ETV Bharat / state

ಅಕ್ಟೋಬರ್ 21ರಿಂದ ಕೆಎಸ್​​ಆರ್​ಟಿಸಿ ದೀಪಾವಳಿ ಪ್ಯಾಕೇಜ್

ದೀಪಾವಳಿ ಸಂದರ್ಭದಲ್ಲಿ ವಿಶೇಷ ಪ್ಯಾಕೇಜ್ ಮಾಡಲು ಕೆಎಸ್​​ಆರ್​​ಟಿಸಿ ನಿರ್ಧರಿಸಿದೆ. ಇದಕ್ಕೆ ಜನರ ಬೇಡಿಕೆಯ ಬಸ್ ವ್ಯವಸ್ಥೆ ಮಾಡಲು ಕೆಎಸ್​​ಆರ್​​ಟಿಸಿ ಕ್ರಮ ವಹಿಸಿದೆ.

author img

By

Published : Oct 12, 2022, 10:49 PM IST

ksrtc-diwali-package-from-october-21
ಅಕ್ಟೋಬರ್ 21ರಿಂದ ಕೆಎಸ್​​ಆರ್​ಟಿಸಿ ದೀಪಾವಳಿ ಪ್ಯಾಕೇಜ್

ಮಂಗಳೂರು: ದಸರಾ ಪ್ರಯುಕ್ತ ನವದುರ್ಗೆ ದೇವಸ್ಥಾನ ಪ್ರವಾಸ ಪ್ಯಾಕೇಜ್ ನೀಡಿದ್ದ ಕೆಎಸ್​​ಆರ್​​ಟಿಸಿ ಅಕ್ಟೋಬರ್ 21ರಿಂದ 27ವರೆಗೆ ದೀಪಾವಳಿ ಪ್ಯಾಕೇಜ್ ಘೋಷಿಸಿದೆ. ದೀಪಾವಳಿ ಪ್ರಯುಕ್ತ ದೇಗುಲ ದರ್ಶನದ ವಿಶೇಷ ಪ್ಯಾಕೇಜ್ ಆರಂಭವಾಗಲಿದೆ. ಇದು ಅಕ್ಟೋಬರ್ 21ರಿಂದ 27ವರೆಗೆ ಇರಲಿದೆ ಎಂದು ಕೆಎಸ್​​ಆರ್​ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.

ದೀಪಾವಳಿ ಪ್ಯಾಕೇಜ್​ನಲ್ಲಿ ದೇಗುಲ ದರ್ಶನ ಮತ್ತು ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಇರಲಿದೆ. ಯಾವೆಲ್ಲಾ ಸ್ಥಳಗಳಿಗೆ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ.

ದಸರಾ ಸಂದರ್ಭದಲ್ಲಿ ಮಂಗಳೂರಿನಲ್ಲಿ ಕೆಎಸ್​ಆರ್​ಟಿಸಿಯಿಂದ ಒಂದೇ ದಿನದಲ್ಲಿ 9 ದುರ್ಗೆಯರ ದೇವಸ್ಥಾನಗಳಿಗೆ ಭೇಟಿ ನೀಡುವ ವಿಶೇಷ ಪ್ಯಾಕೇಜ್ ಆರಂಭಿಸಲಾಗಿತ್ತು. ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ದೀಪಾವಳಿ ಸಂದರ್ಭದಲ್ಲಿ ವಿಶೇಷ ಪ್ಯಾಕೇಜ್ ಮಾಡಲು ಕೆಎಸ್​​ಆರ್​​ಟಿಸಿ ನಿರ್ಧರಿಸಿದೆ. ಇದಕ್ಕೆ ಜನರ ಬೇಡಿಕೆಯ ಬಸ್ ವ್ಯವಸ್ಥೆ ಮಾಡಲು ಕೆಎಸ್​​ಆರ್​​ಟಿಸಿ ನಿರ್ಧರಿಸಿದೆ.

ಇದೇ ರೀತಿ ವೀಕೆಂಡ್ ಪ್ಯಾಕೇಜ್ ಟೂರ್ ಬಗ್ಗೆ ಚಿಂತನೆ ಇದೆ. ಇದರಲ್ಲಿ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡುವ ಯೋಜನೆಯನ್ನು ಕೆಎಸ್​​ಆರ್​​ಟಿಸಿ ಮಾಡುತ್ತಿದೆ.

ಇದನ್ನೂ ಓದಿ: ಗ್ರಾಪಂ​ಗೆ ವಿದ್ಯುತ್ ಬಿಲ್ ಹೊರೆ ತಪ್ಪಿಸಿದ ಸೋಲಾರ್​.. ಸೌರಶಕ್ತಿಯಿಂದಲೇ 88 ಮನೆಗಳಿಗೆ ನೀರು ಪೂರೈಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.