ETV Bharat / state

ಆಶಾದಾಯಕ: ಉನ್ನತ ಶಿಕ್ಷಣ ಪಡೆಯೋದ್ರಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ - higher education

ಹಿಂದಿನ ದಿನಮಾನಗಳಲ್ಲಿ ಒಂದಿಷ್ಟು ಕಟ್ಟುಪಾಡುಗಳಿಗೆ ತುತ್ತಾಗಿಯೋ, ಉತ್ತಮವಲ್ಲದ ಆರ್ಥಿಕ ಪರಿಸ್ಥಿತಿಯಿಂದಾಗಿಯೋ ಅದೆಷ್ಟೋ ಮಹಿಳೆಯರು ಶಿಕ್ಷಣದಿಂದ ದೂರವೇ ಉಳಿದಿದ್ದರು. ಆದ್ರೀಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ.

ladies getting higher education more than male students
ಆಶಾದಾಯಕ: ಉನ್ನತ ಶಿಕ್ಷಣ ಪಡೆಯೋದ್ರಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ
author img

By

Published : Apr 9, 2021, 7:21 PM IST

ಬೆಂಗಳೂರು/ ಮಂಗಳೂರು/ ವಿಜಯಪುರ/ಕಲಬುರಗಿ: ಯಾವುದೋ ಕಟ್ಟುಪಾಡುಗಳಿಗೆ ಸಿಲುಕಿ ಶಿಕ್ಷಣದಿಂದ ದೂರವೇ ಉಳಿದಿದ್ದ ಮಹಿಳೆ ಇದೀಗ ಪ್ರತಿಯೊಂದು ಕ್ಷೇತ್ರದಲ್ಲೂ ಛಾಪು ಮೂಡಿಸುತ್ತಿರುವುದು ಆಶಾದಾಯಕ ಬೆಳವಣಿಗೆ.

ಉನ್ನತ ಶಿಕ್ಷಣ ಪಡೆಯೋದ್ರಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ

ರಾಜ್ಯ ರಾಜಧಾನಿಯಲ್ಲೇ ನೋಡೋದಾದ್ರೆ ಉನ್ನತ ಶಿಕ್ಷಣ ಪಡೆಯೋದ್ರಲ್ಲಿ ಪುರುಷರಗಿಂತಲೂ ಮಹಿಳೆಯರದ್ದೇ ಮೇಲುಗೈ.

ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರ ಪೈಕಿ ಶೇ.68ರಷ್ಟು ವಿದ್ಯಾರ್ಥಿನಿಯರೇ ಇರುವುದು ಸಂತಸದ ವಿಚಾರ. 2014-15ರಲ್ಲಿ ಒಟ್ಟು 2,146 ವಿದ್ಯಾರ್ಥಿಗಳ ಪೈಕಿ 1,425 ಮಹಿಳಾ ವಿದ್ಯಾರ್ಥಿನಿಯರಿದ್ದರೆ, 2019-20 ರಲ್ಲಿ ಒಟ್ಟು 2,537 ವಿದ್ಯಾರ್ಥಿಗಳಲ್ಲಿ 1,745 ವಿದ್ಯಾರ್ಥಿನಿಯರಿದ್ದಾರೆ. ನಮಗೆ ಬೇಕಾದ ಪೂರಕ ವಾತಾವರಣ ಇರುವುದೇ ಇದಕ್ಕೆ ಕಾರಣ ಅಂತಾರೆ ಇಲ್ಲಿನ ವಿದ್ಯಾರ್ಥಿನಿಯರು.

ವಿಜಯಪುರ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪ್ರತಿ ವರ್ಷ ಸರಾಸರಿ 1,200 ರಿಂದ 1,250 ಮಹಿಳೆಯರು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಆ ಪೈಕಿ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರ ಸಂಖ್ಯೆಯೇ ಹೆಚ್ಚು ಅನ್ನೋದು ಹೆಮ್ಮೆಯ ವಿಚಾರ.

ಕಲಬುರಗಿ ಜಿಲ್ಲೆಯಲ್ಲಿ ಮಾತ್ರ ವಿದ್ಯಾರ್ಥಿನಿಯರ ಸಂಖ್ಯೆ ಕೊಂಚ ಕಡಿಮೆ. ಶಿಕ್ಷಣಕ್ಕೆ ಮತ್ತಷ್ಟು ಪೂರಕ ವಾತಾವರಣ ನಿರ್ಮಿಸಿದಲ್ಲಿ ಇಲ್ಲಿಯೂ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಳವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಇದನ್ನೂ ಓದಿ: ಅಗ್ನಿ ಶಮನಕ್ಕೆ ಬೇಕಿದೆ ಹೈಡ್ರೆಂಟ್ ಘಟಕಗಳು- ಕ್ಷಿಪ್ರ ಕಾರ್ಯಾಚರಣೆಗೆ ಸುಗಮ ರಸ್ತೆಗಳ ಅವಶ್ಯಕತೆ ಇದೆ

ಸಾಮಾನ್ಯವಾಗಿ ಪರೀಕ್ಷಾ ಫಲಿತಾಂಶದಲ್ಲಿ ಮುಂದಿರುವ ವಿದ್ಯಾರ್ಥಿನಿಯರೀಗ ಉನ್ನತ ಶಿಕ್ಷಣದಲ್ಲೂ ಸಾಧಿಸಿ ತೋರಿಸುತ್ತಿದ್ದಾರೆ. ಯಾವುದಕ್ಕೂ ಕಡಿಮೆ ಇಲ್ಲವೆಂಬುದನ್ನು ಸಾಬೀತು ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.