಾಡುತ್ತಿದ್ದಾರಂತೆ. ಅದಕ್ಕಾಗಿಯೇ 2 ತಿಂಗಳ ಹಿಂದೆ ಬೈಕ್ ಖರೀದಿಸಿ ಪ್ರಾಕ್ಟೀಸ್ ಮಾಡಿದ್ದಾರಂತೆ. ತಮ್ಮ ಈ ಕಾರ್ಯಕ್ಕೆ ಮನೆಯವರ ಸಹಕಾರವೂ ಇದೆ ಎಂದು ಬೈಕ್ ರೈಡರ್ಸ್ ಯುವತಿಯರು ಹೇಳುತ್ತಾರೆ.

Last Updated : Dec 25, 2021, 6:06 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.