ETV Bharat / state

ನಿಮ್ಮ ಪ್ರಯಾಣ ಸುಖಕರವಾಗಿರಲಿ! ಕರಾವಳಿಗೆ ಬಂದ ಅಂಬಾರಿ ಡ್ರೀಮ್ ಕ್ಲಾಸ್ ಬಸ್

ಕೆಎಸ್​ಆರ್​ಟಿಸಿಯು ಮಂಗಳೂರು-ಪೂನಾ ಮಧ್ಯೆ ಸಂಚಾರಕ್ಕೆ ಅತ್ಯಾಧುನಿಕ ಅಂಬಾರಿ ಡ್ರೀಮ್‌ ಕ್ಲಾಸ್‌ ಮಲ್ಟಿಆ್ಯಕ್ಸೆಲ್‌ ಸ್ಲೀಪರ್‌ ಬಸ್​ಗಳನ್ನು ಬಿಟ್ಟಿದ್ದು,  ನಗರದ ಲಾಲ್​ಬಾಗ್​ನಲ್ಲಿರುವ ಬಸ್ ನಿಲ್ದಾಣದಲ್ಲಿ ಶಾಸಕ ವೇದವ್ಯಾಸ ಕಾಮತ್  ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

mangalore,ಮಂಗಳೂರು
author img

By

Published : Aug 3, 2019, 10:02 PM IST

ಮಂಗಳೂರು : ಕೆಎಸ್​ಆರ್​ಟಿಸಿ ಮಂಗಳೂರು-ಪೂನಾ ಮಧ್ಯೆ ಸಂಚಾರಕ್ಕೆ 'ಅಂಬಾರಿ ಡ್ರೀಮ್‌ ಕ್ಲಾಸ್‌’ ಮಲ್ಟಿ ಆ್ಯಕ್ಸೆಲ್‌ ಸ್ಲೀಪರ್‌ ಬಸ್‌​ಗಳನ್ನು ಬಿಟ್ಟಿದ್ದು, ಶಾಸಕ ವೇದವ್ಯಾಸ ಕಾಮತ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಕರಾವಳಿಗೆ ಬಂದ ಅಂಬಾರಿ ಡ್ರೀಮ್‌ ಕ್ಲಾಸ್‌ ಮಲ್ಟಿಆ್ಯಕ್ಸೆಲ್‌ ಸ್ಲೀಪರ್‌ ಬಸ್​ಗಳು

ಕೆಎಸ್‌ಆರ್‌ಟಿಸಿಯ ಇತರೆ ಸ್ಲೀಪರ್‌ ಬಸ್‌ಗಳಿಗಿಂತ ಈ ಬಸ್‌ ಹೆಚ್ಚು ಆರಾಮದಾಯಕ ಪ್ರಯಾಣ ಸೌಲಭ್ಯವನ್ನು ಹೊಂದಿದೆ. ಸುಲಭ ಚಾಲನೆಗಾಗಿ ವಿದ್ಯುನ್ಮಾನ ನಿಯಂತ್ರಿತ ಸಸ್ಪೆನ್ಶನ್ಸ್‌ ಹೊಂದಿದೆ. ನೋಡಲು ಆಕರ್ಷಕ ಹಾಗೂ ಮೋಹಕ ಒಳಾಂಗಣ, ವಿಸ್ತಾರವಾದ ಸ್ಥಳಾವಕಾಶ, ಪ್ರತ್ಯೇಕ ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌, ವಿಹಂಗಮ ನೋಟಕ್ಕೆ ವಿಶಾಲವಾದ ಕಿಟಕಿಗಳು, ಮೇಲ್ಛಾವಣಿ ಕಿಟಕಿ ಹಾಗೂ ಪ್ರಯಾಣಿಕರ ಅನುಕೂಲಕ್ಕೆ ತುರ್ತು ನಿರ್ಗಮನ ಬಾಗಿಲುಗಳು, ಅಗ್ನಿ ಅನಾಹುತಗಳನ್ನು ತಪ್ಪಿಸಲು ಫಯರ್‌ ಡಿಟೆಕ್ಷನ್‌ ಮತ್ತು ಸಪ್ರೆಶನ್‌ ಸಿಸ್ಟಂಗಳ ಜೋಡಣೆ, ಶಕ್ತಿಯುತ ಹಾಗೂ ಪರಿಣಾಮಕಾರಿ ಹವಾನಿಯಂತ್ರಕಗಳು ಇದರ ವಿಶೇಷತೆಯಾಗಿದೆ.

ಬೆಂಗಳೂರು, ಮೈಸೂರು ಹೊರತುಪಡಿಸಿ ಮಂಗಳೂರಿನಲ್ಲಿ ಮಾತ್ರ ಈ ಬಸ್‌ಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ಸುಮಾರು 1.10 ಕೋಟಿ ರು. ವೆಚ್ಚದ ಕೆಎಸ್‌ಆರ್‌ಟಿಸಿ ಅಂಬಾರಿ ಡ್ರೀಮ್‌ ಕ್ಲಾಸ್‌ ಬಸ್‌ಗಳು ಜಿಲ್ಲೆಗೆ ಬಂದಿದ್ದು, ಮಂಗಳೂರು-ಪೂನಾ ಮಧ್ಯೆ ಮೊದಲ ಓಡಾಟ ನಡೆಸಲಿವೆ. ಪ್ರಯಾಣ ದರವೂ ಕೈಗೆಟಕುವ ದರದಲ್ಲಿದ್ದು, ಕೇವಲ 1,350 ರೂ. ಮಾತ್ರ ಇರಲಿದೆ. ಈ ಬಸ್‌ ಉಡುಪಿ, ಕುಂದಾಪುರ, ಭಟ್ಕಳ, ಅಂಕೋಲಾ, ಬೆಳಗಾವಿ, ಕೊಲ್ಲಾಪುರ, ಸತಾರ ಮೂಲಕ ಪೂನಾ ತಲುಪಲಿದೆ. ಬಳಿಕ ಇದೇ ಮಾರ್ಗದಲ್ಲಿ ಮಂಗಳೂರಿಗೆ ಸಂಚರಿಸಲಿದೆ.

Intro:ಮಂಗಳೂರು: ಮಂಗಳೂರು-ಪೂನಾ ಮಧ್ಯೆ ಸಂಚಾರಕ್ಕೆ ಅಂಬಾರಿ ಡ್ರೀಮ್ ಕ್ಲಾಸ್ ಮಲ್ಟಿ ಆ್ಯಕ್ಸಿಲ್ ಸ್ಲೀಪರ್ ಬಸ್ ಗಳಿಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಇಂದು ಸಂಜೆ ನಗರದ ಲಾಲ್ ಬಾಗ್ ನಲ್ಲಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿದರು.

ಕೆಎಸ್ಸಾರ್ಟಿಸಿಯ ಇತರ ಬಸ್ ಗಳಿಗಿಂತ ಈ ಬಸ್ ಗಳು ಭಿನ್ನವಾಗಿದ್ದು, ಆರಾಮದಾಯಕವಾಗಿ ಪ್ರಯಾಣ ಬೆಳೆಸಬಹುದು. ಪ್ರಯಾಣ ಸುಖವಾಗಿರಿಸಲು ಪ್ರಯಾಣಿಗ ಸ್ನೇಹಿ ಕಿಟಕಿಗಳು, ಅಪಾಯದ ಸಂದರ್ಭ ತುರ್ತು ನಿಗಮ ಬಾಗಿಲು, ಮುಂಜಾಗ್ರತಾ ಉದ್ದೇಶದಿಂದ ಫೈರ್ ಡಿಟೆಕ್ಷನ್ ಗಳನ್ನು ಒಳಗೊಂಡಿವೆ.

Body:ಈ ಬಸ್ ಒಂದು ಕೋಟಿ ರೂ‌. ಮೌಲ್ಯ ಹೊಂದಿದ್ದು, ಬೆಂಗಳೂರು, ಮೈಸೂರು ಹೊರತುಪಡಿಸಿ ಮಂಗಳೂರಿನಲ್ಲಿ ಮಾತ್ರ ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ಮಂಗಳೂರಿನಿಂದ ಪೂನಾಕ್ಕೆ ಸಂಚರಿಸಲಿರುವ ಅಂಬಾರಿ ಡ್ರೀಮ್ ಕ್ಲಾಸ್ ಬಸ್ ಗಳು ಮಂಗಳೂರು-ಉಡುಪಿ- ಕುಂದಾಪುರ-ಭಟ್ಕಳ- ಹೊನ್ನಾವರ-ಅಂಕೋಲ- ಹುಬ್ಬಳ್ಳಿ-ಬೆಳಗಾವಿ ಮಾರ್ಗದ ಮೂಲಕ ಪೂನಾಕ್ಕೆ ಪ್ರಯಾಣ ಬೆಳೆಸಲಿವೆ. ಪ್ರಯಾಣ ದರವೂ ಕೈಗೆಟಕುವ ದರದಲ್ಲಿದ್ದು, ಕೇವಲ 1350 ರೂ. ಮಾತ್ರ ಇರಲಿದೆ. ಮಂಗಳೂರಿನಿಂದ ಸಂಜೆ 6 ಗಂಟೆಗೆ ಹೊರಟರೆ ಮರುದಿನ ಬೆಳಗ್ಗೆ 6.45ಕ್ಕೆ ಪೂನಾ ತಲುಪಲಿದೆ. ಪುನಃ ಸಂಜೆ 6.30ಕ್ಕೆ ಪೂನಾದಿಂದ ಹೊರಟರೆ ಮರುದಿನ ಬೆಳಗ್ಗೆ 9.15ಕ್ಕೆ ಮಂಗಳೂರು ತಲುಪಲಿದೆ‌.

Vishwanath Panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.